Friday, July 1, 2022

ಬೆಳ್ತಂಗಡಿ: ಅನ್ನಭಾಗ್ಯಕ್ಕೆ ಕನ್ನ ಹಾಕಿದ ದುರುಳರು-ಆರೋಪಿ ಬಂಧನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಿಂದ ಮೂಡಿಗೆರೆ ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಚಾರ್ಮಾಡಿಯ ಚೆಕ್ ಪೋಸ್ಟಿನಲ್ಲಿ ಧರ್ಮಸ್ಥಳ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ವಾಹನ ಚಾಲಕ ಮೂಡಿಗೆರೆ ನಿವಾಸಿ ಧನಂಜಯ್ ಬಂಧಿತ ಆರೋಪಿ.


ಪೊಲೀಸರು ಪಿಕಪ್ ನಲ್ಲಿದ್ದ 50 ಕೆಜಿ ತೂಕದ 59 ಪ್ಲಾಸ್ಟಿಕ್ ಚೀಲ ಅಕ್ಕಿ ಹಾಗೂ 25 ಕೆ.ಜಿ ತೂಕದ 14 ಚೀಲ ಅಕ್ಕಿ ಹೀಗೆ ಒಟ್ಟು 33 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಅಕ್ಕಿಯ ಮೌಲ್ಯ 49,500 ರೂ. ಎಂದು ಅಂದಾಜಿಸಲಾಗಿದೆ.

ಚಾರ್ಮಾಡಿ ಗೇಟಿನಲ್ಲಿ ಪೊಲೀಸರು ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ವಾಹನದಲ್ಲಿರುವ ಅಕ್ಕಿ ಅನ್ನಭಾಗ್ಯ ಯೋಜನೆಯ ಅಕ್ಕಿಯಂತೆ ಕಂಡು ಬಂದಿದ್ದು ಅನುಮಾನಗೊಂಡು ಚಾಲಕನನ್ನು ವಿಚಾರಣೆ ನಡೆಸಿದಾಗ ಚಾಲಕ ಇದನ್ನು ಒಪ್ಪಿಕೊಂಡಿದ್ದಾನೆ.

ಬಳಿಕ ಸ್ಥಳಕ್ಕೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಕರೆಸಲಾಗಿದ್ದು ಅವರು ಪರಿಶೀಲನೆ ನಡೆಸಿದಾಗ ಇದು ಮೇ ತಿಂಗಳ ಅನ್ನಭಾಗ್ಯದ ಅಕ್ಕಿಯನ್ನು ಹೋಲುತ್ತಿದೆ ಎಂದು ಖಚಿತಪಡಿಸಿದ್ದಾರೆ.
ಬಳಿಕ ಚಾಲಕ ಹಾಗೂ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ಕಿಯ ಮೂಲದ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಟೈಲರ್ ಕನ್ನಯ್ಯ ಲಾಲ್ ಕೊಲೆಗೈದವರಿಗೆ ಮರಣದಂಡನೆ ವಿಧಿಸಿ: ಶಾಸಕ ಕಾಮತ್‌ ಆಗ್ರಹ

ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಕನ್ನಯ್ಯ ಲಾಲ್ ಹತ್ಯೆಗೈದು ಪ್ರಧಾನಮಂತ್ರಿಗಳಿಗೆ ಬೆದರಿಕೆಯೊಡ್ಡಿದ ಹಂತಕರಿಗೆ ಮರಣ ದಂಡನೆ ವಿಧಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಕುಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ನೀಡಬೇಕೆಂದು ಮಂಗಳೂರು...

ಮಂಗಳೂರು: ಬಿರುವೆರ್ ಕುಡ್ಲ ದುಬೈ ಘಟಕದ ವತಿಯಿಂದ ನೆರವು ನಿಧಿ ವಿತರಣೆ

ಮಂಗಳೂರು: ಫ್ರೆಂಡ್ಸ್‌ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಇದರ ಸ್ಪಂದನ ತಂಡವು ಬಡ ವರ್ಗದ ಚಿಕಿತ್ಸೆಗಾಗಿ ಕಳೆದ ಹಲವಾರು ವರ್ಷಗಳಿ೦ದ ಮಾನವೀಯ ನೆಲೆಯಲ್ಲಿ ನೆರವು ನೀಡುತ್ತಾ ಬರುತ್ತಿರುವುದು ಇತರ ಸಂಘಟನೆಗಳಿಗೆ ಮಾದರಿ ಎಂದು...

ಉಳ್ಳಾಲ: ಮಳೆ ನೀರು ಬ್ಲಾಕ್‌ ಆಗಿದ್ದನ್ನು ತೆಗೆಯಲು ಹೋಗಿದ್ದ ವ್ಯಕ್ತಿ ಟೆರೇಸ್‌ನಿಂದ ಜಾರಿ ಬಿದ್ದು ಕೊನೆಯುಸಿರು

ಉಳ್ಳಾಲ: ಮನೆಯ ಟೆರೇಸ್‌ನಲ್ಲಿ ಮಳೆ ನೀರು ಬ್ಲಾಕ್‌ ಆಗಿದನ್ನು ತೆಗೆಯಲು ಹೋಗಿ‌ ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಣಾಜೆ‌ ಠಾಣಾ ವ್ಯಾಪ್ತಿಯ ದಾಸರಮೂಲೆ ಎಂಬಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು...