ರಾತ್ರಿ ಕಣ್ಣು ಮುಚ್ಚಿದರೆ ಯಾರೂ ಆ ತಕ್ಷಣವೇ ನಿದ್ರೆಗೆ ಜಾರುತ್ತರೋ ಅವರಿಗಿಂತ ಸುಖಿಗಳು ಮತ್ತೊಬ್ಬರಿಲ್ಲ. ಆದರೆ ಕಣ್ಣು ಮುಚ್ಚಿದರೆ ಸಾವಿರ ಟೆನ್ಶನ್ ಗಳು, ನಾನಾ ರೀತಿಯ ಯೋಚನೆಗಳು, ಆಫೀಸ್ ಕೆಲಸ ಬಂದರಂತೂ ನಿದ್ದೆಯೆನ್ನುವುದು ಹತ್ತಿರ ಸುಳಿಯುವುದೇ ಇಲ್ಲ. ಮನುಷ್ಯ ದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಯಾದರೂ ನಿದ್ರಿಸಿದರೆ ಮಾತ್ರ ಆತನ ಆರೋಗ್ಯವು ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಎಷ್ಟೇ ಕಣ್ಣು ಮುಚ್ಚಿ ನಿದ್ದೆ ಮಾಡಲು ಯತ್ನಿಸಿದರೂ ನಿದ್ದೆ ಬರುವುದೇ ಇಲ್ಲ. ಕಣ್ಣು ಮುಚ್ಚಿದರೆ ನಿದ್ದೆ ಬರಬೇಕು ಎನ್ನುವವರು ಮನೆಯಲ್ಲೇ ಈ ಮನೆ ಮದ್ದನ್ನು ಮಾಡಿಕೊಳ್ಳಬಹುದು.
ನಿದ್ದೆ ಬಾರದಿದ್ದರೆ ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಿ
* ನಿದ್ದೆ ಬಾರದಿದ್ದರೆ ಬಿಸಿನೀರಲ್ಲಿ ಜಾಯಿಕಾಯಿ ಅಥವಾ ಬಜೆಯನ್ನು ತೇದು ಕೊಟ್ಟರೆ ಚೆನ್ನಾಗಿ ನಿದ್ದೆ ಬರುತ್ತದೆ.
* ನಿದ್ದೆ ಬಾರದಿದ್ದರೆ ಶುದ್ಧ ತುಪ್ಪವನ್ನು ಜಾಯಿಕಾಯಿ ಜೊತೆ ಅರೆದು ಹಣೆಗೆ ಹಚ್ಚಿದರೆ ನಿದ್ದೆ ಬೇಗನೆ ಬರುತ್ತದೆ.
* ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಗಸಗಸೆ ಪಾಯಸ ಸೇವಿಸಿದರೆ ನಿದ್ದೆಯೂ ಬರುತ್ತದೆ.
* ಹಸಿ ಹಲಸಂಡೆ ಕಾಳನ್ನು ಬೆಲ್ಲದೊಂದಿಗೆ ಅಗಿದು ತಿಂದರೆ ನಿದ್ರೆ ಚೆನ್ನಾಗಿ ಬರುತ್ತದೆ.
* ಹುರುಳಿಕಾಳು ಮೊಳಕೆ ಸಾರನ್ನು ಸೇವಿಸಿದರೆ ದೇಹವು ತಂಪಾಗುವುದರೊಂದಿಗೆ ನಿದ್ರೆ ಚೆನ್ನಾಗಿ ಬರುತ್ತದೆ.
* ರಾತ್ರಿ ಮಲಗುವುದಕ್ಕೆ ಅರ್ಧ ಗಂಟೆ ಮುಂಚಿತವಾಗಿ ಬಿಸಿಯಾದ ಹಾಲಿಗೆ ಎರಡು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ನಿದ್ರೆ ಬರುತ್ತದೆ.
* ನಿದ್ದೆ ಬಾರದಿದ್ದರೆ ಹಾಲಿಗೆ ಸ್ವಲ್ಪ ಕೇಸರಿ ಹಾಕಿ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ.
* ಸೌತೆಕಾಯಿ ತಿರುಳನ್ನು ಅಂಗಾಲಿಗೆ ಚೆನ್ನಾಗಿ ಉಜ್ಜಿಕೊಂಡರೂ ನಿದ್ದೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ತಂಪು ವೃದ್ಧಿಸುವುದು.
* ಸಬ್ಬಕ್ಕಿ ಸೊಪ್ಪನ್ನು ಬಸಿದು ಮಾಡಿದ ಸಾರನ್ನು ಉಪಯೋಗಿಸುತ್ತಿದ್ದರೆ ಚೆನ್ನಾಗಿ ನಿದ್ರೆ ಬರುವುದರ ಮೂಲಕ ಆರೋಗ್ಯವು ಸುಧಾರಿಸುತ್ತದೆ.
* ಪ್ರತಿ ವಾರವೂ ಒಂದೊಂದು ಬಾರಿ ಹರಳಣ್ಣೆಯಲ್ಲಿ ಅಭ್ಯಂಜನ ಸ್ನಾನ ಮಾಡುವುದರಿಂದ ನಿದ್ರೆ ಚೆನ್ನಾಗಿ ಬರುವುದರ ಜೊತೆಗೆ ದೇಹದ ಉಷ್ಣತೆಯೂ ಕಡಿಮೆಯಾಗುತ್ತದೆ.
ಸ*ತ್ತ ಬಳಿಕ ದೇಹ ಏನಾಗುತ್ತದೆ? ಯಾವೆಲ್ಲಾ ಬದಲಾವಣೆ ಉಂಟಾಗುತ್ತದೆ? ದೇಹ ಹಾಗೆಯೇ ಬಿಟ್ಟರೆ ಕೊನೆಗೆ ಏನಾಗಬಹುದು? ಮೈ ಝುಂ ಎನ್ನುವ ಮಾಹಿತಿಯನ್ನು ನರ್ಸ್ ಒಬ್ಬರು ನೀಡಿದ್ದು, ಅದು ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿವೆ.
‘ಸಾ*ವು’ ಎನ್ನುವುದು ಒಂದು ರೀತಿಯ ಭಯಾನಕ ವಾತಾವರಣವನ್ನು ಸೃಷ್ಠಿಸುತ್ತದೆ. ಎಷ್ಟೇ ವಯಸ್ಸಾಗಿರಲಿ ಸಾ*ವು ಎಂದಾಕ್ಷಣ ಅರೆಕ್ಷಣ ಬೆಚ್ಚಿಬೀಳಬಹುದು. ಆದರೆ ಹುಟ್ಟಿದ ಮೇಲೆ ಸಾ*ಯಲೇಬೇಕು ಎನ್ನುವುದು ಅಷ್ಟೇ ದಿಟ. ಸ*ತ್ತ ಬಳಿಕ ದೇಹದಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಆದರೆ ಅದನ್ನು ಅನುಭವಿಸುವುದಕ್ಕಂತೂ ಸಾಧ್ಯವಿಲ್ಲ. ಸ*ತ್ತ ಮೇಲೆ ಏನಾಗಬಹುದು ಎನ್ನುವುದನ್ನು ಊಹೆ ಮಾಡಿಕೊಳ್ಳಲಿಕ್ಕಷ್ಟೇ ಸಾಧ್ಯ. ಆದರೆ ಇದೀಗ ನರ್ಸ್ ಒಬ್ಬರು ಸತ್ತ ತಕ್ಷಣ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಹಂತ ಹಂತವಾಗಿ ವಿವರಿಸಿದ್ದಾರೆ.
ಸ*ತ್ತ ಮೇಲೆ ದೇಹ ಏನಾಗುವುದು ?
ಅಮೆರಿಕದ ಹಿರಿಯ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ ಸಾವಿನ ನಂತರ ಮಾನವ ದೇಹದಲ್ಲಿ ಸಂಭವಿಸುವ ದೈಹಿಕ ಬದಲಾವಣೆಗಳನ್ನು ವಿವರಿಸಿದ್ದಾರೆ. ಅವರ ಪ್ರಕಾರ ‘ಸಾ*ವಿನ ನಂತರ ದೇಹವು ವಿಶ್ರಾಂತ ಸ್ಥಿತಿಯಲ್ಲಿರುತ್ತದೆಯಾದರೂ, ಸತ್ತ* ತಕ್ಷಣ ದೇಹದಿಂದ ದ್ರವಗಳು ಹೊರಬರುತ್ತವೆ. ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸ*ತ್ತ ಬಳಿಕ ದೇಹದ ಎಲ್ಲಾ ಭಾಗಗಳಿಂದಲೂ ನೀರು ಬರುತ್ತವೆ. ಕೆಲವೊಮ್ಮೆ ಕಣ್ಣು, ಮೂಗು, ಕಿವಿಗಳಿಂದಲೂ ನೀರು ಬರುತ್ತವೆ. ದೇಹ ಸಂಪೂರ್ಣ ಶಾಂತವಾಗಿರುವ ಹಿನ್ನೆಲೆಯಲ್ಲಿ ದೇಹದಲ್ಲಿ ಉಳಿದುಕೊಂಡಿರುವ ಮೂತ್ರ ಮತ್ತು ಮಲ ಕೂಡ ಕೆಲವೊಮ್ಮೆ ಹೊರಕ್ಕೆ ಬರುತ್ತದೆ. ಇದನ್ನು ನೋಡಿ ಕುಟುಂಬಸ್ಥರು ಭಯ ಪಡುವ ಅಗತ್ಯವಿಲ್ಲ’ ಎಂದಿದ್ದಾರೆ.
ಸಾ*ವು ಬಹುಶಃ ಬದುಕಿಗಿಂತ ನಮ್ಮನ್ನು ಹೆಚ್ಚು ಕಾಡುವುದು. ಸಾ*ವು ಎಂದರೆ ನೋವು. ಸಾ*ವು ಎಂದರೆ ಅಂತ್ಯ. ಸ*ತ್ತಾಗ ದೇಹ ಕೊಳೆಯುತ್ತವೆ ಮತ್ತು ಕ್ಯಾರಿಯನ್ ಕೀಟಗಳಿಂದ ವಸಾಹತು ಮಾಡಬಹುದು. ಮೃ*ತ ದೇಹದ ವಾಸನೆಯನ್ನು ಸಹಿಸಲೂ ಅಸಾಧ್ಯ ಆದ್ದರಿಂದ ಸ*ತ್ತ 24 ಗಂಟೆಗಳ ಒಳಗಾಗಿ ಅಂ*ತ್ಯ ಸಂಸ್ಕಾರವನ್ನು ಮಾಡುವುದು ಸೂಕ್ತ.
ಉದ್ಯೋಗದ ಸ್ಥಳಗಳಲ್ಲಿ ಸಹೋದ್ಯೋಗಿ ಮಿತ್ರರ ಜೊತೆಗೆ ಒಂದೊಳ್ಳೆ ಬಾಂಧ್ಯವವನ್ನು ಎಲ್ಲರೂ ಇಟ್ಟುಕೊಂಡಿರುತ್ತಾರೆ. ಆಫೀಸಿನಲ್ಲಿ ಸಹೋದ್ಯೋಗಿಗಳೊಂದಿಗೆ ಈ ಕೆಲವು ವಿಷಯಗಳನ್ನು ಹಂಚಿಕೊಳ್ಳಬಾರದಂತೆ. ಇದರಿಂದ ಉದ್ಯೋಗಕ್ಕೆ ತೊಡಕಾಗುವ ಸಾಧ್ಯತೆಯೇ ಹೆಚ್ಚು.
ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಸಾಲ, ಸಂಬಳ ಹಾಗೂ ಹೂಡಿಕೆಗಳಂತಹ ವಿಷಯಗಳನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಬೇಡಿ. ಬಾಸ್ ಬಗ್ಗೆ ಅಥವಾ ಇನ್ನಿತ್ತರ ಸಹೋದ್ಯೋಗಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಲೇಬೇಡಿ. ಆರೋಗ್ಯಕ್ಕೆ ಸಂಬಂಧಿತ ಕೆಲವು ವೈಯಕ್ತಿಕ ವಿಷಯಗಳನ್ನು ಆಪ್ತ ಸಹೋದ್ಯೋಗಿ ಬಳಿ ಹೇಳಬೇಡಿ.
ರಾಜಕೀಯ ಅಥವಾ ಧಾರ್ಮಿಕ ನಂಬಿಕೆಗಳ ಬಗೆಗಿನ ಅಭಿಪ್ರಾಯವನ್ನು ಮುಕ್ತವಾಗಿ ಯಾರೊಂದಿಗೆ ಹಂಚಿಕೊಳ್ಳಬೇಡಿ. ಸಹೋದ್ಯೋಗಿ ಮಿತ್ರರೊಂದಿಗೆ ಭವಿಷ್ಯದ ಯೋಜನೆಗಳು ಮತ್ತು ವೃತ್ತಿ ಗುರಿಗಳ ಬಗ್ಗೆ ಮಾತನಾಡುವುದನ್ನು ಆದಷ್ಟು ತಪ್ಪಿಸಿ.
ಜನರ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತಿವೆ. ವೃತ್ತಿಪರ ಒತ್ತಡ ಹಾಗೂ ವೈಯಕ್ತಿಕ ಕಾರಣಗಳಿಂದ ತೀವ್ರ ಮಾನಸಿಕ ಆಯಾಸ ಅನುಭವಿಸ್ತಿದ್ದಾರೆ. ಈ ರೀತಿಯ ಜೀವನಶೈಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.
ಅದರಲ್ಲೂ ತಲೆನೋವು ಸಾಮಾನ್ಯ ಸಮಸ್ಯೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ತಲೆನೋವು ಕೆಲವರಿಗೆ ಸಾಮಾನ್ಯವಾಗಿದ್ದರೆ, ಇನ್ನೂ ಕೆಲವರಿಗೆ ಆಗಾಗ ಬರುತ್ತಿರುತ್ತದೆ. ಈ ನೋವು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಒತ್ತಡ, ಹೆಚ್ಚಿದ ಆತಂಕ, ಆಯಾಸ, ಅತಿಯಾದ ಕೆಲಸ, ಕೆಟ್ಟ ಅಭ್ಯಾಸಗಳು ಕಾರಣಗಳಿರಬಹುದು. ಕೆಲವೊಮ್ಮೆ ಕಾರಣವಿಲ್ಲದೆಯೂ ತಲೆನೋವು ಬರಬಹುದು!
ತಲೆನೋವು ಬಂದಾಗ ಕೆಲವರು ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಆರೋಗ್ಯದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುತ್ತದೆ. ಈ ನೋವು ನಿವಾರಕ ಮಾತ್ರೆಗಳು ವಿವಿಧ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಇದರಿಂದ ದೊಡ್ಡ ದೊಡ್ಡ ಸಮಸ್ಯೆಗಳೇ ಎದುರಾಗಬಹುದು! ತಲೆನೋವು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಈ ಕೆಳಗಿನ ವಿಶಿಷ್ಟ ಮನೆಮದ್ದುಗಳನ್ನು ಮಾಡಿ. ಇದರಿಂದ ನೋವಿನ ಸಮಸ್ಯೆ ದೂರವಾಗುತ್ತದೆ ಎನ್ನುತ್ತಾರೆ ತಜ್ಞರು.
ಹೈಡ್ರೇಟೆಡ್ ಆಗಿರಿ!
ತಲೆನೋವಿಗೆ ಸಾಮಾನ್ಯ ಕಾರಣವೆಂದರೆ ನಿರ್ಜಲೀಕರಣ. ಪ್ರತಿದಿನ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿದರೆ ನಿರ್ಜಲೀಕರಣದ ಅಪಾಯ ಕಡಿಮೆ ಮಾಡಬಹುದು. ಇದು ತಲೆನೋವನ್ನು ಸಹ ಕಡಿಮೆ ಮಾಡುತ್ತದೆ.
ಯೋಗ-ಧ್ಯಾನ
ಯೋಗ-ಧ್ಯಾನ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯ ದಿನಗಳಲ್ಲಿಯೂ ಮಾಡಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ತಲೆನೋವನ್ನು ತಡೆಯುತ್ತದೆ.
ಬೀಜಗಳನ್ನು ತಿನ್ನಿರಿ
ವಾಲ್‌ನಟ್ಸ್, ಬಾದಾಮಿ ಮತ್ತು ಗೋಡಂಬಿಯನ್ನು ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಅವುಗಳಲ್ಲಿ ಉತ್ತಮ ಮೆಗ್ನೀಸಿಯಮ್ ಹೊಂದಿವೆ. ಇದು ತಲೆನೋವನ್ನು ನಿವಾರಿಸುತ್ತದೆ.
ಶುಂಠಿ ಚಹಾ
ಶುಂಠಿ ಟೀ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ತಲೆನೋವನ್ನು ಕಡಿಮೆ ಮಾಡುತ್ತದೆ. ಶುಂಠಿ ಚಹಾ ಅನೇಕ ಜನರಿಗೆ ಮಾನಸಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ಸಾಕಷ್ಟು ವಿಶ್ರಾಂತಿ ಪಡೆಯಿರಿ
ನಿಮಗೆ ಆಗಾಗ್ಗೆ ತಲೆನೋವು ಇದ್ದರೆ ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ.