LATEST NEWS
ಸೌಂದರ್ಯ ವರ್ಧಕಗಳಲ್ಲಿ ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕರಾ ಆರೋಪಿಗಳು..!
ಸೌಂದರ್ಯ ವರ್ಧಕಗಳಲ್ಲಿ ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕರಾ ಆರೋಪಿಗಳು..!
Illegal gold trafficking in cosmetics; accused caught red hand to customs officers
ಬೆಂಗಳೂರು : ದುಬೈನಿಂದ ಕಳ್ಳ ಮಾರ್ಗದಲ್ಲಿ ಚಿನ್ನ ತರಿಸಿ ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಸದ್ದಿಲ್ಲದೇ ನಡೆಯುತ್ತಲೇ ಇದೆ.ಚಿನ್ನ ಅಕ್ರಮ ಸಾಗಣೆ ಮಾಡಿ ಬಚಾವ್ ಆದ್ರೆ ಲಾಟರಿ ಹೊಡೆದ್ಹಂಗೆ .. ತಪ್ಪಿದ್ರೆ ಜೈಲೂಟ ಖಾತ್ರಿ ತಿಂದ್ಹಂಗೆ! ಇಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಅಕ್ರಮ ಸಾಗಣೆ ಮಾಡಲು ಹೋಗಿ ಎಂಟು ಮಂದಿ ಸಿಕ್ಕಿಬಿದ್ದಿದ್ದಾರೆ.
ಸೌಂದರ್ಯ ವರ್ಧಕಗಳಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಣೆಗೆ ಯತ್ನಿಸಿದ ಎಂಟು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 38 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಲೇಬಲ್ ಇಲ್ಲದ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಅಕ್ರಮವಾಗಿ ವಿದೇಶಿ ಸಿಗರೇಟ್ ಹಾಗೂ ಚಿನ್ನವನ್ನು ಸಾಗಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎಕ್ಸ್ ರೇ ಸ್ಕ್ಯಾನ್ ಮಾಡಿದ್ದರು.
ಈ ವೇಳೆ ಸಿಗರೇಟ್ ಮಾರಾಟದ ಎಚ್ಚರಿಕೆ ನಿಯಮ ಉಲ್ಲಂಘಸಿದ 73,600 ಸ್ಟಿಕ್ ವಿದೇಶಿ ಸಿಗರೇಟ್ ಸಿಕ್ಕಿದೆ. ಇದೇ ವೇಳೆ ಸೌಂದರ್ಯ ವರ್ಧಕಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 438 ಗ್ರಾಂ ಚಿನ್ನ ಅಕ್ರಮ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಸಂಬಂಧ ಎಂಟು ಮಂದಿ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.ಮೊದಲಿನಿಂದಲೂ ದಂಧೆ: ಭಾರತಕ್ಕೆ ಹೋಲಿಸಿದರೆ ವಿದೇಶದಲ್ಲಿ ಚಿನ್ನದ ಬೆಲೆ ಕಡಿಮೆ.
ಆದರೆ ಕಾನೂನು ಬದ್ಧವಾಗಿ ಚಿನ್ನವನ್ನು ತರಿಸಿ ಮಾರಾಟ ಮಾಡಿದರೆ ನಷ್ಟ ವುಂಟಾಗುತ್ತದೆ. ಹೀಗಾಗಿ ಚಿನ್ನದ ವ್ಯಾಪಾರಿಗಳು ದುಬೈ ಪ್ರವಾಸದ ಹೆಸರಿನಲ್ಲಿ ಕೆಲವರನ್ನು ವಿದೇಶಕ್ಕೆ ಕಳಿಸುತ್ತಾರೆ.
ಪ್ರವಾಸದ ಹೆಸರಿನಲ್ಲಿ ಮಹಿಳೆಯರನ್ನು ಕಳುಹಿಸಿ ಅವರು ವಾಪಸು ಬರುವಾಗ ಚಿನ್ನವನ್ನು ತರಿಸುತ್ತಾರೆ. ಹೀಗೆ ಅಡ್ಡ ಮಾರ್ಗದಲ್ಲಿ ಚಿನ್ನ ತರಿಸಿ ಮಾರಾಟ ಮಾಡುವ ದಂಧೆ ಮೊದಲಿನಿಂದಲೂ ನಡೆಯುತ್ತಿದೆ.
ಕೆಲವರಂತೂ ದೇಹದೊಳಗೆ ಚಿನ್ನ ಇಟ್ಟುಕೊಂಡು ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣಗಳು ವರದಿಯಾಗಿವೆ. ಇದೀಗ ಅಂತದ್ದೇ ಪ್ರಕರಣವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
bangalore
ಆಸ್ಟ್ರೇಲಿಯಾ ಬೀಚ್ ನಲ್ಲಿ ಮಂಗ್ಳೂರು ಬೆಡಗಿ ಅನುಶ್ರೀ…
Film: ಕನ್ನಡ ರಿಯಾಲಿಟಿ ಶೋನಲ್ಲಿ ಹೆಸರುವಾಸಿಯಾಗಿರುವ ಮಂಗ್ಳೂರು ಬೆಡಗಿ ಆಂಕರ್ ಅನುಶ್ರಿ ಇದೀಗ ಆಸ್ಟ್ರೇಲಿಯಾದತ್ತ ಟ್ರಿಪ್ ಹೋಗಿರುವ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರಾವಳಿ ಬೆಡಗಿ ಆಗಿರುವ ಅನುಶ್ರೀ ಕನ್ನಡ ಕಿರುತೆರೆಯಲ್ಲಿ ಉತ್ತಮ ಆಂಕರ್ ಆಗಿ ಅವರ್ಡ್ ಪಡೆದುಕೊಂಡ ಅನುಶ್ರೀಯ ಮಾತು ಕೇಳೊಕೆ ಎಲ್ಲರಿಗೆ ಅಚ್ಚು ಮೆಚ್ಚು. ಬಾಯಿ ತೆರೆದರೆ ಪಟಪಟನೇ ಮಾತನಾಡುವ ಆಂಕರ್ ಇದೀಗ ಆಸ್ಟ್ರೇಲಿಯಾದತ್ತ ಕಾಲಿಟ್ಟಿದ್ದಾರೆ.
ಪ್ರತಿದಿನ ಆಂಕರ್ ಮಾಡೋದು ಅಲ್ಲ ಸೊಲ್ಪ ಹೊರಗಿನ ಪ್ರಪಂಚಕ್ಕೆ ಕಾಲಿಡಬೇಕು. ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬೇಕು. ಅದೇ ರೀತಿ ಆಸ್ಟ್ರೇಲಿಯಾಕ್ಕೆ ತೆರಳಿದ ಅನುಶ್ರೀ ಆಸ್ಟ್ರೇಲಿಯಾ ಬೀಚ್ ನಲ್ಲಿ ಅಪ್ಪು ಎಂದು ಬರೆದುಕೊಂಡಿದ್ದಾರೆ.
ಅಲ್ಲಿರುವ ಆಸ್ಟ್ರೇಲಿಯಾ ಸ್ಕೈ ಪಾಯಿಂಟ್, ಬೀಚ್‌ಗಳು ಹಾಗೂ ಪ್ರಾಣಿ ಸಂಗ್ರಹಾಲಯಕ್ಕೆ ಹಾಗೂ ಹಲವು ಕಡೆ ಭೆಟಿ ನೀಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ ಮಾಡಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತಿ ಸುಂದರವಾಗಿ ನಿರೂಪಣೆ ಮಾಡಿ, ಬೆಸ್ಟ್ ಆ್ಯಂಕರ್ ಪ್ರಶಸ್ತಿಯನ್ನೂ ಪಡೆದ ನಟಿ ಆ್ಯಂಕರ್ ಅನುಶ್ರೀ ಈಗ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ.
ಬ್ರಿಸ್ಬೇನ್‌ನ ಉತ್ತರದ ಸನ್‌ಶೈನ್ ಕೋಸ್ಟ್ ತೀರದತ್ತ ಸಂಚಾರ ನಡೆಸಿದ ಅವರು ಸ್ಯಾಂಡಲ್ ವುಡ್ ನ ನಟ ನಗು ಮೊಗದ ಅಪ್ಪು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
bangalore
“ಎಂಚ ಉಲ್ಲಾರ್ ಮರ್ರೆ”…. ಎಂದು ತುಳುವಿನಲ್ಲಿ ಮಾತನಾಡಿದ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಭಾಗವಹಿಸಿ ಮಕ್ಕಳ ಜೊತೆಗೆ ಮಕ್ಕಳಂತೆ ಬೆರೆತು ಮಕ್ಕಳನ್ನು ಕೊಂಡಾಡಿದರು.
ಈ ವೇದಿಕೆಯಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದಾಗ ಖುಷಿ ಪಟ್ಟ ನಟಿ ಆ ವಿದ್ಯಾರ್ಥಿಗಳನ್ನು ವೇದಿಕೆಗೆ ತಾವೇ ಕರೆಸಿ ಅಭಿನಂದಿಸದರು.
ಹಾಗೂ ಕೆಲವು ವಿದ್ಯಾರ್ಥಿಗಳ ಜೊತೆ ವೇದಿಕೆಗೆ ಕರೆಸಿ ಹಾಡಿಸಿದರು. ಅದರಲ್ಲಿ ತಾನೇ ಬಂದು ವೇದಿಕೆಯಲ್ಲಿ ಒಂದು ಪುಟಾಣಿ ‘ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು’ ಎಂದು ಹಾಡಿದಾಗ ನಟಿ ಬಹಳ ಖುಷಿ ಪಟ್ಟರು.
ಈ ಸಂದರ್ಭ ರಚಿತರಾಮ್ ಜೊತೆ ಹಾಡಲು ಹೇಳಿದಾಗ ಅವರು ಕೂಡ “ಬಾಳ ಒಳ್ಳೇರು ನಮ್ಮ ಮಿಸ್ ಎನ ಹೇಳಿದ್ರು ಎಸ್ ಎಸ್ಸು” ಎಂದು ನಗ್ತಾ ನಗ್ತಾ ಹಾಡಿದರು.
ಬಳಿಕ ಮಾತನಾಡಿದ ನಟಿ ವಿದ್ಯಾರ್ಥಿಗಳು ಇಂತಹ ವೇದಿಕೆ ಸಿಕ್ಕಾಗ ಬಳಸಿಕೊಳ್ಳಬೇಕು. ಮತ್ತೇ ಇಂತಹ ವೇದಿಕೆ ಸಿಗುವುದಿಲ್ಲ. ನಮ್ಮ ಪ್ರತಿಭೆಯನ್ನು ನಾವೇ ಪ್ರದರ್ಶನ ಮಾಡಬೇಕು. ಬೇರೆ ಯಾರೂ ಕೂಡ ನಮಗೆ ಹೇಳಲು ಬರುವುದಿಲ್ಲ.
ಯಾರೂ ಕೂಡ ಸಪೋರ್ಟ್ ಮಾಡುವುದಿಲ್ಲ. ಸ್ವಾಯತ್ತತೆಯಿಂದ ನಾವು ಗೆಲ್ಲಬೇಕು. ಒಳ್ಳೆ ಒಳ್ಳೆ ವೇದಿಕೆ ಸಿಕ್ಕಾಗ ಬಿಡಬಾರದು. ಅದರ ಜೊತೆಗೆ ನಮ್ಮ ಗುರುಗುಳಿಗೆ ಹಾಗೂ ತಮ್ಮ ಪೋಷಕರಿಗೆ ಗೌರವ ಕೊಡಿ, ಮರ್ಯಾದೆ ಕೊಡಿ ಜೊತೆಗೆ ಅವರನ್ನು ಪ್ರೀತಿಸಿ ಎಂದರು.
ಈ ವೇಳೆ ರಚಿತರಾಮ್ ಕನ್ನಡದಲ್ಲಿ ಮಾತನಾಡಿದಾಗ ವಿದ್ಯಾರ್ಥಿಗಳು ತುಳುವಿನಲ್ಲಿ ಮಾತನಾಡಿ ಎಂದು ಕೂಗಾಡಿದರು. ಆಗ ಅವರು ಎಂಚ ವುಲ್ಲರ್ ಮರ್ರೆ…ಹುಷಾರ್ ವುಲ್ಲರಾ…ಎಂದು ತುಳುವಿನಲ್ಲಿ ಮಾತನಾಡಿದರು.
BELTHANGADY
Belthangady: ರಸ್ತೆ ಪಕ್ಕದ ಗೂಡಂಗಡಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು..!
ಬೆಳ್ತಂಗಡಿ: ಬೆಳ್ತಂಗಡಿ ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿಗಳು ರಾತ್ರಿಯ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕೊಕ್ಕಡ ಗ್ರಾಮದ ಮಲ್ಲಿಗೆಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ತಮ್ಮ ಜೀವನೋಪಾಯಕ್ಕಾಗಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿಯನ್ನು ಹಾಕಿ ವ್ಯಾಪಾರ ನಡೆಸುತ್ತಿದ್ದರು.
ಕಳೆದ ಮೂರು ವರ್ಷಗಳಿಂದ ಈ ಗೂಡಂಗಡಿ ಕಾರ್ಯ ನಿರ್ವಹಿಸುತ್ತಿತ್ತು. ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಗೂಡಂಗಡಿಯನ್ನು ನಿರ್ಮಿಸಲಾಗಿತ್ತು. ಎಂದಿನಂತೆ ಶುಕ್ರವಾರ ರಾತ್ರಿಯ ವೇಳೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್ ಅಝೀಝ್ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಅಂಗಡಿಯನ್ನು ಬಹುತೇಕ ಧ್ವಂಸಗೊಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.