Connect with us

    LIFE STYLE AND FASHION

    30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!

    Published

    on

    ಯಾವ ವಯಸಲ್ಲಿ ಮದುವೆಯಾಗುವುದು ಉತ್ತಮ ಎನ್ನುವುದರ ಬಗ್ಗೆ ಗೊಂದಲದಲ್ಲಿರುವವರಿಗೆ ಈ ಸುದ್ದಿ. 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ? ಅಥವಾ ಇಲ್ಲವೇ? ಎನ್ನುವ ಬಗೆಗೆ ಮಾಹಿತಿ ಇಲ್ಲಿವೆ .

    ಎರಡು ಹೃದಯಗಳನ್ನು ಬೆಸೆಯೋದಕ್ಕೆ ಸಹಾಯ ಮಾಡುವ ಅಮೂಲ್ಯವಾದ ಬಂಧವೇ ‘ವಿವಾಹ’. ಗಂಡ ಮತ್ತು ಹೆಂಡತಿಯ ನಡುವಿನ ಆಳವಾದ ಸಂಬಂಧದ ಹೆಸರೇ ‘ಮದುವೆ’, ಸಂತೋಷ ಮತ್ತು ದುಃಖದಲ್ಲಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸುತ್ತಿರಬೇಕು. ಆದರೂ,  30 ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ? ಅಥವಾ ತಪ್ಪೇ ? ಎಂಬ ಪ್ರಶ್ನೆ ಗೊಂದಲವನ್ನು ಸೃಷ್ಠಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು 29 ರಿಂದ 30 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಹೆಚ್ಚಿನ ಜನರ ಯೋಚನೆಯ ಪ್ರಕಾರ ಆ ವಯಸ್ಸಿನಲ್ಲಿ ತಾವು ಆರ್ಥಿಕವಾಗಿ ಸದೃಢರಾಗಿರುತ್ತಾರೆ ಎಂಬುವುದಾಗಿದೆ.

    ನೀವು ಕೂಡ ಮದುವೆಯಾದಲು ಸರಿಯಾದ ವಯಸ್ಸು ಯಾವುದು ಎನ್ನುವ ವಿಷಯದ ಬಗ್ಗೆ ತುಂಬಾ ಗೊಂದಲದಲ್ಲಿದ್ದರೆ, ಈ ಸುದ್ದಿ ನಿಮಗಾಗಿ. 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ಸರಿಯೇ ಅಥವಾ ಇಲ್ಲವೇ ಅನ್ನೋದನ್ನ ಇಂದು ನಾವು ನಿಮಗೆ ಹೇಳುತ್ತೇವೆ.

    30ನೇ ವಯಸ್ಸಿನಲ್ಲಿ ಮದುವೆಯಾಗುವ ನಿರ್ಧಾರ ಸರಿಯಾ ?

    ತಜ್ಞರ ಪ್ರಕಾರ, 30 ನೇ ವಯಸ್ಸಿನಲ್ಲಿ ಮದುವೆಯಾಗುವುದು ತಪ್ಪು. 30 ವರ್ಷದ ನಂತರ ಮದುವೆಯಾದರೆ, ಮಹಿಳೆಯರ ಫಲವತ್ತತೆ ವಿಶೇಷವಾಗಿ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಗರ್ಭಿಣಿಯಾಗುವ ಸಾಧ್ಯತೆ ಕಮ್ಮಿಯಾಗಿರುತ್ತವೆ.

    ಅಷ್ಟೇ ಅಲ್ಲದೇ, 30 ವರ್ಷದವರೆಗೆ ವೀರ್ಯಾಣುಗಳ ಗುಣಮಟ್ಟ ಮತ್ತು ವೀರ್ಯಾಣುಗಳ ಸಂಖ್ಯೆ ಉತ್ತಮವಾಗಿರುತ್ತದೆ, ಆದರೆ 30 ರ ನಂತರ, ವೀರ್ಯಾಣುಗಳ ಗುಣಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದ ಗರ್ಭಧಾರಣೆಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.

    BIG BOSS

    ಉಪಚುನಾವಣೆಯಲ್ಲಿ ಗೆಲುವು; ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    Published

    on

    ಮಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು, ಮಲ್ಲಿಕಟ್ಟೆಯಲ್ಲಿರುವ ಕಚೇರಿಯೆದುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಪರ ಘೋಷಣೆ ಕೂ

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಮಾತನಾಡಿ, ‘ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ’ ಎಂದರು.

    ‘ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಚುನಾವಣೆಯಲ್ಲಿ ಸೋತಿದ್ದಾರೆ‌. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿರುವ ಅಪನಂಬಿಕೆಗೆ ಸಾಕ್ಷಿಯಾಗಿದೆ. ಇನ್ನಾದರೂ ಬಿಜೆಪಿ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ’ ಎಂದು ಹೇಳಿದರು

    Continue Reading

    LIFE STYLE AND FASHION

    ಚಳಿ ಇದೆ ಎಂದು ಬಿಸಿನೀರು ಸ್ನಾನ ಮಾಡೋರಿಗೆ ಬಿಗ್‌ ಶಾಕ್ !!

    Published

    on

    ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ಹೆಚ್ಚಾಗುತ್ತಿದೆ. ತ್ವಚೆ ರಕ್ಷಣೆ ಮತ್ತು ಕಾಳಜಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿಯೇ ಪರಿಹಾರಕ್ಕಾಗಿ ಗೂಗಲ್‌ನ ಮೊರೆಹೋಗುತ್ತಿದ್ದಾರೆ. ಸರಳ ವಿಧಾನದಲ್ಲಿ ತ್ವಚೆ ರಕ್ಷಿಸಿಕೊಳ್ಳುವ ಸಿಂಪಲ್‌ ಟಿಪ್ಸ್ ಇಲ್ಲಿವೆ.

    ಚಳಿಗಾಲದಲ್ಲಿ ಮುಖ ಶುಷ್ಕವಾಗಿರುತ್ತವೆ. ಏಕೆಂದರೆ ಚರ್ಮದಲ್ಲಿನ ಎಣ್ಣೆಯು ಒಣಗಿ ಕೊಬ್ಬಿನ ದ್ರವಗಳು ಹೆಪ್ಪುಗಟ್ಟುತ್ತವೆ. ಅದಕ್ಕಾಗಿಯೇ ಚರ್ಮವು ಶುಷ್ಕವಾಗಿ ಕಾಣುತ್ತದೆ. ಇದನ್ನು ತಪ್ಪಿಸಬೇಕೆಂದರೆ, ಮೊದಲು ಬಿಸಿ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು. ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕೋಶಗಳು ಹಿಗ್ಗುತ್ತವೆ ಮತ್ತು ನೀವು ಹೊರಬಂದಾಗ ಚರ್ಮದ ಜೀವಕೋಶಗಳು ಕುಗ್ಗಲು ಪ್ರಾರಂಭಿಸುತ್ತವೆ. ಆದ್ದರಿಂದ 98.4% ನಷ್ಟು ತಾಪಮಾನವಿರುವ ಸಾಮಾನ್ಯ ನೀರಿನಲ್ಲಿ ಸ್ನಾನ ಮಾಡಿ.

    ಬೇಳೆ ಮತ್ತು ಕಡಲೆ ಹಿಟ್ಟು ಸೇರಿಸಿ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮ ಒಣಗಿ ಮೃದುವಾಗುತ್ತದೆ. ವಿಶೇಷವಾಗಿ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಸಿ, ನಂತರ ಅದಕ್ಕೆ ಕಡಲೆಹಿಟ್ಟು ಮಿಕ್ಸ್‌ ಮಾಡಿಕೊಂಡು ಮುಖಕ್ಕೆ ಹಚ್ಚಿದರೆ ಚರ್ಮವು ಕಾಂತಿಯುತವಾಗುತ್ತದೆ. ಆಲಿವ್ ಎಣ್ಣೆಯನ್ನೂ ಸಹ ಬಳಸಬಹುದು.

    ಇದನ್ನೂ ಓದಿ :   30 ವರ್ಷಕ್ಕೆ ಮದುವೆಯಾಗುವ ಯೋಚನೆ ಮಾಡಿದ್ರೆ ಇದನ್ನು ಓದಲೇ ಬೇಕು !!

     

    ವಿಶೇಷವಾಗಿ ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ ಸಮಸ್ಯೆ. ಇದನ್ನು ಸರಿಪಡಿಸಲು ಮನೆಯಲ್ಲಿ ಸುಲಭವಾಗಿ ಸಿಗುವ ಹಸುವಿನ ಬೆಣ್ಣೆ ಅಥವಾ ತುಪ್ಪವನ್ನು ಬೆಳಗ್ಗೆ ಮತ್ತು ರಾತ್ರಿ ಹಚ್ಚಿದರೆ ತುಟಿಗಳು ಮತ್ತು ಸುಲಿದ ತುಟಿಯ ಚರ್ಮವು ಗುಣವಾಗುತ್ತದೆ.

    ಚಳಿಗಾಲದಲ್ಲಿ ವಾಲ್‌ನಟ್ಸ್, ಬಾದಾಮಿ, ಪಪ್ಪಾಯಿ ಹಣ್ಣು, ಕ್ಯಾರೆಟ್‌, ಮೀನು ತಿಂದರೆ ಚರ್ಮಕ್ಕೆ ಅಗತ್ಯವಿರುವ ವಿಟಮಿನ್ಗಳು ನೈಸರ್ಗಿಕವಾಗಿ ದೇಹಕ್ಕೆ ಲಭ್ಯವಾಗುತ್ತವೆ. ಅದೇ ರೀತಿ ನೈಸರ್ಗಿಕವಾಗಿ ದೊರೆಯುವ ಮತ್ತು ಹೆಚ್ಚು ಬಳಕೆಗೆ ಯೋಗ್ಯವಾಗಿರುವ ತೆಂಗಿನ ಹಾಲನ್ನು ಸ್ನಾನ ಮಾಡುವಾಗ ಚರ್ಮಕ್ಕೆ ಹಚ್ಚಿದರೆ ತ್ವಚೆಯು ಮೃದುವಾಗಿರುತ್ತದೆ.

    Continue Reading

    BIG BOSS

    ಮಂಗಳೂರು: ಪತಿಯ ಅ*ನೈತಿಕ ಸಂಬಂಧ; ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಚೇದನ

    Published

    on

    ಮಂಗಳೂರು: ತಂದೆಯನ್ನು ಮನೆಗೆ ಕರೆದು ತಂದೆಯ ಎದುರಿನಲ್ಲಿ ಪತಿ ನನಗೆ ತ್ರಿವಳಿ ತಲಾಕ್ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಉಳ್ಳಾಲದ ಸಮ್ಮರ್ ಸ್ಯಾಂಡ್ ಬಳಿಯ ನಿವಾಸಿಯಾಗಿರುವ ಮಹಮ್ಮದ್ ದಿಲ್ಫಾಜ್‌ ಎಂಬವರ ವಿರುದ್ಧ ಈ ದೂರು ದಾಖಲಾಗಿದೆ. 2019 ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಕೆಲ ಕಾಲ ಚೆನ್ನಾಗಿ ಸಂಸಾರ ಕೂಡಾ ನಡೆಸಿ ಬಳಿಕ ಪತಿ ಪರ ಸ್ತ್ರೀಯ ಜೊತೆ ಸಂಬಂಧ ಬೆಳೆಸಿದ್ದಾಗಿ ಆರೋಪಿಸಲಾಗಿದೆ.

    ಈ ವಿಚಾರವನ್ನು ಪ್ರಶ್ನೆ ಮಾಡಿದ ಪತ್ನಿಗೆ ದೈಹಿಕ ಹಿಂ*ಸೆ ನೀಡಲಾಗಿದ್ದು, ನಿರಂತರ ಕಿ*ರುಕುಳ ನೀಡಲಾದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಎರಡೂ ಮನೆಯವರೂ ರಾಜಿ ಪಂಚಾಯತಿ ನಡೆಸಿದ್ದರೂ ಸಂಸಾರ ಸರಿ ಹೋಗಿರಲಿಲ್ಲ. ಇದೀಗ ಹಣಕ್ಕಾಗಿ ಬೇಡಿಕೆ ಇಟ್ಟು ತಂದೆಯನ್ನು ಮನೆಗೆ ಕರೆಸಿ ಅವರ ಸಮ್ಮುಖದಲ್ಲಿ ಮೂರ ಬಾರಿ ತಲಾಕ್ ಹೇಳಿ ತವರು ಮನೆಗೆ ಕಳುಹಿಸಲಾಗಿದೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತ್ರಿವಳಿ ತಲಾಕ್ ಕಾನೂನನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರಿಂದ ಈ ದೂರಿಗೆ ಪೊಲೀಸರು ಹೆಚ್ಚಿನ ಮಾನ್ಯತೆ ನೀಡಿ ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

    Continue Reading

    LATEST NEWS

    Trending