ಮಂಗಳೂರು: ಎಲ್ಲಾ ರೀತಿಯ ಹಣ್ಣುಗಳಲ್ಲಿ ಒಂದಲ್ಲಾ ಒಂದು ವಿಶಿಷ್ಟವಾದ ಗುಣಗಳಿರುತ್ತವೆ. ಹಣ್ಣುಗಳು ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು, ವಿಟಮಿನ್ ಗಳನ್ನು ನೀಡುತ್ತವೆ. ಅದರಲ್ಲೂ ಪ್ರಾಕೃತಿಕವಾಗಿ ಸಿಗುವ ಹಣ್ಣುಗಳು ಮನುಷ್ಯನ ದೇಹವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಕೆಲವು ಹಣ್ಣುಗಳು ನಮ್ಮ ಮನೆಯಲ್ಲೇ ಬೆಳೆದರು ನಾವು ತಿನ್ನುವುದಿಲ್ಲ. ನಮ್ಮ ಮನೆ ಹತ್ತಿರವೇ ಸಿಗುವ ಪಪ್ಪಾಯ ಹಣ್ಣನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. ಅದರಲ್ಲೂ ಕಾಯಿ ಪಪ್ಪಾಯಿ ತಿನ್ನುವುದರಿಂದ ಎಷ್ಟೊಂದು ಪ್ರಯೋಜನ ಇದೆ ಗೊತ್ತಾ, ಅದರಲ್ಲಿರುವ ಪ್ರಯೋಜನಗಳನ್ನು ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.
ಕಾಯಿ ಪಪ್ಪಾಯಿಯಲ್ಲಿ ಅಡಗಿದೆ ಆರೋಗ್ಯಕರ ಲಕ್ಷಣಗಳು:
ಪಪ್ಪಾಯಿ ಹಣ್ಣಿನ ಸೇವನೆಯಿಂದ ಅನೇಕ ಪ್ರಯೋಜನಗಳು ಇವೆ. ಅದರಲ್ಲೂ ಕಾಯಿ ಪಪ್ಪಾಯಿ ಹಣ್ಣು ತಿಂದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು. ಪಪ್ಪಾಯಿ ಹಣ್ಣು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ, ಕಾಯಿ ಪಪ್ಪಾಯಿಯನ್ನು ತಿನ್ನುವುದಕ್ಕೆ ಕಹಿ ಎಂದು ಹಿಂದೆ ಸರಿದು ಬಿಡುತ್ತಾರೆ. ಬೇವಿನ ಗಿಡ ಕಹಿಯಾದರು ಕೂಡ ಅದರಿಂದ ಒಳ್ಳೆಯ ಆರೋಗ್ಯ ಗುಣಲಕ್ಷಣಗಳು ಇರುವುದು ತಿಳಿದೇ ಇದೆ. ಅದೇ ರೀತಿ ಕಾಯಿ ಪಪ್ಪಾಯದಲ್ಲೂ ಆರೋಗ್ಯಕರ ಪ್ರಯೋಜನಗಳಿವೆ.
ಕಾಯಿ ಪಪ್ಪಾಯಿ ಹಣ್ಣನ್ನು ಸಾಂಬರು ಅಥವಾ ಜ್ಯೂಸ್ ಮಾಡಿ ಬೇಕಾದರೂ ಕುಡಿಯಬಹುದು. ಇದನ್ನು ಪ್ರತಿದಿನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಕೆಲವರು ಹೊರಗಡೆಯ ಜಂಕ್ ಫುಡ್ ಆಹಾರ ತಿಂದು ದಪ್ಪವಾಗುವುದು ಸಾಮಾನ್ಯ. ಪಪ್ಪಾಯ ಕಾಯಿ ಹಣ್ಣನ್ನು ತಿನ್ನುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಮೃದ್ದವಾದ ವಿಟಮಿನ್ ಹಾಗೂ ಮಿನರಲ್ಸ್ ಗಳು ಸಿಗುತ್ತವೆ.
ದೇಹದಲ್ಲಿ. ಗಾಯಗಳಿದ್ದರೆ ವಾಸಿಯಾಗುತ್ತದೆ ಮತ್ತು ಮಲಬದ್ದತೆ ನಿವಾರಣೆಯಾಗುತ್ತದೆ.
ಈ ಎಲ್ಲಾ ಲಾಭಗಳನ್ನು ಕಾಯಿ ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಪಡೆಯಬಹುದು. ಹಣ್ಣುಗಳ ಸೇವನೆಯಿಂದ ಆರೋಗ್ಯ ವೃದ್ದಿಗೆ ಕಾರಣವಾಗುತ್ತದೆ. ಹಾಗಾಗಿ ಹೊರಗಿನ ಜಂಕ್ ಫುಡ್ ಗೆ ಮಾರುಹೋಗುವ ಬದಲು, ಹಣ್ಣು-ಹಂಪಲು ತಿನ್ನುವ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು.
ಮಂಗಳೂರು/ಕೇರಳ : ರೈಲು ಹಳಿ ದಾಟುವಾಗ ವಿದ್ಯಾರ್ಥಿನಿಯೊಬ್ಬಳಿಗೆ ರೈಲು ಡಿ*ಕ್ಕಿಯಾಗಿ ಮೃ*ತಪಟ್ಟ ದಾರುಣ ಘಟನೆ ಮಯನಾಡು ರೈಲು ನಿಲ್ದಾಣದಲ್ಲಿ ನಡೆದಿದೆ.
ಮೃ*ತಪಟ್ಟ ವಿದ್ಯಾರ್ಥಿನಿ ದೇವಾನಂದ (17) ಎಂದು ಗುರುತಿಸಲಾಗಿದೆ.
ಮಯನಾಡು ಹೈಯರ್ ಸೆಕೆಂಡರಿ ಶಾಲೆಯ ದ್ವಿತಿಯ ಪಿಯುಸಿ ವಿದ್ಯಾರ್ಥಿನಿ ದೇವಾನಂದ ಮಾಯನಾಡು ರೈಲು ನಿಲ್ದಾಣದಲ್ಲಿ ಹಳಿ ದಾಟಿ ಪ್ಲಾಟ್‌ಫಾರ್ಮ್ಗೆ ಹತ್ತಲು ಯತ್ನಿಸುತ್ತಿದ್ದಾಗ ಈ ದು*ರ್ಘಟನೆ ನಡೆದಿದೆ.
ಮಯನಾಡು ನಿಲ್ದಾಣದ ಮೊದಲ ಪ್ಲಾಟ್‌ಫಾರ್ಮ್ನಲ್ಲಿ ನಿಲುಗಡೆಗೊಂಡಿದ್ದ ನಾಗರ್‌ಕೋಯಿಲ್-ಕೊಟ್ಟಾಯಂ ಪ್ಯಾಸೆಂಜರ್ ರೈಲು ಅದರ ಮುಂಭಾಗದ ಹಳಿಯನ್ನು ದಾಟಿ ಎರಡನೇ ಪ್ಲಾಟ್‌ಫಾರ್ಮ್ಗೆ ಪ್ರವೇಶಿಸಿದಾಗ ನೇತ್ರಾವತಿ ಎಕ್ಸ್ಪ್ರೆಸ್ ಬಂದಿದೆ.
ದೇವಾನಂದ ತನ್ನ ಸಹಪಾಠಿಗಳೊಂದಿಗೆ ರೈಲ್ವೇ ಪ್ರವೇಶಿಸಿ ಜೊತೆಯಲ್ಲಿದ್ದ ಇತರ ವಿದ್ಯಾರ್ಥಿಗಳು ಪ್ಲಾಟ್‌ಫಾರ್ಮ್ಗೆ ಎಳೆದೊಯ್ದರು, ಆದರೆ ದೇವಾನಂದ ರೈಲಿಗೆ ಡಿ*ಕ್ಕಿ ಹೊಡೆದು ಜೀ*ವ ಕಳೆದುಕೊಂಡಿದ್ದಾರೆ. ಮಕ್ಕಳು ರೈಲಿನ ಮುಂದೆ ಇರುವುದನ್ನು ತಿಳಿದ ರೈಲಿನ ಲೊಕೊ ಪೈಲಟ್ ನಿಲ್ಲಿಸದೆ ಹಾರ್ನ್ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು/ಉಡುಪಿ: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಳಿಗ್ಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಬೈಂದೂರು ಸಮೀಪದ ಅರೆ ಶಿರೂರಿನ ಹೆಲಿಪ್ಯಾಡ್ ನಲ್ಲಿ ಇಳಿದ ಅವರು, ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದರು.
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಡುಪಿ ಜಿಲ್ಲೆಗೆ ಆಗಮಿಸಿದ ಉಪಮಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ , ಬಂದರು ಮತ್ತು ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ, ಶಾಸಕ ಗೋಪಾಲ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಸ್ವಾಗತಿಸಿದರು.
ಇತ್ತೀಚೆಗೆ ಭಾರಿ ಮಹತ್ವ ಪಡೆದುಕೊಂಡಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಗೆಲುವು ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿರುವ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಕೊಲ್ಲೂರು ಮೂಕಾಂಬಿಕಾ ಭೇಟಿ ಮಹತ್ವ ಪಡೆದುಕೊಂಡಿದ್ದು, ಅವರು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ವಿಜಯಕ್ಕಾಗಿ ಪ್ರಾರ್ಥನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು/ಹಾಸನ: ಮನೆಯಲ್ಲಿ ಅತ್ತೆ ಸೊಸೆ ಜಗಳದಿಂದ ಮನನೊಂದ ಮನೆಮಗ ಬಂದೂಕಿನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಬಾಚೀಹಳ್ಳಿ ಗ್ರಾಮದಲ್ಲಿ ಇಂದು (ನ.21) ಬೆಳಿಗ್ಗೆ ನಡೆದಿದೆ.
ಕರುಣಾಕರ (40) ಆ*ತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಾಫಿ ಬೆಳೆಗಾರನಾಗಿದ್ದ ಮೃತ ವ್ಯಕ್ತಿಯ ಮನೆಯಲ್ಲಿ ಹೆಂಡತಿ ಹಾಗೂ ತಾಯಿಯ ನಡುವೆ ಹೊಂದಾಣಿಕೆ ಇಲ್ಲದೆ ಯಾವಾಗಲೂ ಗಲಾಟೆ ಮಾಡುತ್ತಿದ್ದರು. ತಾಯಿ ಬೇರೆ ಮನೆಯಲ್ಲಿ ವಾಸವಿದ್ದರೂ ಗಲಾಟೆ ಮುಂದುವರೆಯುತ್ತಿತ್ತು. ಇದರಿಂದ ಮನನೊಂದ ಕರುಣಾಕರ್ ಬಂದೂಕಿನಿಂದ ಗುಂ*ಡು ಹಾ*ರಿಸಿಕೊಂಡು ಆ*ತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃ*ತ ಕರುಣಾಕನಿಗೆ ಒಂದು ಗಂಡು ಒಂದು ಹೆಣ್ಣು ಮಗುವಿದೆ. ಘಟನಾ ಸ್ಥಳಕ್ಕೆ ಎಳಸೂರು ಠಾಣೆ ಪೋಲಿಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.