Thursday, September 29, 2022

1924ರ ನಂತರದ ಹೋರಾಟದಲ್ಲಿ ಸಾವರ್ಕರ್ ಭಾಗವಹಿಸಿದ ಸಾಕ್ಷಿ ಇದ್ರೆ ತೋರ್ಸಿ-ಖಾದರ್ ಸವಾಲ್

ಮಂಗಳೂರು: ಸಾವರ್ಕರ್ 1924 ರ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಇತಿಹಾಸ ಇದ್ರೆ , ಇತಿಹಾಸ ಪುಸ್ತಕದಲ್ಲಿ ಅದು ಕಾಣ ಸಿಕ್ಕರೆ ಅಥವಾ ಸಾಕ್ಷಿ ಇದ್ರೆ ನನಗೆ ತೋರಿಸುತ್ತೀರಾ ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ಸವಾಲೆಸೆದರು.


ಸಾವರ್ಕರ್ ಬ್ಯಾನರ್ ವಿವಾದದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ಸಾವರ್ಕರ್ ವಿರುದ್ಧ ಕಾಂಗ್ರೆಸ್‌ಗೆ ಇರುವುದು ಒಂದು ತೆರನಾದ ಸೈದ್ಧಾಂತಿಕ ಭಿನ್ನಾಭಿಪ್ರಾಯ. ನನ್ನ ಪ್ರಶ್ನೆ ಏನು ಕೇಳಿದ್ರೆ ಅಂಡಮಾನ್ ಜೈಲಿಗೆ ಹೋಗಿ ಪಡಬಾರದ ಕಷ್ಟ ಪಟ್ಟು ಹುತಾತ್ಮರಾದವರು ದೇಶಪ್ರೇಮಿಗಳಾ? ಅಥವಾ ಬ್ರಿಟಿಷರಿಗೆ ದಯಾಪಾಲನಾ ಅರ್ಜಿ ಬರೆದು ನಾನು ನಿಮ್ಮ ಜೊತೆ ಇನ್ನು ಹೋರಾಟ ಮಾಡುವುದಿಲ್ಲ ಅಂತ ಹೇಳಿ ಹೋರಾಟ ನಿಲ್ಲಿಸಿದವರು ದೇಶಪ್ರೇಮಿಗಳಾ? ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವರ್ಕರ್ ಬ್ಯಾನರ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿ ‘ ಯಾರಿಗೂ ಯಾರೂ ಹಾಕಿದ ಬ್ಯಾನರ್ ತೆಗೆಯುವ ಹಕ್ಕಿಲ್ಲ. ಆದರೆ ಹಾಕುವವರು ಪರ್ಮಿಷನ್ ತೆಗೆದುಕೊಂಡು ಹಾಕಬೇಕು. ಒಬ್ಬರು ಹಾಕಿದ ಬ್ಯಾನರ್ನ್ನು ಇನ್ನೊಬ್ಬರಿಗೆ ಹೇಳಿ ಒತ್ತಾಯಪೂರ್ವಕವಾಗಿ ಹಾಕುವ ಕ್ರಮ ಸರಿಯಲ್ಲ. ಆದರೆ ಬ್ಯಾನರ್ ಹಾಕುವವರು ಕೂಡಾ ಸದುದ್ದೇಶ ಹೊಂದಿರಬೇಕು.


ನಮ್ಮ ಕ್ಷೇತ್ರದಲ್ಲಿ ಹಾಗೆ ಯಾರೂ ಕೂಡಾ ತೆಗೆಯುವ ಅವಕಾಶ ಇರಲಿಲ್ಲ. ಬ್ಯಾನರ್ ತೆಗೆಯಲು ಜನಸಾಮಾನ್ಯನು , ಸಂಘ- ಸಂಸ್ಥೆಗಳು ಅದನ್ನು ತೆಗಿಲಿಕ್ಕೆ ಹೇಳಿಲ್ಲ. ಪರ್ಮಿಷನ್ ತೆಗೆದುಕೊಳ್ಳದೆ ಹಾಕಿರುವುದು ತಪ್ಪು ಅದಕ್ಕೆ ತೆಗೆಸಿದ್ದಾರೆ. ಆದರೆ ನಮ್ಮಲ್ಲಿ ಯಾರೂ ಕೂಡಾ ಅದರ ವಿರುದ್ಧ ಅಪಸ್ವರ ಎತ್ತಿಲ್ಲ.

ಮೊನ್ನೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ‘ಸ್ವಾತಂತ್ರ್ಯಕ್ಕೆ ಕಷ್ಟ ಪಟ್ಟ, ದೇಶಕ್ಕಾಗಿ ತನ್ನ ಇಡೀ ಆಸ್ತಿ ಬರೆದುಕೊಟ್ಟ ನೆಹರೂರವರ ಫೋಟೋ ಹಾಕದೆ ಬಿಟ್ಟಿದ್ದಾರಲ್ವಾ? ಏನು ಉದ್ದೇಶ. ನಮಗೆ ಒಳ್ಳೇದೇ ಆಯಿತು ಬಿಡಿ. ಯಾರ್ಯಾರ ಫೋಟೋ ಜೊತೆ ನಮ್ಮ ನೆಹರೂರವರ ಫೋಟೋ ಇಡದೇ ಇರುವುದು. ಇಲ್ಲದಿದ್ದರೆ ಇವರ ಘನತೆ ಕಡಿಮೆ ಆಗುತ್ತಿತ್ತು’ ಎಂದು ವ್ಯಂಗ್ಯವಾಡಿದರು.

ಇನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿ ಮಾತನಾಡಿ ‘ಸಿದ್ಧರಾಮಯ್ಯ ಕಾರಿಗೆ ಮೊಟ್ಟೆ ಎಸೆದಿರುವುದು ವೈಚಾರಿಕತೆ ಮೇಲೆ ಮಾಡಿದ ದಾಳಿ. ಇವರ ಎಲ್ಲಾ ತಪ್ಪು ಹಾಗೂ ಬೇಜವಾಬ್ದಾರಿಯನ್ನು ನೋಡಿಕೊಂಡು ಕೂರಲು ಸಾಧ್ಯವಿಲ್ಲ.

ಬಿಜೆಪಿಯವರು ‘ನಾವು ಏನಾದ್ರೂ ಮಾಡಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಬಹುದು ಅಂತ ಯೋಚಿಸಿದರೆ ‘ವಿನಾಶಕಾಲೇ ವಿಪರೀತ ಬುದ್ಧಿ’ ಅನ್ನೋ ರೀತಿ ಆಗಬಹುದು.

ಜನಸಾಮಾನ್ಯನ ದಾಳಿ, ಸಮಾಜದ ಮೇಲೆ ದಬ್ಬಾಲಿಕೆ ಮಾಡಿ ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸಲು ಸಾಧ್ಯವೇ ಇಲ್ಲ. ಬಿಜೆಪಿಯವರು ಇಂತಹ ಕುಕೃತ್ಯ ಮಾಡಿ ಜನರ ನೋವಿಗೆ ಧ್ವನಿಯಾಗಿರುವ ಕಾಂಗ್ರೆಸ್ ರಾಜಕಾರಣಿಗಳ, ಕಾರ್ಯಕರ್ತರ ಶಕ್ತಿಯನ್ನು ಕುಗ್ಗಿಸಬಹುದು ಎಂದು ಯೋಚಿಸಿದರೆ ಮೂರ್ಖತನದ ಪರಮಾವಧಿ’ ಎಂದು ಹೇಳಿದರು.

 

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಲೋಕಕಂಟಕ ನಿವೃತ್ತಿಗಾಗಿ ವೆಂಕಟರಮಣ ದೇಗುಲದಲ್ಲಿ ಸಹಸ್ರ ಚಂಡಿಕಾ ಮಹಾಯಾಗ ಪ್ರಾರಂಭ

ಮಂಗಳೂರು: ಶಾರದಾ ಮಹೋತ್ಸವದ 100ನೇ ವರ್ಷದ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಸಹಸ್ರ ಚಂಡಿಕಾ ಮಹಾಯಾಗ ಇಂದು ಪ್ರಾರಂಭಗೊಂಡಿತು.ಲೋಕ ಕಂಟಕ ನಿವೃತ್ತಿಗಾಗಿ ಲೋಕದಲ್ಲಿ ಉಂಟಾದ ಕ್ಷೋಭೆಯ...

ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಎಂದಿಗೂ ಅವಕಾಶವಿಲ್ಲ-CM ಬೊಮ್ಮಾಯಿ

ಬೆಂಗಳೂರು: ವಿಧ್ವಂಸಕ ಕೃತ್ಯಗಳಿಗೆ ಈ ದೇಶದಲ್ಲಿ ಅವಕಾಶವಿಲ್ಲ. ಅದೂ ನರೇಂದ್ರ ಮೋದಿಯವರು ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ಇಂಥವುಗಳಿಗೆ ಎಡೆಯಿಲ್ಲ ಎಂಬ ನಿರ್ಣಯ ಸ್ಪಷ್ಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು...

ಪುತ್ತೂರು: PFI ಪ್ರಧಾನ ಕಛೇರಿಗೆ ಬೆಳಿಗ್ಗೆಯಿಂದಲೇ ಬೀಗ-ಗುಪ್ತಸಭೆ ನಡೆಸುತ್ತಿದ್ದ ಆರೋಪ

ಪುತ್ತೂರು: ದೇಶದಾದ್ಯಂತ ಪಿಎಫ್ಐ ಹಾಗೂ ಅದರ ಬೆಂಬಲಿತ ಸಂಘಟನೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿರುವ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಪಿಎಫ್ಐ ನ ಪ್ರಧಾನ...