Connect with us

BELTHANGADY

ಬೆಳ್ತಂಗಡಿ: ಪಿಕಪ್ ವಾಹನದಲ್ಲಿ ಅಕ್ರಮ ಗೋವು ಸಾಗಾಟ-ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

Published

on

ಬೆಳ್ತಂಗಡಿ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಮಿಂಚಿನ ಕಾರ್ಯಚರಣೆ ನಡೆಸಿ ಜಾನುವಾರುಗಳನ್ನು ರಕ್ಷಣೆ ಮಾಡಿ ಇಬ್ಬರು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪುದುವೆಟ್ಟು ಬಳಿಯ ಬಾಯಿತರು ಎಂಬಲ್ಲಿ ನಡೆದಿದೆ.


ಆರೋಪಿಗಳು ಕಾಯರ್ತಡ್ಕದಿಂದ ಅಣಿಯೂರಿಗೆ ಪಿಕಪ್ ನಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು 6 ಜಾನುವಾರುಗಳನ್ನು ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.


ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಆಜೀದ್ ಕಕ್ಕಿಂಜೆ, ರಫೀಕ್ ನೆರಿಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಶಪಡಿಸಿಕೊಂಡ ಧರ್ಮಸ್ಥಳ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

BELTHANGADY

ಸೌದೆ ಒಡೆಯಲೂ ಬಂತು ಯಂತ್ರ… ಹೇಗಿದೆ ನೋಡಿ..!

Published

on

ದಕ್ಷಿಣ ಕನ್ನಡ: ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೆಲಸಗಳೂ ಯಂತ್ರದ ಮೂಲಕವೇ ನಡೆಯುತ್ತಿದೆ. ಮನೆಯಲ್ಲಿ ನೆಲ ಒರಸಲು ಮಿಷಿನ್, ಅಡುಗೆ ಮಾಡಲು ಮಿಷಿನ್ ಹಾಗೆಯೇ ವಾಷಿಂಗ್ ಮಿಷಿನ್‌ನಲ್ಲಿ ಬಟ್ಟೆ ಒಗೆದರೂ ಅದನ್ನು ಆರಿಸಲೂ ಒಂದು ಮಿಷಿನ್ ಬಂದಿದೆ. ಹೀಗೆ ಪ್ರತಿ ಕೆಲಸಕ್ಕೂ ಜನರು ಯಂತ್ರಗಳನ್ನು ಅವಲಂಭಿಸಿದ್ದಾರೆ. ಹಿಂದೆ ಮರ ಕಡಿಯಲೂ ಜನರೇ ಬೇಕಿತ್ತು. ಆದರೆ ಆ ಜಾಗಕ್ಕೂ ಮಿಷಿನ್ ಬಂತು. ಈಗ ಕಟ್ಟಿಗೆ ಒಡೆಯಲೂ ಮಿಷಿನ್ ಬಂದಿದೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೇ ಬೇಕಾದ ಸೈಝ್‌ಗೆ ಕಟ್ಟಿಗೆಯನ್ನು ಒಡೆಯಲು ವಿಶೇಷ ರೀತಿಯ ಯಂತ್ರವೊಂದು ಬಂದಿದೆ. ಈಗ ಬೇಸಿಗೆಯ ಬಿಸಿ ಏರಿದೆ. ಆದರೆ ನಾಳೆಯ ದಿನ ಮಳೆ ಬರಬಹುದು. ಆಗ ಸ್ನಾನ ಮಾಡಲು ನೀರು ಕಾಯಿಸಲು, ಅಡುಗೆಗೆ ಕಟ್ಟಿಗೆಯ ಉಪಯೋಗ ಆಗುತ್ತದೆ ಎಂದು ಜನರು ಈಗಲೇ ಅದನ್ನು ಸಂಗ್ರಹಿಸಿಡುತ್ತಾರೆ. ಇನ್ನು ಬೇಸಿಗೆಯಲ್ಲಿ ಸೋಲಾರ್ ಬಿಸಿ ಆದರೂ ಮಳೆಗಾಲದಲ್ಲಿ ಅದರ ಕೆಲಸ ಕಮ್ಮಿ. ಆಗ ಜನರು ಕಟ್ಟಿಗೆಗಾಗಿಯೇ ಅವಲಂಬಿತರಾಗುತ್ತಾರೆ. ಈಗ ಸೌದೆ ಒಡೆಯುವ ಕೆಲಸ ಯಂತ್ರಗಳೇ ಮಾಡುತ್ತಿದೆ. ಈ ಯಂತ್ರ ಜನರು ಪರಿಶ್ರಮಕ್ಕೆ ಬ್ರೇಕ್ ಹಾಕಿದ್ದು, ಕಷ್ಟದ ಕೆಲಸ ಸುಲಭ ಮಾಡುತ್ತಿದೆ.

ಈ ಮಿಷಿನ್‌ನ ಬೆಲೆ 2.5 ಲಕ್ಷ ರೂಪಾಯಿ. ಬೆಳ್ತಂಗಡಿ ತಾಲೂಕಿನ ಸವಣಾಲಿನ ಕೇಶವ ಗೌಡ ಎನ್ನುವವರು ಇದನ್ನು ತಮಿಳುನಾಡಿನಿಂದ ತರಿಸಿದ್ದಾರೆ. ಇದು ಪೆಟ್ರೋಲ್ ಚಾಲಿತ ಯಂತ್ರವಾಗಿದ್ದು, ಸಣ್ಣ ಕಟ್ಟಿಗೆಯಿಂದ ಹಿಡಿದು ದೊಡ್ಡ ಕಟ್ಟಿಗೆಯವರೆಗೆ ನಮಗೆ ಬೇಕಾದ ಗಾತ್ರಕ್ಕೆ ಈ ಯಂತ್ರದಲ್ಲಿ ತುಂಡು ಮಾಡಬಹುದು.

ಇದನ್ನೂ ಓದಿ : ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಭಾಗಿ!?

ಯಂತ್ರ ಚಾಲನೆಗೊಂಡಂತೆ ಚೂಪಾದ ಕೊಡಲಿಯ ಮೊನೆಯೊಂದು ಮೇಲಿನಿಂದ ಕೆಳಗೆ ಬರುತ್ತದೆ. ಇದು ಕಟ್ಟಿಗೆಯನ್ನು ಕ್ಷಣ ಮಾತ್ರದಲ್ಲಿ ಸೀಳಿ ಹಾಕುತ್ತದೆ. ಈ ಕೆಲಸಕ್ಕೆ ಇಬ್ಬರು ಇದ್ದಾರೆ.

ಜನರ ಶ್ರಮದಿಂದ ದಿನಗಟ್ಟಲೇ ಆಗುವ ಕೆಲಸ ಈ ಯಂತ್ರದ ಸಹಾಯದಿಂದ ಒಂದೆರಡು ಗಂಟೆಗಳಲ್ಲಿ ಆಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಕಟ್ಟಿಗೆ ಒಡೆಯಲು ಈಗ ಕಾರ್ಮಿಕರು ಸಿಗುತ್ತಿಲ್ಲ. ಆದ್ದರಿಂದ, ಈ ಯಂತ್ರ ಜನರ ಸಹಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎನ್ನುವುದು ಜನರ ಅಭಿಪ್ರಾಯ.

Continue Reading

BELTHANGADY

ಕಾಡಾನೆ ಮುಂದೆ ರೈಡಿಂಗ್..! ಸ್ವಲ್ಪದ್ರಲ್ಲಿ ಉಳಿಯಿತು ಜೀವ..!

Published

on

ಮಂಗಳೂರು : ಚಾರ್ಮಾಡಿ ಘಾಟ್‌ನಲ್ಲಿ ಒಂಟಿ ಸಲಗ ಓಡಾಡುತ್ತಿದ್ದು, ಎಪ್ರಿಲ್‌ 8 ಮದ್ಯಾಹ್ನ 12 ಸುಮಾರಿಗೆ ರಸ್ತೆಯಲ್ಲಿ ಕಾಣ ಸಿಕ್ಕಿದೆ. ಘಾಟ್‌ನ 9 ನೇ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಆನೆಯನ್ನು ಕಂಡ ಪ್ರಯಾಣಿಕರು ವಾಹನವನ್ನು ನಿಲ್ಲಿಸಿದ್ದಾರೆ. ಇದೇ ವೇಳೆ ಬೈಕ್‌ ಸವಾರನೊಬ್ಬ ಆನೆಯನ್ನು ಗಮನಿಸದೆ ಆನೆಯ ಎದುರಿನಿಂದಲೇ ಪಾಸ್‌ ಆಗಿದ್ದಾರೆ. ಅದೃಷ್ಟವಶಾತ್‌ ಬೈಕ್‌ ಪಾಸ್‌ ಆದ ಮೇಲೆ ಆನೆ ರಸ್ತೆಯಲ್ಲಿ ನಡೆದುಕೊಂಡು ಹೋಗಿದೆ.

ಆನೆ ಬಾಂಜಾರು ಮಲೆ ಕಡೆಯಿಂದ ಇಳಿದು ಬಂದಿರುವ ಸಾಧ್ಯತೆ ಇದೆ. ಇತ್ತೀಚೆಗೆ ಇದೇ ಆನೆ ಹಲವೆಡೆ ಓಡಾಡಿದ್ದು, ಕೃಷಿ ಹಾನಿ ಮಾಡಿದ್ದಾಗಿ ಜನರು ಮಾಹಿತಿ ನೀಡಿದ್ದಾರೆ. ನೀರನ್ನು ಹುಡುಕಿಕೊಂಡು ಆನೆ ಅಲೆದಾಡುತ್ತಿದೆ ಅನ್ನೋದು ಇನ್ನೊಂದಷ್ಟು ಜನರ ಅಭಿಪ್ರಾಯ. ಆದ್ರೆ ಈ ಆನೆಯಂತೂ ಕೆಲ ದಿನಗಳಿಂದ ಅಡ್ಡಾಡುತ್ತಿರುವುದಂತೂ ನಿಜ.

ಸದ್ಯ ಚಾರ್ಮಾಡಿ ಘಾಟ್‌ನ ತಿರುವಿನ ರಸ್ತೆಯಲ್ಲಿ ಎದುರಿನಿಂದ ಬರೋ ವಾಹನಗಳನ್ನ ಗಮನಿಸೋದೇ ಕಷ್ಟ. ಅಂತಹದ್ರಲ್ಲಿ ಆನೆಯೊಂದು ರಸ್ತೆಯ ಸೈಡ್‌ನಲ್ಲಿ ನಿಂತುಕೊಂಡಿರೋದನ್ನ ಯಾರೂ ಗಮನಿಸಲು ಸಾದ್ಯವಿಲ್ಲ . ಆದರೆ ಮೊದಲು ಆನೆಯನ್ನು ಕಂಡವರು ತಕ್ಷಣ ವಾಹನಗಳನ್ನು ನಿಲ್ಲಿಸಿ ಆನೆ ರಸ್ತೆ ದಾಟುವ ತನಕ ಕಾದಿದ್ದಾರೆ. ಬೈಕ್‌ ಸವಾರನಿಗೂ ಕೂಗಿ ಹೇಳಿದ್ರೂ ಕೇಳಿಸಿಕೊಳ್ಳದೆ ಆನೆಯ ಮುಂದೆಯೇ ಪಾಸ್‌ ಆಗಿ ಅಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ವೈರಲ್‌ ಆಗುತ್ತಿದೆ.

Continue Reading

BELTHANGADY

ವಿಷ ಉಣಿಸಿ ಮೂಕಪ್ರಾಣಿಗಳ ಹತ್ಯೆ*ಗೈದ ಪಾಪಿಗಳು..!!

Published

on

ಬೆಳ್ತಂಗಡಿ: ಬೆಳ್ತಂಗಡಿ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಕಿಡಿಗೇಡಿಗಳು ವಿಷವಿಕ್ಕಿದ ಪರಿಣಾಮ ಸಾಕು ನಾಯಿಗಳು ಸೇರಿದಂತೆ 10ಕ್ಕಿಂತ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ನಡೆದಿದೆ. ಮಾ.30 ರಂದು ರಾತ್ರಿ ಯಾರೋ ಕಿಡಿಗೇಡಿಗಳು ರಸ್ತೆಯುದ್ದಕ್ಕೂ ಅಲ್ಲಲ್ಲಿ ಆಹಾರದಲ್ಲಿ ವಿಷ ಬೆರೆಸಿ ಎಸೆದು ಹೋಗಿದ್ದಾರೆ. ಆಹಾರವನ್ನು ಸೇವಿಸಿರುವ 10ಕ್ಕೂ ಅಧಿಕ ಸಾಕು ನಾಯಿಗಳು ಹಾಗೂ ಬೀದಿ ಬದಿ ನಾಯಿಗಳು ಸಾವನ್ನಪ್ಪಿವೆ.

dog poision

ತಡರಾತ್ರಿ ಈಸ್ಟರ್ ಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ, ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿದಾಗ ಕೆಲ ಮನೆಗಳ ಅಂಗಳದಲ್ಲಿ ಕೂಡ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಸಾವನ್ನಪ್ಪಿದ ನಾಯಿಗಳನ್ನು ಪಂಚಾಯತ್ ವತಿಯಿಂದ ಹೂಳುವ ವ್ಯವಸ್ಥೆ ಮಾಡಲಾಯಿತು.

Continue Reading

LATEST NEWS

Trending