sports
ಪಿಂಕ್ ಬಾಲ್ ನ ಬೆಲೆ ಕೇಳಿದರೆ ನೀವೂ ಶಾಕ್ ಆಗ್ತಿರಾ !
Published
1 month agoon
By
NEWS DESK3ಮಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಆರಂಭವಾಗಿದೆ. ಇದು ಹಗಲು ರಾತ್ರಿ ಟೆಸ್ಟ್ ಆಗಿರುವುದರಿಂದ ಪಿಂಕ್ ಬಾಲ್ನೊಂದಿಗೆ ಆಡಿಲೇಡ್ ಓವಲ್‌ನಲ್ಲಿ ಈ ಟೆಸ್ಟ್ ಆಡಲಾಗುತ್ತಿದೆ.
ಪರ್ತ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ ಈ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇಂದು ಆರಂಭವಾಗಿರುವ ಅಡಿಲೇಡ್ ಟೆಸ್ಟ್ ಪಂದ್ಯ ಹಗಲು-ರಾತ್ರಿ ಮಾದರಿಯಲ್ಲಿ ಆಡಲಾಗುತ್ತಿದ್ದು, ಇದಕ್ಕಾಗಿ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ.
ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಚೆಂಡು ಕೆಂಪು ಬಣ್ಣದಾಗಿರುತ್ತದೆ. ಆದರೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುವ ಕಾರಣ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ.
ಇದನ್ನೂ ಓದಿ: ಹೊಸ ಕರೆನ್ಸಿ ನೋಟುಗಳ ಮುದ್ರಣಕ್ಕೆ ಮುಂದಾದ ಬಾಂಗ್ಲಾ: ಮುಜೀಬುರ್ ರೆಹಮಾನ್ ಭಾವಚಿತ್ರಕ್ಕೆ ವಿದಾಯ ಹೇಳಿದ ನೂತನ ಸರ್ಕಾರ !
ಗುಲಾಬಿ ಚೆಂಡಿನ ವಿಶೇಷತೆ
ಗುಲಾಬಿ ಚೆಂಡಿನ ಮೇಲೆ ಹೆಚ್ಚುವರಿ ಬಣ್ಣದ ಪದರಗಳಿರುತ್ತದೆ. ಅಂದರೆ ಕೆಂಪು ಚೆಂಡಿಗೆ ಹೋಲಿಸಿದರೆ ಪಿಂಕ್ ಬಾಲ್ ನಲ್ಲಿ ಹೆಚ್ಚಿನ ಪದರಗಳನ್ನು ಹೊಂದಿದೆ.
ಪಿಂಕ್ ಬಾಲ್ ನಲ್ಲಿ ಸಾಮಾನ್ಯವಾಗಿ 40 ಓವರ್ ಗಳವರೆಗೆ ಹೊಳಪು ಉಳಿದಿರುತ್ತದೆ. ಆದ್ದರಿಂದ, ಈ ಬಾಲ್ ನಲ್ಲಿ ಬೌಲರ್ ಗಳು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತಾರೆ. ಬಾಲ್ ಹೆಚ್ಚು ಸ್ವಿಂಗ್ ಮತ್ತು ಸೀಮ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಗುಲಾಬಿ ಚೆಂಡಿನ ಬೆಲೆ ಎಷ್ಟು ?
ಅಡಿಲೇಡ್ ಟೆಸ್ಟ್ ನಲ್ಲಿ ಕೂಕಬುರಾ ಕಂಪನಿಯ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ವರದಿಗಳ ಪ್ರಕಾರ ಗುಲಾಬಿ ಬಣ್ಣದ ಚೆಂಡಿನ ಬೆಲೆ ಸುಮಾರು 20-25 ಸಾವಿರ ರೂ. ಆಗಿರುತ್ತದೆ.
LATEST NEWS
ಇಂಗ್ಲೆಂಡ್ ವಿರುದ್ದ ಟಿ20 ಸರಣಿಗೆ ಭಾರತ ತಂಡ ಪ್ರಕಟ; 790 ದಿನಗಳ ಬಳಿಕ ಶಮಿ ಕಮ್ ಬ್ಯಾಕ್
Published
2 days agoon
12/01/2025By
NEWS DESK3ಮಂಗಳೂರು/ಮುಂಬೈ : ಜನವರಿ 22ರಿಂದ ಆರಂಭವಾಗುವ ಭಾರತ-ಇಂಗ್ಲೆಂಡ್ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ಟೀಂ ಇಂಡಿಯಾದಲ್ಲಿ ಈ ಬಾರಿ ನಿರೀಕ್ಷೆಯಂತೆ ಸ್ಟಾರ್ ಆಟಗಾರರಿಗೆ ಕೊಕ್ ಕೊಟ್ಟಿದ್ರೆ, ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟವಾಗಿದೆ. ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಕೆ.ಎಲ್ ರಾಹುಲ್ ಮುಂತಾದ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
15 ಸದಸ್ಯರ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಪ್ರಮುಖ ವೇಗಿ ಮೊಹಮ್ಮದ್ ಶಮಿ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಭಾರತ ಟಿ20 ತಂಡಕ್ಕೆ 34 ವರ್ಷದ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 790 ದಿನಗಳ ದಿನಗಳ ಬಳಿಕ ಎಂಬುದೇ ಅಚ್ಚರಿ. ಅಂದರೆ ಮೊಹಮ್ಮದ್ ಶಮಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಟಿ20 ಪಂದ್ಯವಾಡಿದ್ದು 2022 ರಲ್ಲಿ. ಇದೀಗ 2 ವರ್ಷಗಳ ಬಳಿಕ ಮತ್ತೆ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಿರುವುದೇ ಅಚ್ಚರಿ.
ಏಕೆಂದರೆ ಮೊಹಮ್ಮದ್ ಶಮಿ ಅವರು 2022 ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ 3 ಓವರ್ಗಳನ್ನು ಎಸೆದಿದ್ದ ಶಮಿ 39 ರನ್ ನೀಡಿ ದುಬಾರಿಯಾಗಿದ್ದರು.
ಈ ಕಳಪೆ ಪ್ರದರ್ಶನದ ಬಳಿಕ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಿರಲಿಲ್ಲ. ಅಲ್ಲದೆ ಏಕದಿನ ಮತ್ತು ಟೆಸ್ಟ್ ತಂಡಗಳಲ್ಲಿ ಮಾತ್ರ ಸ್ಥಾನ ನೀಡಲಾಗುತ್ತಿತ್ತು. ಆದರೀಗ 790 ದಿನಗಳ ಬಳಿಕ ಮೊಹಮ್ಮದ್ ಶಮಿ ಅವರನ್ನು ಟಿ20 ತಂಡಕ್ಕೆ ಕರೆತರಲಾಗಿದೆ.
ಇದನ್ನೂ ಓದಿ: ಮಂಗಳೂರು ಸೇರಿ ದೇಶದ 15 ನಗರಗಳಲ್ಲಿ ವಾಟರ್ ಮೆಟ್ರೋ ಯೋಜನೆ; ಏನಿದರ ವಿಶೇಷತೆ ?
ಚಾಂಪಿಯನ್ಸ್ ಟ್ರೋಫಿಗೆ ಶಮಿ ಅವಶ್ಯಕ
ಶಮಿ 2023ರ ಏಕದಿನ ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕಣಕ್ಕಿಳಿದಿಲ್ಲ. ಇದೀಗ ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಶಮಿ ಅವರ ಅವಶ್ಯಕತೆ ಟೀಮ್ ಇಂಡಿಯಾಗೆ ಇದೆ.
ಆದರೆ ಅದಕ್ಕೂ ಮುನ್ನ ಅವರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ. ಇದಕ್ಕಾಗಿಯೇ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಮಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಈ ಸರಣಿಯಲ್ಲಿ ಅವರು ಫಿಟ್ನೆಸ್ನೊಂದಿಗೆ ಸಂಪೂರ್ಣ ಓವರ್ಗಳನ್ನು ಎಸೆಯಲು ಯಶಸ್ವಿಯಾದರೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಂಡರೆ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಅವರಿಗೆ ಸ್ಥಾನ ಸಿಗಲಿದೆ. ಹಾಗಾಗಿ ಮುಂಬರುವ 5 ಪಂದ್ಯಗಳ ಟಿ20 ಸರಣಿಯು ಶಮಿ ಪಾಲಿಗೆ ಅಗ್ನಿಪರೀಕ್ಷೆಯಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪ ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್).
LATEST NEWS
ದಿಢೀರ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ ವರುಣ್ ಆರನ್
Published
4 days agoon
10/01/2025By
NEWS DESK2ನವದೆಹಲಿ: ವರುಣ್ ಆರನ್ ಶುಕ್ರವಾರ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹೃದಯಸ್ಪರ್ಶಿ ಪೋಸ್ಟ್ನೊಂದಿಗೆ ಎಲ್ಲಾ ರೀತಿಯ ಕ್ರಿಕೆಟ್’ನಿಂದ ನಿವೃತ್ತಿ ಘೋಷಿಸಿದ್ದಾರೆ.
ಅಂದ್ಹಾಗೆ, ವರುಣ್, 2010-11ರ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಗುಜರಾತ್ ವಿರುದ್ಧ 153 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಸುದ್ದಿಯಾಗಿದ್ದರು.
ದುರದೃಷ್ಟವಶಾತ್, ಭಾರತೀಯ ವೇಗದ ಬೌಲರ್ ವೃತ್ತಿಜೀವನವು ಪುನರಾವರ್ತಿತ ಗಾಯಗಳಿಂದ ಬಳಲುತ್ತಿದೆ. ಯಾಕಂದ್ರೆ, ವರುಣ್ ಆರನ್, ಒಟ್ಟು 18 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನ ಪ್ರತಿನಿಧಿಸಿದ್ದು, ಕೇವಲ 29 ವಿಕೆಟ್ಗಳನ್ನು ಪಡೆದಿದ್ದಾರೆ. ಆದಾಗ್ಯೂ, ಆರೋನ್ ನಿಯಮಿತವಾಗಿ ಜಾರ್ಖಂಡ್ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದರು.
ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ವರುಣ್ ಆರನ್ .!
ಗಾಯಗಳಿಂದಾಗಿ ವರುಣ್ ಆರೋನ್ ಕಳೆದ ಫೆಬ್ರವರಿಯಲ್ಲಿ ರೆಡ್-ಬಾಲ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು, ಮತ್ತು ಈಗ ಅವರು ಅಂತಿಮವಾಗಿ ಎಲ್ಲಾ ರೀತಿಯ ಆಟದಿಂದ ಹೊರಗುಳಿದಿದ್ದಾರೆ. ಜನವರಿ 10 ರಂದು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ 2024-25 ರಲ್ಲಿ ಗೋವಾ ವಿರುದ್ಧ ಜಾರ್ಖಂಡ್ ಪರ ವೇಗದ ಬೌಲರ್ ತಮ್ಮ ಕೊನೆಯ ಪಂದ್ಯವನ್ನ ಆಡಿದರು.
ತಮ್ಮ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಸಮಯವನ್ನ ಕರೆದ ಆರೋನ್ ಇನ್ಸ್ಟಾಗ್ರಾಮ್’ನಲ್ಲಿ, “ಕಳೆದ 20 ವರ್ಷಗಳಿಂದ, ನಾನು ವೇಗವಾಗಿ ಬೌಲಿಂಗ್ ಮಾಡುವ ಅವಸರದಲ್ಲಿ ಬದುಕಿದ್ದೇನೆ, ಉಸಿರಾಡಿದ್ದೇನೆ ಮತ್ತು ಅಭಿವೃದ್ಧಿ ಹೊಂದಿದ್ದೇನೆ. ಇಂದು, ಅಪಾರ ಕೃತಜ್ಞತೆಯೊಂದಿಗೆ, ನಾನು ಪ್ರತಿನಿಧಿ ಕ್ರಿಕೆಟ್ನಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುತ್ತೇನೆ” ಎಂದು ಹೇಳಿದ್ದಾರೆ.
ಮಂಗಳೂರು/ಮುಂಬೈ : ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಹಿಂದಿ ಬಿಗ್ ಬಾಸ್ ಸೀಸನ್ 18 ಗ್ರ್ಯಾಂಡ್ ಫಿನಾಲೆ ಹತ್ತಿರ ಬಂದಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ನಲ್ಲಿ ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಲ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ.
ಈ ವಾರ ನಡೆಯಲಿರುವ ‘ವೀಕೆಂಡ್ ಕಾ ವಾರ್’ ಎಪಿಸೋಡ್ ನಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗವಹಿಸಲಿದ್ದಾರೆ.
ಕೆಲವು ಮಾಹಿತಿಗಳ ಪ್ರಕಾರ, ಸಲ್ಮಾನ್ ಖಾನ್ ಆಪ್ತ ಸ್ನೇಹಿತೆ ರವಿನಾ ಟಂಡನ್, ಅವರ ಮಗಳು ರಾಶಾ ಹಾಗೂ ಅಜಯ್ ದೇವಗನ್ ಸಹೋದರಳಿಯ ಅಮನ್ ಕೂಡ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರ ಜೊತೆಗೆ ಕ್ರಿಕೆಟಿಗ ಯಜುವೇಂದ್ರ ಚಹಲ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾನು ಮತ್ತು ನನ್ನ ಕುಟುಂಬ ಸದಸ್ಯರು…ವಿಚ್ಛೇದನ ವದಂತಿ ಕುರಿತು ಕೊನೆಗೂ ಮೌನ ಮುರಿದ ಧನಶ್ರೀ ವರ್ಮಾ !
ರವಿನಾ ಟಂಡನ್ ಮತ್ತು ಇತರರು ಸಿನಿಮಾ ಪ್ರಮೋಷನ್ ಸಂಬಂಧ ಶನಿವಾರ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಭಾನುವಾರದ ಎಪಿಸೋಡ್ ನಲ್ಲಿ ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಲ್ ಮತ್ತು ಶಶಾಂಕ್ ಸಿಂಗ್ ಬರಬಹುದು ಎನ್ನಲಾಗುತ್ತಿದೆ. ಈ ಮೂವರು ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಸ್ಪೀನ್ನರ್ ಯಜುವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಭಾರಿ ಸುದ್ದಿಯಲ್ಲಿದ್ದಾರೆ. ಸೆಲೆಬ್ರಿಟಿ ದಂಪತಿಗಳು ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಇದೇ ವದಂತಿಯಲ್ಲಿ ಶ್ರೇಯಸ್ ಅಯ್ಯರ್ ಹೆಸರು ಕೂಡ ಸಿಲುಕಿಕೊಂಡಿದೆ. ಹೀಗಾಗಿ ಶ್ರೇಯಸ್ ಅಯ್ಯರ್, ಚಹಲ್ ಒಟ್ಟಿಗೆ ಶೋನಲ್ಲಿ ಕಾಣಿಸಿಕೊಳ್ಳುತ್ತಿರೋದು ವೀಕ್ಷಕರಿಗೆ ಭಾರೀ ಕುತೂಹಲ ಮೂಡಿಸಿದೆ.
LATEST NEWS
ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹ*ಲ್ಲೆ; ನೌಕಾನೆಲೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ
ವಿದುರನ ಈ ಮೂರು ನಿಯಮಗಳನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತ
ಯಾರದ್ದೋ ಕೊ*ಲೆಗೆ ಸಂಚು; ಬ*ಲಿಯಾದವರು ಮತ್ಯಾರೋ!!
2,700 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಝಡ್ – ಮೋರ್ಹ್ ಸುರಂಗ ಉದ್ಘಾಟಿಸಿದ ಪ್ರಧಾನಿ ಮೋದಿ
ತಿರುಪತಿಯಲ್ಲಿ ಮತ್ತೊಂದು ಅವಘಡ; ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ !
BBK 11: ರಜತ್ಗೆ ಟಾರ್ಗೆಟ್- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್ ಫಿಕ್ಸಿಂಗ್
Trending
- BIG BOSS3 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- LATEST NEWS4 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM6 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- FILM5 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ