ಪಿಎಫ್ಐ ಬಾಲ ಬಿಚ್ಚಿದ್ರೆ ಬಾಲನೂ ಕಟ್ ತಲೆನೂ ಕಟ್; ಸಿ.ಟಿ ರವಿ ಸ್ಪೋಟಕ ಹೇಳಿಕೆ..!
ಬೆಂಗಳೂರು:ಸಿಎಫ್ಐ ನವರು ಬಾಲ ಬಿಚ್ಚಿ ಮೆರೆಯುವ ಕಾಲ ಈಗಿಲ್ಲ. ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್ ಮಾಡಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಚೇರಿ ಮೇಲೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮವಾಗಿ ಹಣ ಚಲಾವಣೆ ಮಾಡಲಾಗುತ್ತದೆ.
ಆದರೆ ಇಡಿ ತನಿಖೆ ಮಾಡಬೇಡ ಎನ್ನಲೂ ಪಿಎಫ್ಐ ಯಾರು ಎಂದು ಖಾರವಾಗಿ ಪ್ರಶ್ನಿಸಿದರು.ಸಿಎಎ ವಿರುದ್ಧದ ಪ್ರತಿಭಟನೆಗೆ ನೂರಾರು ಕೋಟಿ ರೂ ಅಕ್ರಮ ಹಣ ದೇಶವಿದೇಶದಿಂದ ಬಂದ ಮಾಹಿತಿ ಇದೆ.
ಅದರ ಬಗ್ಗೆ ಇಡಿ ತನಿಖೆ ಮಾಡಿದ್ರೆ ಇವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಏಕೆ? ಭಾರತ ಇರುವುದು ಭಯೋತ್ಪಾದನೆ ಮಾಡಲು ಅಲ್ಲ. ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನ ತಡೆಯಲು ತನಿಖೆ ನಡೆಯಬೇಕಿದೆ.
ತನಿಖೆಯ ಬಳಿಕ ಇವರ ಉದ್ದೇಶ-ದುರುದ್ದೇಶವನ್ನು ಜಗತ್ತಿಗೆ ಹೆಳಿ, ಹೆಡೆಮುರಿಕಟ್ಟುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.