Sunday, May 16, 2021

ಲಾಕ್ ಡೌನ್ ಇದ್ದರೂ ನಿರಾತಂಕವಾಗಿ ಸಾಗುತ್ತಿದೆ ಗಡಿ ಪ್ರದೇಶದ ಅಕ್ರಮ ಮದ್ಯ ಸಾಗಾಟ..!

ಮಂಗಳೂರು:ಪ್ರಸ್ತುತ ರಾಜ್ಯ ಸರಕಾರ 14 ದಿನಗಳ ಕೊರೊನಾ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ ಪಾನಪ್ರಿಯರಿಗೆ ಮಾತ್ರ ಇದರಿಂದ ಏನೂ ಎಫೆಕ್ಟ್‌ ಆಗಿಲ್ಲ.ಈ ಹಿಂದೆ ದುಡಿದು ಹಣ ಸಂಪಾದನೆ ಮಾಡಿ ಬಾರ್‌ ಒಳಗೆ ಹೋಗಿ ಕುಡಿಯುತ್ತಿದ್ದವರೆಲ್ಲರೂ ಈಗ ಸಾಲಸೋಲ ಮಾಡಿಕುಡಿಯುತ್ತಿದ್ದಾರೆ. ಇದು ನಮ್ಮ ಸರಕಾರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

ಇದಕ್ಕೆ ಪೂರಕವೆಂಬಂತೆ ರಾಷ್ಟ್ರೀಯ ಹೆದ್ದಾರಿ 66ರ ಕರ್ನಾಟಕ ಕೇರಳ ಗಡಿ ಪ್ರದೇಶ ಕೇರಳದಲ್ಲಿ ಅಕ್ರಮವಾಗಿ ಮದ್ಯಸಾಗಾಟ ಎಗ್ಗಿಲ್ಲದೇ ಸಾಗುತ್ತಿದೆ.

ಪೊಲೀಸರು  ಅದೆಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಮೋಜು ಮಸ್ತಿ ಮಾಡುವವರಿಗೆ ಯಾವುದೇ ತೊಂದರೆ ಇಲ್ಲ. ಕೇರಳದಲ್ಲಿ ವಿಧಾನ ಸಭಾ ಚುನಾವಣೆ ಇದ್ದ ಕಾರಣದಿಂದಲೇ ಕೇರಳದಲ್ಲಿ ಮದ್ಯಕ್ಕೆ ಸಖತ್‌ ಡಿಮ್ಯಾಂಡ್‌ ಇತ್ತು.

ಹೀಗಾಗಿ ಕರ್ನಾಟಕದಿಂದ ಗಡಿ ಪ್ರದೇಶದ ತಲಪಾಡಿ ಮೂಲಕ ಕೇರಳಕ್ಕೆ ನಿರಂತರವಾಗಿ ಮದ್ಯ ಸಾಗಾಟ ಮಾಡಲಾಗಿದೆ ಎಂದು ಪೊಲೀಸರೇ ಒಪ್ಪಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಇದಕ್ಕೆ ಪೂರಕವೆಂಬಂತೆ ಕೇರಳದ ಗಡಿ ಭಾಗ ತಲಪಾಡಿಯಲ್ಲಿರುವ ನಿಸರ್ಗ ಬಾರ್ ಅಂಡ್ ರೆಸ್ಟೋರಾಂಟ್‌ ಮೇಲೆ ಪೊಲೀಸರು ದಾಳಿ ನಡೆಸಿ, ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮದ್ಯದ ಸಂಗ್ರಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಇದನ್ನು ಕೇರಳಕ್ಕೆ ಸಾಗಾಟ ಮಾಡಲು ತಂದಿಟ್ಟಿರುವುದು ಎಂದು ತಪ್ಪೊಪ್ಪಿಕೊಂಡಿದ್ದ. ಕೊರೊನಾದ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಪೊಲೀಸರು ದಿನನಿತ್ಯ ಪಹರೆ ಕಾಯುತ್ತಿದ್ದರೂ ಅಕ್ರಮ ಮದ್ಯ ಸಾಗಾಟ ಮಾತ್ರ ಎಗ್ಗಿಲ್ಲದೇ ನಡೆಯುತ್ತಲೇ ಇದೆ.

ಶನಿವಾರದಂದು ತಲಪಾಡಿಯ ಬಾರ್‌ಗೆ ದಾಳಿ ನಡೆಸಿ 1.53 ಲಕ್ಷ ರೂಪಾಯಿ ಮೌಲ್ಯದ ಮದ್ಯದ ಸಂಗ್ರಹವನ್ನು ಪೊಲೀಸರು ಪತ್ತೆ ಮಾಡಿದ್ದರು.

ಆರೋಪಿ ಚರಣ್‌ ಎಂಬಾತನನ್ನೂ ಬಂಧಿಸಿದ್ದರು. ಬ್ಲಾಕ್ ಮತ್ತು ಗೋಲ್ಡ್‌ ವಿಸ್ಕಿ  1728 ಬಾಟಲ್‌ ಇದ್ದ 36 ಬಾಕ್ಸ್‌, 36 ಬಾಟಲ್‌ ಇದ್ದ ಬಿಜೋಯ್ಸ್‌ ವಿಸ್ಕಿ, 24 ಬಾಟಲ್‌ ಇದ್ದ ಡಿಎಸ್‌ಪಿ ಬ್ಲಾಕ್ ಎರಡು ಬಾಕ್ಸ್‌, 120 ಬಾಟಲ್ ಇದ್ದ ಹತ್ತು ಬಾಕ್ಸ್‌ ವಿಸ್ಕಿ ವಶಪಡಿಸಿಕೊಳ್ಳಲಾಗಿತ್ತು.

ಈತನೇ ನೀಡಿದ ಮಾಹಿತಿಯಂತೆ ಕೇರಳಕ್ಕೆ ಕಳ್ಳ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...