Connect with us

LATEST NEWS

ಚೈತ್ರಾ ಕುಂದಾಪುರರನ್ನು ಬಂಧಿಸಲು ಎರಡು ದಿನಗಳ ಗಡುವು ನೀಡಿದ SDPI..?

Published

on

ಮಂಗಳೂರು: ಇತ್ತೀಚೆಗೆ ಸುರತ್ಕಲ್ ನಲ್ಲಿ ಕೋಮುಪ್ರಚೋದನೆ ಭಾಷಣ ಮಾಡಿದ ಚೈತ್ರಾ ಕುಂದಾಪುರ ಅವರ ವಿರುದ್ಧ ದೂರು ನೀಡಿದರೂ ಎಫ್‌ಐಆರ್‌ ದಾಖಲಾಗಿಲ್ಲ. ಎರಡು ದಿನಗಳ ಒಳಗಾಗಿ ಚೈತ್ರಾ ಮೇಲೆ ಸೂಕ್ತವಾದ ಎಫ್ಐಆರ್ ದಾಖಲಿಸದಿದ್ದಲ್ಲಿ ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಸ್‌ಡಿಪಿಐ ಎಚ್ಚರಿಸಿದೆ.


ಭಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ನಡೆದ ಜನಜಾಗೃತಿ ಸಭೆಯಲ್ಲಿ ಕುಂದಾಪುರದ ಚೈತ್ರಾ ಎಂಬಾಕೆ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದು, ಮುಸ್ಲಿಂ ಮತ್ತು ಹಿಂದು ಸಮುದಾಯದಗಳ ನಡುವೆ ಐಕ್ಯತೆ ಮುರಿದು ಎರಡು ಸಮುದಾಯಗಳ ನಡುವೆ ಪರಸ್ಪರ ಕಚ್ಚಾಡುವ ಹಾಗೆ ಪ್ರೇರಣೆ ನೀಡಿದ್ದು, ಹಾಗೂ ಮುಸ್ಲಿಂ ಮಹಿಳೆಯರ ಮಾನ ಹರಣದ ಮಾತುಗಳನ್ನು ಆಡಿದ್ದು ಮತ್ತು ಮುಸ್ಲಿಂ ಮಹಿಳೆಯರನ್ನು ಬಲಾತ್ಕಾರದ ಮತಾಂತರ ನಡೆಸಲು ಪ್ರೇರಣೆ ನೀಡಿರುವ‌ ಬಗ್ಗೆ ಇದೀಗಾಗಲೇ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಖಾದರ್ ಅವರು ದೂರು ದಾಖಲಿಸಿರುತ್ತಾರೆ.
ಆದರೆ ಕುಂದಾಪುರ ಚೈತ್ರಾ ಅವರ ಮೇಲೆ ಎಫ್‌ಐಆರ್‌ ದಾಖಲಿಸಿ ಬಂಧಿಸದೆ ಇರದಿರುವುದು ಸಂಘಪರಿವಾರ ಮತ್ತು ಪೊಲೀಸ್ ಆಧಿಕಾರಿಗಳೊಂದಿಗೆ ಒಳ ಒಪ್ಪಂದ ಏರ್ಪಟ್ಟಂತೆ ಕಾಣುತ್ತಿದೆ.
ಒಂದು ವೇಳೆ ಎರಡು ದಿನಗಳ ಒಳಗಾಗಿ ಚೈತ್ರಳ ಮೇಲೆ ಸೂಕ್ತವಾದ ಎಫ್ಐಆರ್ ದಾಖಲಿಸದಿದ್ದಲ್ಲಿ ಸುರತ್ಕಲ್ ಠಾಣೆಗೆ ಮುತ್ತಿಗೆ ಹಾಕಲಿದ್ದೇವೆ ಎಂದು SDPI ಉತ್ತರ ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಎಚ್ಚರಿಕೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

Click to comment

Leave a Reply

Your email address will not be published. Required fields are marked *

FILM

“ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?

Published

on

ನಿತ್ಯಾಮೆನನ್.. ದಕ್ಷಿಣ ಚಿತ್ರರಂಗದಲ್ಲಿ ತನ್ನ ಅಮೋಘ ಅಭಿನಯದ ಮೂಲಕ ಚಿತ್ರರಂಗದಲ್ಲಿ ಕೀರ್ತಿಯ ಪತಾಕೆಯನ್ನ ಹಾರಿಸಿರುವ  ನಟಿ. ತನ್ನ ಮೋಹಕ ನೋಟ, ಹಾಗೆನೆ ನೋಡೋಕೆ ತುಂಬಾನೆ ಸಿಂಪಲ್ ಆಗಿರೋ ಇವರು ಒಂದಲ್ಲ ಒಂದು ಕಾಂಟ್ರವರ್ಸಿಗಳಿಗೆ ಒಳಗಾಗಿದ್ದರು.

nithya menon

ಕನ್ನಡದ ಸೆವೆನ್ ಓ ಕ್ಲಾಕ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಆ ನಂತರ ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದ ನಿತ್ಯಾ, ಮಿಷನ್ ಮಂಗಲ್ ಚಿತ್ರದ ಮೂಲಕ ಹಿಂದಿಗೂ ಪದಾರ್ಪಣೆ ಮಾಡಿದ್ದರು.

ತುಂಬಾನೇ ಬೋಲ್ಡ್ ಹುಡುಗಿ ..

ತಮ್ಮ ನೇರ ದಿಟ್ಟ ನಡವಳಿಕೆಗೆ ನಿತ್ಯಾ ಮೆನನ್ ನಂಬರ್ ವನ್ ಪ್ಲೇಸ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಅದೆಷ್ಟೋ ಬಾರಿ ತಮ್ಮ ನೇರ ನಡವಳಿಕೆಯಿಂದ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ರು ನಿತ್ಯಾ. ಇದಕ್ಕೆ ಸಾಕ್ಷಿ ಅನ್ನುವಂತೆ ನಿತ್ಯಾ ಮೆನನ್ ಅವರನ್ನ ಹಿಂದೊಮ್ಮೆ ಮಲಯಾಳಂ ಚಿತ್ರರಂಗ ಒಂದಲ್ಲ…ಎರಡು ಬಾರಿ ಬ್ಯಾನ್ ಮಾಡಲು ಮುಂದಾಗಿತ್ತು.

ಚಿತ್ರರಂಗದಿಂದ ಬ್ಯಾನ್‌ ಆಗಲು ಕಾರಣವೇನು..?

ಹೌದು.. 2012ರಲ್ಲಿ ನಿತ್ಯಾ ವಿರುದ್ದ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರು ಮುನಿಸಿಕೊಂಡಿದ್ದರು. ಯಾಕೆಂದರೆ ಖ್ಯಾತ ಮಲಯಾಳಂನ ನಿರ್ಮಾಪಕರೊಬ್ಬರು ಆಗ ನಿತ್ಯಾ ಅವರ ಕಾಲ್ ಶೀಟ್ ಕೇಳಿಕೊಂಡು ಅವರ ಮನೆಗೆ ಹೋಗಿದ್ದರು. ಆದರೆ ನಿತ್ಯಾ ಮಾತ್ರ ನಿರ್ಮಾಪಕರ ಮುಖ ನೋಡಲು ಕೂಡ ಮನೆಯಾಚೆ ಬರಲಿಲ್ಲ. ಬದಲಿಗೆ ಮನೆಯಲ್ಲಿಯೇ ಇದ್ದರೂ ಕೂಡ ಮ್ಯಾನೇಜರ್ ನ ಕಳಿಸಿದ್ದರು. ಕೇವಲ ಇವರೊಬ್ಬರಷ್ಟೇ ಅಲ್ಲ ಅನೇಕ ನಿರ್ಮಾಪಕರನ್ನ ನಿತ್ಯಾ ಇದೇ ರೀತಿ ನಡೆಸಿಕೊಂಡಿದ್ದಾರೆ ಎಂಬ ಮಾತು ಆಗ ಕೇಳಿ ಬಂದಿತ್ತು. ಈ ಕಾರಣಕ್ಕೆ ನಿತ್ಯಾ ಅವರ ಮೇಲೆ ನಿಷೇಧ ಹೇರುವ ಚಿಂತನೆ ನಡೆದಿತ್ತು. ಆದರೆ ಈ ಎಲ್ಲ ಬೆಳವಣಿಗೆಯ ನಂತರವೂ 2012ರಲ್ಲಿ ಅರ್ಧ ಡಜನ್ ಮಲಯಾಳಂ ಸಿನಿಮಾಗಳಲ್ಲಿ ನಿತ್ಯಾ ಕಾಣಿಸಿಕೊಂಡರು. ಅದರಲ್ಲಿ ಆ ಕಾಲಕ್ಕೆ ಎಲ್ಲರ ಗಮನ ಸೆಳದು ಸಿಕ್ಕಾಪಟ್ಟೆ ಪ್ರಶಂಸೆಯನ್ನ ಪಡೆದಿದ್ದ ಉಸ್ತಾದ್ ಹೊಟೇಲ್ ಕೂಡ ಒಂದು.

ತಮ್ಮ ನೇರನುಡಿಯ ಮಾತೇ ತನಗೆ ಮುಳುವಾಯಿತಾ…?

ಇನ್ನೂ 2019ರಲ್ಲಿಯೂ ಕೂಡ ಇಂಥಹದ್ದೇ ಬೆಳವಣಿಗೆ ನಡೆದಿತ್ತು. 2019ರಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ನಿತ್ಯಾ ಮೆನನ್ ರವರ ತಾಯಿಗೆ ಕ್ಯಾನ್ಸರ್ ಇರುವುದಾಗಿ ಸುದ್ದಿ ಬಂದಿತ್ತು. ಅದು ಮೂರನೇ ಹಂತದಲ್ಲಿಯೂ ಇತ್ತು. ಇನ್ನು ನಿತ್ಯಾರವರು ಬಹುಕಾಲದ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದ ನಿತ್ಯಾ ಮನೆಯಲ್ಲಿಯೇ ಉಳಿದರು. ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರೆ ನಿತ್ಯಾ ಅರೆತಲೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು.

ಮುಂದೆ ನೋಡಿ..; ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?

ಆಗ ಮಲೆಯಾಳಂ ನಿರ್ಮಾಪಕರು ನಿತ್ಯಾ ಮೆನನ್ ಅನುಮತಿಯಿಲ್ಲದೇ ದಿಢೀರನೇ ಮನೆಗೆ ಧಾವಿಸಿ ಅಪ್ ಕಮಿಂಗ್ ಸಿನಿಮಾದಲ್ಲಿ ಮಾತನಾಡುವುದಕ್ಕೆ ಮುಂದಾಗಿದ್ದರು. ಆಗ ನಿತ್ಯಾ ಈಗ ಸದ್ಯಕ್ಕೆ ನನ್ನ ಆರೋಗ್ಯ ಸರಿ ಇಲ್ಲ. ನನ್ನ ಆರೋಗ್ಯ ಸುಧಾರಿಸಿದ ಮೇಲೆ ಮಾತನಾಡೋಣ ಎಂದಿದ್ದರು. ಇಷ್ಟಕ್ಕೇ ಸಿಟ್ಟಾದ ನಿರ್ಮಾಪಕರು ಕೂಡಲೇ ಮಲಯಾಳಂನ ಹಿರಿಯ ನಿರ್ಮಾಪಕ ಜಿ.ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ಕರೆದರು. ನಿತ್ಯಾ ಮೆನನ್ ಗೆ ಅಹಂಕಾರ ಜಾಸ್ತಿ ಈ ಕ್ಷಣದಿಂದನೇ ಅವರನ್ನ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದರು. ಇನ್ನೂ ಇದೇ ವಿಚಾರಕ್ಕೆ ಅವತ್ತು ಪ್ರತಿಕ್ರಿಯೆ ನೀಡಿದ್ದ ನಿತ್ಯಾ ಮೆನನ್, ನನಗೆ ಅಹಂಕಾರವಿಲ್ಲ. ಅಂತಹ ಅಹಂಕಾರವಿರುವ ನಿರ್ಮಾಪಕರ ಜತೆಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳಿದ್ರು.

ಆದ್ರೆ ಮಳಯಾಲಂ ಚಿತ್ರದಲ್ಲಿ ಮುಂಚೂಣಿ ನಾಯಕಿಯರ ಪಟ್ಟಿಯಲ್ಲಿದ್ದ ಈಕೆ 2019 ರಿಂದ ಇಲ್ಲಿಯವರೆಗೆ ಅವರು ನಟಿಸಿರುವುದು ಕೇವಲ ಬೆರಳೆಣಿಕೆಯ ಸಿನೆಮಾ. ಹೌದು ಇವರ ನೇರ ನುಡಿ ಖಡಕ್ ಮಾತು ಇವರ ವೃತ್ತಿ ಜೀವನಕ್ಕೆ ಪೆಟ್ಟು ಬಿದ್ದಿದೆ ಅಂದ್ರೆ ತಪ್ಪಾಗಲ್ಲ.

Continue Reading

LATEST NEWS

ಕಾಲಿನ ಮೂಲಕವೇ ಕಾರು ಚಲಾಯಿಸಿ, ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ!

Published

on

ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸಿ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾಳೆ. ಕೇರಳದ ಜಿಲುಮೋಲ್​​ ಮರಿಯೆಟ್ ಥಾಮಸ್. ಹುಟ್ಟಿನಿಂದಲೇ ಎರಡು ಕೈಗಳನ್ನು ಕಳೆದುಕೊಂಡಿದ್ದ ಮರಿಯೆಟ್ ಥಾಮಸ್ ಚಿಕ್ಕ ವಯಸ್ಸಿನಲ್ಲೇ ಕಾಲಿನ ಮೂಲಕವೇ ದೈನಂದಿನ ಚಟುವಟಿಕೆಗಳನ್ನು ಅಭ್ಯಾಸ ಮಾಡಿಕೊಂಡಿದ್ದಳು. ಇದೀಗ ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸಿ ದೇಶದ ಗಮನ ಸೆಳೆದಿದ್ದಾಳೆ.

ಇದಲ್ಲದೇ ಎರಡು ಕೈಗಳಿಲ್ಲದೇ ಡ್ರೈವಿಂಗ್​​ ಲೈಸೆನ್ಸ್​​​ ಪಡೆದ ಏಷ್ಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಕೈಗಳಿಲ್ಲದಿದ್ದರೂ, ಕಾಲಿನ ಸಹಾಯದಿಂದ ಕಾರು ಚಲಾಯಿಸುವುದರ ಜೊತೆಗೆ ಚಿತ್ರಕಲೆಯಲ್ಲೂ ಸೈ ಎನಿಸಿಕೊಂಡಿರುವ ಈಕೆ ಸಾಕಷ್ಟು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಇದೀಗ ದೇಶದಾದ್ಯಂತ ಖ್ಯಾತಿಯನ್ನು ಪಡೆದಿರುವ ಈಕೆಯನ್ನು ಅನೇಕ ಸೆಲೆಬ್ರಿಟಿಗಳು ಕೂಡ ಭೇಟಿಯಾಗುತ್ತಿದ್ದಾರೆ.

Continue Reading

DAKSHINA KANNADA

ವೋಟ್ ಮಾಡಿ, ಊಟ ಮಾಡಿ: ಹೋಟೆಲ್‌ಗಳಲ್ಲಿ ಸಿಗಲಿದೆ ಫ್ರೀ ದೋಸೆ, ಸಿಹಿ ತಿಂಡಿ!

Published

on

ಬೆಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್‌ಗಳು ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಕಳೆದ ವರ್ಷ ವಿಧಾನ ಚುನಾವಣೆಯಲ್ಲಿ ಮಾಡಿದಂತೆಯೇ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.

ವೋಟ್ ಮಾಡಿ, ಊಟ ಮಾಡಿ:

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್‌ ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಮತದಾನದ ದಿನದಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿದೆ. 2018 ರ ವಿಧಾನಸಭಾ ಚುನಾವಣೆ ವೇಳೆಯೂ ಹೋಟೆಲ್ ಇಂತಹ ಕೊಡುಗೆ ನೀಡಿತ್ತು.

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಈ ಕುರಿತು ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಕೆಲವು ಹೋಟೆಲ್​​ಗಳು ಕೆಲವು ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಮತದಾನದ ದಿನದಂದು ನೀಡುತ್ತವೆ. ಸಿಹಿತಿಂಡಿಗಳು ಮತ್ತು ಕೇಕ್‌ಗಳಂತಹ ಕೆಲವು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿವೆ.

SawaariZimmedariKi ಅಭಿಯಾನದಡಿ ಶುಕ್ರವಾರ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರಿಗೆ ಉಚಿತ ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆ ದೊರೆಯಲಿದೆ.
ಈ ವಿಶೇಷ ಸೇವೆಯನ್ನು ಪಡೆಯಲು ಮತದಾರರು ‘VOTENOW’ ಕೋಡ್ ಅನ್ನು ಬಳಸಬಹುದು ಎಂದು Rapido ತಿಳಿಸಿದೆ.

ಬಿಡದಿ ಬಳಿಯ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ, ಮತದಾನದ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ರಂದು ಟಿಕೆಟ್‌ ಮೇಲೆ ಶೇಕಡಾ 15 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.

Continue Reading

LATEST NEWS

Trending