Connect with us

    ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಮುಂಜಾಗೃತ ಕ್ರಮದೊಂದಿಗೆ ಸನ್ನಧರಾದ ವಿದ್ಯಾರ್ಥಿಗಳು…

    Published

    on

    ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ: ಮುಂಜಾಗೃತ ಕ್ರಮದೊಂದಿಗೆ ಸನ್ನಧರಾದ ವಿದ್ಯಾರ್ಥಿಗಳು…

    ಬೆಂಗಳೂರು: ಕೊರೊನಾ ಅಟ್ಟಹಾಸವನ್ನು ನಿಯಂತ್ರಿಸಲು ಮಾರ್ಚ್ 24ರಿಂದ ದಿಢೀರಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು.

    ಈ ಹಿನ್ನಲೆಯಲ್ಲಿ ಎಸ್.ಎಸ್.ಎಸ್.ಎಲ್.ಸಿ, ಪಿಯುಸಿಯ ಒಂದು ಪರೀಕ್ಷೆ ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳ ಪರೀಕ್ಷೆಗಳೂ ಮುಂದೂಡಲ್ಪಟ್ಟಿದ್ದವು.

    ಲಾಕ್ ಡೌನ್ ನಡುವೆಯೇ ಇಂದು (ಜೂನ್ 18) ಕರ್ನಾಟಕದಲ್ಲಿ ಮೊದಲ ಪರೀಕ್ಷೆ ನಡೆಯುತ್ತಿದೆ.

    ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂಗ್ಲೀಷ್ ಪರೀಕ್ಷೆ ಬರೆಯಲಿದ್ದಾರೆ. ಲಾಕ್ ಡೌನ್ ಘೋಷಣೆ ಆದ ಬಳಿಕ ಇಂದು ರಾಜ್ಯದಲ್ಲಿ ಮೊದಲ ಪರೀಕ್ಷೆ ನಡೆಯುತ್ತಿದೆ.

    ಬೆಳಗ್ಗೆ 10.30 ರಿಂದ ಪರೀಕ್ಷೆ ಆರಂಭವಾಗಿದೆ. ಕರ್ನಾಟಕದ 1,016 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    ಇಂದು ಒಟ್ಟಾರೆ 5,95,997 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ.

    ಜೊತೆಗೆ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.

    ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಸಕಲ ಸಿದ್ಧತೆ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, 51 ಕೇಂದ್ರಗಳಲ್ಲಿ ಪರೀಕ್ಷೆಗೆ ಪೂರ್ವ ಸಿದ್ಧತೆ ನಡೆಸಲಾಗಿದೆ.

    ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ 26,942 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

    ಈ ಪೈಕಿ 1,137 ವಿದ್ಯಾರ್ಥಿಗಳು ಗಡಿ ಪ್ರದೇಶ ಕಾಸರಗೋಡಿನಿಂದ ಜಿಲ್ಲೆಗೆ ಆಗಮಿಸಿ ಪರೀಕ್ಷೆ ಬರೆಯಲು ವಿಶೇಷ 30 ಕೆಎಸ್ಸಾರ್ಟಿಸಿ ಬಸ್ಸ್ ವ್ಯವಸ್ಥೆ ಮಾಡಲಾಗಿದೆ.

    ಪಿಯುಸಿ ಬೋರ್ಡ್ ನಿಯಮದಂತೆ ಮೂರು ಅಡಿ ಅಂತರದಲ್ಲಿ ಒಂದು ಬೆಂಚ್ ನಲ್ಲಿ ಒಬ್ಬರು ವಿದ್ಯಾರ್ಥಿ ಪರೀಕ್ಷೆಗೆ ಬರೆಯಬೇಕಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

    ಸಣ್ಣ ಕೊಠಡಿಯಲ್ಲಿ 12 ಮಂದಿ ಹಾಗೂ ದೊಡ್ಡ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು.

    ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಲು ಪಿಯು ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

    ಪರೀಕ್ಷೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30ರವರೆಗೆ ನಡೆಯಲಿದೆ. ಮೊದಲ 15 ನಿಮಿಷ ಪ್ರಶ್ನೆಪತ್ರಿಕೆ ಸರಿಯಾಗಿ ಓದಿಕೊಂಡು, ಬಳಿಕ ಉತ್ತರ ಬರೆಯಲು ಸಮಯಾವಕಾಶ ಕಲ್ಪಿಸಲಾಗಿದೆ.

    ಬೇರೆ ರಾಜ್ಯದ 11 ಮಂದಿ ವಿದ್ಯಾರ್ಥಿಗಳು ಬರೆಯಲಿದ್ದು, ಅವರಿಗೆ ಈ ಪಾಸ್ ವ್ಯವಸ್ಥೆ ಮಾಡಲಾಗಿದ್ದು, ನೋಡೆಲ್ ಅಧಿಕಾರಿಗಳಿಂದ ವಿಮಾನ ಅಥವಾ ಇತರ ವಾಹನಗಳಿಂದ ಬರುವ ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ವಿಷ್ಣುಮೂರ್ತಿ ಅವರು ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಫರಂಗಿಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮೂವರಿಗೆ ಗಾಯ

    Published

    on

    ವಿಟ್ಲದಿಂದ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಸಾಗುತ್ತಿದ್ದ ಕಾರೊಂದು ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮೂವರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಸಂಭವಿಸಿದೆ.

    ಬೆಳಗ್ಗೆ 6.15 ರ ವೇಳೆಗೆ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಮೂವರು ಪ್ರಯಾಣಿರಿಗೆ ತುರ್ತಾಗಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿದ್ದರಿಂದ ಅವರನ್ನು ಆಟೋ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಯಿತು.

    ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ಮನೆಯೊಂದರ ಅಂಗಳದಲ್ಲಿ ಮಗುಚಿ ಬಿದ್ದಿದೆ. ಬೆಳಗ್ಗಿನ ವೇಳೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಚಾಲಕನ ನಿಯಂತ್ರಣ ಕಳೆದುಕೊಂಡಿರ ಬೇಕೆಂದು ಶಂಕಿಸಲಾಗಿದೆ.

    Continue Reading

    LATEST NEWS

    ಮೆಟ್ರೋ ನಿಲ್ದಾಣದಲ್ಲಿಅನಾಹುತ; ಹಳಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

    Published

    on

    ದೆಹಲಿ/ಮಂಗಳೂರು: ದೆಹಲಿಯ ಲೋಕ ಕಲ್ಯಾಣ್ ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ನಡೆದಿದೆ. 28 ವರ್ಷದ ದೇವೇಂದ್ರಕುಮಾರ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಾಜಸ್ಥಾನ್‌ ಅಲ್ವಾರ್ ನಿವಾಸಿಯಾಗಿರುವ ದೇವೆಂದ್ರ ಕುಮಾರ್ ಲೋಕಕಲ್ಯಾಣ್ ಮಾರ್ಗ ಮೆಟ್ರೋ ನಿಲ್ದಾಣದ ಪ್ಲಾಟ್‌ ಫಾರ್ಮ್‌ ಸಂಖ್ಯೆ 2ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶವವನ್ನು ಆರ್‌ಎಂಎಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

    Continue Reading

    LATEST NEWS

    ಶಿರೂರು ಗುಡ್ಡ ಕುಸಿತ; ಮೂಳೆ ಸಿಕ್ಕಿದ್ದು ದನದ್ದು, ಮನುಷ್ಯನದಲ್ಲ

    Published

    on

    ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆ ವೇಳೆ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದ ಮೂಳೆ ದನದ ಮೂಳೆ ಎಂದು ವೈಜ್ಞಾನಿಕ ಪರೀಕ್ಷೆಯಿಂದ ದೃಢಪಟ್ಟಿದೆ.

    ಭಾನುವಾರ ಸಂಜೆ ಕಾರ್ಯಾಚರಣೆಯಲ್ಲಿ ಮೂಳೆ ಪತ್ತೆಯಾಗಿದ್ದರಿಂದ ಇದು ಶಿರೂರು ದುರಂತದಲ್ಲಿ ಗಂಗಾವಳಿ ನದಿಯಲ್ಲಿ ಕಣ್ಮರೆಯಾಗಿರುವ ಮೂವರಲ್ಲಿ ಯಾರದಾದರೂ ಮೂಳೆ ಇರಬಹುದು ಎಂಬ ಜಿಜ್ಞಾಸೆಗೆ ಕಾರಣವಾಗಿತ್ತು.

    ಆದರೆ ಇದೀಗ ಮೂಳೆ ಪರೀಕ್ಷೆ ನಡೆಸಿ ವರದಿ ನೀಡಲಾಗಿದ್ದು ದನದ ಮೂಳೆ ಎಂಬುದು ದೃಢಪಟ್ಟಿದೆ.

    Continue Reading

    LATEST NEWS

    Trending