Monday, January 24, 2022

ಉಡುಪಿ: ಮದುವೆ ವಾಹನದಂತೆ ಸಿಂಗರಿಸಿ ಅಕ್ರಮ ದನ ಸಾಗಾಟ- 2 ಗಂಡು ಕರು ಸಾವು

ಉಡುಪಿ: ಮದುವೆ ವಾಹನದಂತೆ ಸಿಂಗರಿಸಿ ಅಕ್ರಮ ದನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಘಟನೆ ಉಡುಪಿಯ ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಿಂಸಾತ್ಮಕವಾಗಿ ತುಂಬಿದ್ದರಿಂದ ಈ ಪೈಕಿ 2 ದನಗಳ ಸಾವನ್ನಪ್ಪಿದ್ದು, ನಾಲ್ಕು ದನಗಳಿಗೆ ಗಾಯವಾಗಿದೆ.


ಉಡುಪಿ ಜಿಲ್ಲೆಯಲ್ಲಿ ಅಕ್ರಮ ದನ ಸಾಗಾಟ ಎಗ್ಗಿಲ್ಲದೆ ಮುಂದುವರಿದಿದೆ.

ಶಿರ್ವದಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಮದುವೆ ವಾಹನದಂತೆ ಸಿಂಗರಿಸಿ ಮಂಗಳೂರು ಮೂಲದ ಇನೋವಾ ಕಾರ್‌ನಲ್ಲಿ ಎರಡು ದನ ಮತ್ತು ಅದರೊಂದಿಗಿದ್ದ ಪಿಕಪ್‌ನಲ್ಲಿ 13 ದನ ಸಾಗಾಟ ಮಾಡುತ್ತಿದ್ದರು.

ಇದರ ಬಗ್ಗೆ ಮಾಹಿತಿ ಹಿಂದೂ ಸಂಗಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅದರನ್ವಯ ಪಡೆದ ಶಿರ್ವ ಪೊಲೀಸ್ ಠಾಣೆಯ ಪೊಲೀಸ್‌ ಉಪನಿರೀಕ್ಷಕ ಶ್ರೀಶೈಲ ಮುರಗೋಡ ಹಾಗೂ ಸಿಬ್ಬಂದಿಯಾದ ಸಂತೋಷ್‌, ಪ್ರಮೋದ್‌, ಪ್ರಸಾದ್‌  ಕಾಪು ಬಳಿ ತಡೆಹಿಡಿದಿದ್ದಾರೆ.

ಈ ವೇಳೆ ಪಿಕಪ್ ವಾಹನದಲ್ಲಿ 13 ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಪೈಕಿ 2 ಗಂಡು ಕರು ಸಾವನ್ನಪ್ಪಿದ್ದು, ನಾಲ್ಕು ದನಗಳಿಗೆ ಗಾಯವಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ, ತನಿಖೆ ನಡೆಸುತ್ತಿದ್ದಾರೆ.

Hot Topics

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...

ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ...

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು‌. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್...