Connect with us

Sports

ಪಿಂಕ್ ಬಾಲ್ ನ ಬೆಲೆ ಕೇಳಿದರೆ ನೀವೂ ಶಾಕ್ ಆಗ್ತಿರಾ !

Published

on

ಮಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಆರಂಭವಾಗಿದೆ. ಇದು ಹಗಲು ರಾತ್ರಿ ಟೆಸ್ಟ್ ಆಗಿರುವುದರಿಂದ ಪಿಂಕ್ ಬಾಲ್​ನೊಂದಿಗೆ ಆಡಿಲೇಡ್ ಓವಲ್‌ನಲ್ಲಿ ಈ ಟೆಸ್ಟ್ ಆಡಲಾಗುತ್ತಿದೆ.

ಪರ್ತ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಈ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂದು ಆರಂಭವಾಗಿರುವ ಅಡಿಲೇಡ್ ಟೆಸ್ಟ್ ಪಂದ್ಯ ಹಗಲು-ರಾತ್ರಿ ಮಾದರಿಯಲ್ಲಿ ಆಡಲಾಗುತ್ತಿದ್ದು, ಇದಕ್ಕಾಗಿ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ.
ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಚೆಂಡು ಕೆಂಪು ಬಣ್ಣದಾಗಿರುತ್ತದೆ. ಆದರೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುವ ಕಾರಣ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಹೊಸ ಕರೆನ್ಸಿ ನೋಟುಗಳ ಮುದ್ರಣಕ್ಕೆ ಮುಂದಾದ ಬಾಂಗ್ಲಾ: ಮುಜೀಬುರ್ ರೆಹಮಾನ್ ಭಾವಚಿತ್ರಕ್ಕೆ ವಿದಾಯ ಹೇಳಿದ ನೂತನ ಸರ್ಕಾರ !

ಗುಲಾಬಿ ಚೆಂಡಿನ ವಿಶೇಷತೆ
ಗುಲಾಬಿ ಚೆಂಡಿನ ಮೇಲೆ ಹೆಚ್ಚುವರಿ ಬಣ್ಣದ ಪದರಗಳಿರುತ್ತದೆ. ಅಂದರೆ ಕೆಂಪು ಚೆಂಡಿಗೆ ಹೋಲಿಸಿದರೆ ಪಿಂಕ್ ಬಾಲ್ ನಲ್ಲಿ ಹೆಚ್ಚಿನ ಪದರಗಳನ್ನು ಹೊಂದಿದೆ.
ಪಿಂಕ್ ಬಾಲ್ ನಲ್ಲಿ ಸಾಮಾನ್ಯವಾಗಿ 40 ಓವರ್ ಗಳವರೆಗೆ ಹೊಳಪು ಉಳಿದಿರುತ್ತದೆ. ಆದ್ದರಿಂದ, ಈ ಬಾಲ್ ನಲ್ಲಿ ಬೌಲರ್ ಗಳು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಾರೆ. ಬಾಲ್ ಹೆಚ್ಚು ಸ್ವಿಂಗ್ ಮತ್ತು ಸೀಮ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.

ಗುಲಾಬಿ ಚೆಂಡಿನ ಬೆಲೆ ಎಷ್ಟು ?
ಅಡಿಲೇಡ್ ಟೆಸ್ಟ್ ನಲ್ಲಿ ಕೂಕಬುರಾ ಕಂಪನಿಯ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ವರದಿಗಳ ಪ್ರಕಾರ ಗುಲಾಬಿ ಬಣ್ಣದ ಚೆಂಡಿನ ಬೆಲೆ ಸುಮಾರು 20-25 ಸಾವಿರ ರೂ. ಆಗಿರುತ್ತದೆ.

LATEST NEWS

ಆಯ್ಕೆ ಸಮಿತಿಗೆ ಎಚ್ಚರಿಕೆ ನೀಡಿದ ಬಿಸಿಸಿಐ ಕಾರ್ಯದರ್ಶಿ

Published

on

ಮಂಗಳೂರು/ಮುಂಬೈ : ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿರುವ ಟೀಂ ಇಂಡಿಯಾದ ಸ್ಥಿತಿ ಚಿಂತಾಜನಕವಾಗಿದೆ.

ನ್ಯೂಜಿಲೆಂಡ್ ವಿರುದ್ದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಬಿಟ್ಟುಕೊಟ್ಟಿತು. ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಗೆದ್ದುಕೊಂಡಿತು. ಇದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿದ್ದು, ಆಯ್ಕೆ ಸಮಿತಿಗೆ ಸರಿಯಾದ ತಂಡವನ್ನು ಆಯ್ಕೆ ಮಾಡುವಂತೆ ಸೂಚನೆ ಕೊಟ್ಟಿದೆ. ಜಯ್ ಶಾ ಬದಲಿಗೆ ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆ ಅಲಂಕರಿಸಿರುವ ದೇವಜಿತ್ ಸೈಕಿಯಾ, ಆಯ್ಕೆ ಸಮಿತಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಶಾರುಖ್ ಪತ್ನಿ ಗೌರಿ ಮತಾಂತರ? 

ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೀಕೆಗಳನ್ನು ಎದುರಿಸಿದ್ದರು. ಪರ್ತ್ ಟೆಸ್ಟ್ ನಲ್ಲಿ ಕೊಹ್ಲಿ ಶತಕ ಬಾರಿಸಿ ಮಿಂಚಿದರು. ಇದರ ಹೊರತಾಗಿ ಇಡೀ ಸರಣಿಯಲ್ಲಿ ಕೇವಲ 190 ರನ್ ಗಳಿಸಿದರು. ರೋಹಿತ್ ಶರ್ಮಾ ಸ್ಥಿತಿ ಅದಕ್ಕಿಂತ ಕೆಟ್ಟದಾಗಿತ್ತು. 5 ಇನ್ನಿಂಗ್ಸ್ ಗಳಲ್ಲಿ ಕೇವಲ 31 ರನ್ ಗಳಿಸಿದರು. ಸೆಪ್ಟೆಂಬರ್ ನಿಂದ ಆಡಿದ 8 ಟೆಸ್ಟ್ ಪಂದ್ಯಗಳಲ್ಲಿ ಅವರು ಕೇವಲ 164 ರನ್ ಗಳಿಸಿದ್ದಾರೆ.

ಬಿಸಿಸಿಐನ ವಿಶೇಷ ಸಾಮಾನ್ಯ ಸಭೆ ಜನವರಿ 12 ರಂದು ನಡೆಯಲಿದೆ. ಕ್ರಿಕೆಟ್ ಜಗತ್ತಿಗೆ ತುಂಬಾ ತಪ್ಪು ಸಂದೇಶ ರವಾನೆ ಆಗುತ್ತಿದೆ. ಬಿಸಿಸಿಐ ಕ್ರಿಕೆಟ್ ಅನ್ನು ಎತ್ತರಕ್ಕೆ ಕೊಂಡೊಯ್ಯಬೇಕು. ಈಗ ಅದಕ್ಕೆ ಸಮಯ ಬಂದಿದೆ. ಆಟಗಾರರಿಗೆ ಬಿಸಿಸಿಐನ ಕಟ್ಟುನಿಟ್ಟಿನ ಸಂದೇಶ ನೀಡಬೇಕು. ಯಾವುದೇ ಆಟಗಾರ ಆಟಕ್ಕಿಂತ ಮೇಲ್ಪಟ್ಟವನಲ್ಲ. ಅದಕ್ಕೆ ಹೊಸ ತಂಡವನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Continue Reading

LATEST NEWS

ಐಸಿಸಿಯಿಂದ ಹೊಸ ನಿಯಮ ರೂಪಿಸಲು ಚಿಂತನೆ; ಟು-ಟೈರ್ ಟೆಸ್ಟ್ ನಿಯಮಕ್ಕೆ ಸಿದ್ದತೆ ?

Published

on

ಮಂಗಳೂರು/ದುಬೈ : ಟೆಸ್ಟ್ ಗಿರುವ ದೊಡ್ಡ ಸಂಖ್ಯೆಯ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ದೈತ್ಯ ರಾಷ್ಟ್ರಗಳ ಮಧ್ಯೆ ಟೆಸ್ಟ್ ಸರಣಿಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ಯೋಚಿಸುತ್ತಿದೆ ಎಂದು ವರದಿಯಾಗಿದೆ.

 

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳ ಜತೆ ಸೇರಿ ಟು-ಟೈರ್ (ಎರಡು ಸ್ಥರ) ಟೆಸ್ಟ್ ನಿಯಮ ತರಲು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಚಿಂತನೆ ನಡೆಸುತ್ತಿದೆ.

ಈ ಬಗ್ಗೆ ಐಸಿಸಿಯ ನೂತನ ಅಧ್ಯಕ್ಷ ಜಯ್ ಶಾ, ಟು-ಟೈರ್ ಟೆಸ್ಟ್ ನಿಯಮದ ವಿಚಾರವಾಗಿಯೇ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಅಧ್ಯಕ್ಷ ಮೈಕ್ ಬೈರ್ಡ್, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನ (ಇಸಿಬಿ) ರಿಚರ್ಡ್ ಥಾಮ್ಸನ್ ಅವರನ್ನು ಈ ತಿಂಗಳಾಂತ್ಯದಲ್ಲಿ ಭೇಟಿ ಮಾಡಲಿದ್ದಾರೆ. ಈ ವೇಳೆ ಹೊಸ ನಿಯಮದ ಬಗ್ಗೆ ಚರ್ಚಿಸಿ ನಿರ್ಧರಿಸಲಿದ್ದಾರೆ ಎನ್ನಲಾಗಿದೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಸ್ಥರ ನಿಯಮ ಜಾರಿ ?
ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಸ್ಥರ ನಿಯಮ ಸದ್ಯಕ್ಕೆ ಜಾರಿಗೊಳಿಸುವ ಸಾಧ್ಯತೆ ಇಲ್ಲ. ಏಕೆಂದರೆ ಈಗಾಗಲೇ 2027ರ ವರೆಗೆ ಚಾಲ್ತಿಯಲ್ಲಿರುವ ಕ್ರಿಕೆಟ್ ವೇಳಾಪಟ್ಟಿ ಮುಕ್ತಾಯದ ಬಳಿಕವೇ ಹೊಸ ನಿಯಮ ಜಾರಿಗೊಳಿಸುವ ಸಾಧ್ಯತೆ ಇದೆ.

ಪ್ರತಿಕ್ರಿಯಿಸಿದ ಬಿಸಿಸಿಐ
ಈ ಎಲ್ಲಾ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಂಥ ಬದಲಾವಣೆಯ ಬಗ್ಗೆ ನಮಗೇನೂ ಮಾಹಿತಿ ಬಂದಿಲ್ಲ. ಸದ್ಯ ನಾವೀಗ ಜ. 12ರಂದು ಮುಂಬಯಿಯಲ್ಲಿ ನಡೆಯುವ ಬಿಸಿಸಿಐ ವಿಶೇಷ ಸಭೆಗೆ ಸಿದ್ದತೆ ನಡೆಸುತ್ತಿದ್ದೇವೆ. ಸಭೆಯಲ್ಲಿ ಇತ್ತೀಚೆಗಷ್ಟೇ ಮಕ್ತಾಯಗೊಂಡ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದಿದೆ.

ಟು-ಟೈರ್ ಟೆಸ್ಟ್ ಅಂದರೆ ಏನು ?
ಟು-ಟೈರ್ ಟೆಸ್ಟ್ ಸಿಸ್ಟಮ್ ಅಥವಾ ಎರಡು ಸ್ಥರ ಟೆಸ್ಟ್ ನಿಯಮದ ಬಗೆಗಿನ ವಿಷಯ ಹೊಸದೇನೂ ಅಲ್ಲ. 2016ರಿಂದಲೇ ಇಂಥದ್ದೊಂದು ನಿಯಮ ರೂಪಿಸುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ನಿಯಮ ಜಾರಿಯಾದರೆ, ಟೆಸ್ಟ್ ಕ್ರಿಕೆಟ್ ಗೆ ದೊಡ್ಡ ಮಟ್ಟದ ವೀಕ್ಷಕರಿರುವ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂಥ ಬಲಿಷ್ಠ ದೇಶಗಳು ಆಡುವ ಟೆಸ್ಟ್ ಸರಣಿಗಳ ಸಂಖ್ಯೆ ಹೆಚ್ಚಾಗಲಿದೆ.

2016ರಲ್ಲಿ ಈ ನಿಯಮದ ಕುರಿತು ಮಾತುಗಳು ಕೇಳಿಬಂದಾಗ, ಬಿಸಿಸಿಐ ಸೇರಿ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳು ವಿರೋಧಿಸಿದ್ದವು. ಈ ನಿಯಮದಿಂದ ಸಣ್ಣ ರಾಷ್ಟ್ರಗಳಿಗೆ ಅವಕಾಶಗಳು ಕಡಿಮೆಯಾಗಿ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ ಎನ್ನುವ ಆತಂಕ ಈ ದೇಶಗಳದ್ದಾಗಿತ್ತು. ಆದರೆ ಆ ಬಳಿಕ ಭಾರತದಲ್ಲಿ ಕ್ರಿಕೆಟ್ ದೊಡ್ಡಮಟ್ಟದಲ್ಲಿ ಜನಪ್ರಿಯಗೊಂಡು, ಈಗ ಬಿಸಿಸಿಐ ಕೂಡ ಟು-ಟೈರ್ ನಿಯಮಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಇದೆ.

ಟು-ಟೈರ್ ಟೆಸ್ಟ್ ಪಟ್ಟಿಯಲ್ಲಿ ಎರಡು ಸ್ಥರದ ತಂಡಗಳು
ಟು-ಟೈರ್ ಟೆಸ್ಟ್ ನಿಯಮಕ್ಕೆ ಒಂದನೇ ಸ್ಥರದ ತಂಡಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಿವೆ.
2ನೇ ಸ್ಥರದ ಪಟ್ಟಿಯಲ್ಲಿ ವೆಸ್ಟ್ ಇಂಡಿಸ್, ಬಾಂಗ್ಲಾದೇಶ, ಜಿಂಬಾಬ್ವೆ, ಐರ್ಲೆಂಡ್ ಮತ್ತು ಅಫ್ಘಾನಿಸ್ಥಾನ ತಂಡಗಳಿವೆ.

Continue Reading

LATEST NEWS

ಟೀಂ ಇಂಡಿಯಾಗೆ ಆಘಾತ; ಪ್ರಮುಖ ಸರಣಿಯಿಂದ ಬುಮ್ರಾ ಔಟ್ !

Published

on

ಮಂಗಳೂರು/ಮುಂಬೈ : ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಗಿಸಿರುವ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ದದ ತವರಿನ ಸರಣಿಗೆ ಅಣಿಯಾಗುತ್ತಿರುವ ಸಂದರ್ಭದಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ.

ಪ್ರವಾಸಿ ಇಂಗ್ಲೆಂಡ್ ವಿರುದ್ದ ಭಾರತ ತಂಡವು ಐದು ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅದರ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಟ ನಡೆಯಲಿದೆ. ಆದರೆ ಆಸ್ಟ್ರೇಲಿಯಾ ಸರಣಿಯಲ್ಲಿ ಮಿಂಚಿದ ವೇಗಿ, ಸರಣಿಶ್ರೇಷ್ಠ ಪ್ರಶಸ್ತಿ ವಿಜೇತ ಜಸ್ ಪ್ರೀತ್ ಬುಮ್ರಾ ಅವರು ಸರಣಿಯ ಕೊನೆಯಲ್ಲಿ ಗಾಯಗೊಂಡಿದ್ದಾರೆ.

ಸಿಡ್ನಿ ಟೆಸ್ಟ್ ನ ಕೊನೆಯಲ್ಲಿ ಅವರು ಬೆನ್ನುನೋವಿನಿಂದ ಬಳಲುತ್ತಿದ್ದರು. ಹೀಗಾಗಿಯೇ ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಇದೀಗ ಜಸ್ ಪ್ರೀತ್ ಬುಮ್ರಾ ಅವರಿಗೆ ವಿಶಾಂತ್ರಿ ನೀಡಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾಗೆ ಮತ್ತೊಂದು ಆಘಾತ; ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್

ಮುಂಬರುವ ಚಾಂಪಿಯನ್ಸ್ ಟ್ರೋಫಿ ಕೂಟವನ್ನು ಗಮನದಲ್ಲಿರಿಸಿಕೊಂಡು ಇಂಗ್ಲೆಂಡ್ ಸರಣಿಯ ಹೆಚ್ಚಿನ ಭಾಗಕ್ಕೆ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ.

ಬುಮ್ರಾ ಅವರ ಬೆನ್ನು ಸೆಳೆತದ ತೀವ್ರತೆಯ ಬಗ್ಗೆ ಇನ್ನೂ ಖಚಿತಪಡಿಸಲಾಗಿಲ್ಲ. ಒಂದು ವೇಳೆ ಬುಮ್ರಾ ಅವರ ಗಾಯವು ಗ್ರೇಡ್ 1 ವರ್ಗದಲ್ಲಿದ್ದರೆ, ಕನಿಷ್ಟ ಎರಡು ಮೂರು ವಾರಗಳ ವಿಶ್ರಾಂತಿ ಬೇಕಾಗುತ್ತದೆ. ಗ್ರೇಡ್ 2 ಗಾಯದ ಸಂದರ್ಭದಲ್ಲಿ, ಚೇತರಿಕೆಯು ಆರು ವಾರಗಳವರೆಗೆ ಹೋಗಬಹುದು.

ಆದರೆ, ಗ್ರೇಡ್ 3 ಅತ್ಯಂತ ತೀವ್ರವಾದದ್ದು, ಕನಿಷ್ಠ ಮೂರು ತಿಂಗಳ ವಿಶ್ರಾಂತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಅಗತ್ಯವಿರುತ್ತದೆ. ಹೀಗಾಗಿ ಇಂಗ್ಲೆಂಡ್ ಸರಣಿಗೆ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

Continue Reading

LATEST NEWS

Trending

Exit mobile version