Connect with us

LATEST NEWS

24 ಗಂಟೆಯಲ್ಲಿ ಕೋರ್ಟ್‌ ಆಜ್ಞೆ ಪಾಲಿಸದಿದ್ರೆ ಗುಂಡು ಹೊಡ್ದು ಮುಗಿಸ್ತೇನೆ: ಮುತಾಲಿಕ್‌

Published

on

ಹುಬ್ಬಳ್ಳಿ: ಶಬ್ದ ಮಾಲಿನ್ಯ ವಿಚಾರದಲ್ಲಿ ಬಿಜೆಪಿಗೆ ಸರಕಾರ ನಡೆಸುವುದಕ್ಕೆ ಆಗದೇ ಇದ್ರೆ ಕೆಳಗಿಳಿಯಿರಿ, ನನ್ನ ಕೈಗೆ ಅಧಿಕಾರ ಕೊಟ್ಟು ನೋಡ್ಲಿ.

24 ಗಂಟೆಯೊಳಗೆ ಸುಪ್ರೀಂ ಕೋರ್ಟ್‌ ಆಜ್ಞೆ ಪಾಲಿಸದಿದ್ದವರನ್ನು ಗುಂಡು ಹೊಡೆದು ಮುಗಿಸ್ತೇನೆ ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಗುಡುಗಿದ್ದಾರೆ.


ಈ ಬಗ್ಗೆ ಹುಬ್ಬಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಬ್ದ ಮಾಲಿನ್ಯದ ಬಗ್ಗೆ ಸಿಎಂ 15 ದಿನದ ಗಡುವು ಕೊಟ್ಟು ಆದೇಶ ಹೊರಡಿಸಿದ್ದರು.

ಇದೀಗ 15 ದಿನ ಕಳೆದರೂ ಪಾಲನೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಹೋರಾಟಕ್ಕೆ ನಾವು ಸಿದ್ದವಾಗಿದ್ದೇವೆ.

ಜೂ.8ರಂದು ರಾಜ್ಯದ ಎಲ್ಲಾ ಎಂಎಲ್‌ಎ, ಮಂತ್ರಿ ಮನೆ ಎದುರು ಧರಣಿ ನಡೆಸುತ್ತೇವೆ. ಅವರ್ರನ್ನ ಬಟಾಬಯಲು ಮಾಡ್ತೇವೆ, ನೀವೇನೂ ಮಾಡ್ತಾ ಇಲ್ಲ ಅನ್ನೋದನ್ನು ಜನಜಾಗೃತಿ ಮಾಡುತ್ತೇವೆ.

ಇದೇ ವೇಳೆ ಸಿಎಂ ಬೊಮ್ಮಾಯಿ ಅವರನ್ನುದ್ದೇಶಿಸಿ, ನೀವು ಯೋಗಿಯ 25 ಪರ್ಸೆಂಟ್‌ ಆದ್ರೂ ಗಟ್ಸ್‌ ತೋರಿಸ್ಬೇಕು. ನಿಮ್ಮತ್ರ ಆ ತಾಕತ್ತು, ಧಂ ಇಲ್ಲ. ಗಟ್ಟಿಯಾಗದೇ ಇದ್ರೆ ಮುಂದಿನ ಚುನಾವಣೆಯಲ್ಲಿ ಕಷ್ಟ ಇದೆ ಎಂದರು.
ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸಿ, ನಮ್ಮ ಹೋರಾಟ, ತ್ಯಾಗ ಬಲಿದಾನದಿಂದ ಬಿಜೆಪಿಯವ್ರು ಸರ್ಕಾರ ನಡೆಸುತ್ತಿದ್ದಾರೆ. ಬಿಜೆಪಿ ಇವರಪ್ಪಂದು ಅಲ್ರೀ. ನಾವೂ ರಕ್ತ, ಬೆವರು ಹರಿಸಿದ್ದೇವೆ.

ಈ ಹಿಂದೆ ಟಿಕೆಟ್‌ಗಾಗಿ ಅವರತ್ರ ಭಿಕ್ಷೆ ಬೇಡಿಲ್ಲ. ನಮ್ಮ ಹಕ್ಕಿದೆ. ಅದನ್ನು ಕೇಳಿದ್ದೇವೆ ಎಂದು ಹೇಳಿದರು.

DAKSHINA KANNADA

ಮಂಗಳೂರು : ಬ್ಯಾಡ್ಮಿಂಟನ್ ಕೋರ್ಟ್‌ನಲ್ಲೇ ಕು*ಸಿದುಬಿದ್ದು ವಿದ್ಯಾರ್ಥಿ ಸಾ*ವು

Published

on

ಮಂಗಳೂರು: ಫ್ರೆಂಡ್ಸ್ ಜೊತೆ ಆಡುತ್ತಿದ್ದ ವೇಳೆ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಕುಸಿದು ಬಿದ್ದು ಸಾ*ವನ್ನಪ್ಪಿದ ಘಟನೆ ಮಂಗಳೂರಿನ ಫಳ್ನೀರ್‌ನಲ್ಲಿ ನಿನ್ನೆ (ಜ.15) ನಡೆದಿದೆ.

ಮೂಲತಃ ಅಡ್ಡೂರಿನ ನಿವಾಸಿಯಾಗಿದ್ದು, ಪ್ರಸ್ತುತ ಅತ್ತಾವರ ಐವರಿ ಟವರ್‌ನಲ್ಲಿ ವಾಸವಿದ್ದ ಶಹೀಮ್ (20) ಮೃ*ತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಇಸನದನೂ ಓದಿ : ಬಾಲಿವುಡ್‌ ನಟ ಸುದೀಪ್ ಪಾಂಡೆ ವಿಧಿವಶ

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಶಹೀಮ್ ಗೆಳೆಯರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕೋರ್ಟ್‌ನಲ್ಲೇ ಕು*ಸಿದು ಬಿ*ದ್ದಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಶಹೀಮ್ ಮೃ*ತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Continue Reading

FILM

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಮಾ*ರಣಾಂತಿಕ ಹ*ಲ್ಲೆ

Published

on

ಮಂಗಳೂರು/ಮುಂಬಯಿ : ಮುಂಜಾನೆ 2 ಗಂಟೆ ವೇಳೆ ಮನೆಗೆ ಕಳ್ಳರು ನುಗ್ಗಿ ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಮೇಲೆ ಚಾ*ಕುವಿನಿಂದ ಹ*ಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ತಕ್ಷಣವೇ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದ*ರೋಡೆಕೋರರ ವ್ಯಕ್ತಿಯ ವಿರುದ್ಧ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮುಂಜಾನೆ 2 ಗಂಟೆಗೆ ಸೈಫ್ ಅಲಿಖಾನ್ ಮನೆಗೆ ದ*ರೋಡೆಕೋರರು ಪ್ರವೇಶಿಸಿದ ವೇಳೆ, ಸೈಫ್ ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ಮಾ*ರಾಮಾರಿ ನಡೆದಿದೆ. ಬಳಿಕ ಸೈಫ್ ಮೇಲೆ ಹ8ರಿತವಾದ ಆ*ಯುಧದಿಂದ ಹ*ಲ್ಲೆ ಮಾಡಿದ್ದಾನೆ. ದಾ*ಳಿ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಸೈಫ್ ಅವರ ಕುತ್ತಿಗೆಯಲ್ಲಿ 10 ಸೆಂ.ಮೀ ಗಾ*ಯವಾಗಿದ್ದು, ಕೈ ಮತ್ತು ಬೆನ್ನಿಗೂ ಗಾ*ಯವಾಗಿದೆ.

ಮುಂಬೈನ ಬಾಂದ್ರಾದಲ್ಲಿರುವ ಸೈಫ್‌ ಆಲಿ ಖಾನ್‌ ಮನೆಯಲ್ಲಿ ಮನೆಮಂದಿ ಜೊತೆ ಮಲಗಿದ್ದ ಈ ದುರ್ಘಟನೆ ನಡೆದಿದೆ. ಈ ಸಮಯ ಮನೆಯವರೆಲ್ಲಾ ಎಚ್ಚರಗೊಂಡಿದ್ದು, ಈ ಘಟನೆಯ ತನಿಖೆಗೆ ವಿಶೇಷ ಪೊಲೀಸರ ತಂಡ ರಚನೆ ಆಗಿದೆ. ಮನೆಯ ಸುತ್ತಮುತ್ತ ಇರುವ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದೆ. “ಕಳ್ಳರು 2-3 ಬಾರಿ ಹ*ಲ್ಲೆ ಮಾಡಿದ್ದು,ಮುಂಬೈ ಕ್ರೈಮ್‌ ಬ್ರ್ಯಾಂಚ್‌ ಈ ಕುರಿತು ತನಿಖೆ ಮಾಡುತ್ತಿದೆ. ನಟನಿಗೆ ಆ*ರು ಗಾಯವಾಗಿದ್ದು, ಎರಡು ಕಡೆ ತುಂಬಾ ಗಂ*ಭೀರ ಗಾ*ಯವಾಗಿದೆ” ಎಂದು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. “ಸೈಫ್‌ ಆಲಿಖಾನ್‌ನ ಬೆನ್ನಿನ ಭಾಗದಲ್ಲಿ ಕಳ್ಳರು ಚಾ*ಕು ಇ*ರಿದಿದ್ದು, ದೊಡ್ಡ ಗಾ*ಯವೇ ಆಗಿದೆ. ಬೆನ್ನು ಮೂಳೆಗೆ ತೊಂ*ದರೆ ಉಂಟಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ” ಎಂದು ವೈದ್ಯರು ತಿಳಿಸಿದ್ದಾರೆ,

Continue Reading

LATEST NEWS

ಒಂದೇ ಬಾರಿಗೆ 45 ಮಂದಿ ರೌಡಿ ಶೀಟರ್‌ಗಳು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಿ ಆದೇಶ

Published

on

ಮಂಗಳೂರು/ಹುಬ್ಬಳ್ಳಿ : ಹುಬ್ಬಳ್ಳಿ- ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ್ ಆದೇಶಿಸಿದ್ದಾರೆ.

ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು ಗುರುತಿಸಿ 45 ಜನರನ್ನು ಬೀದರ್, ಕಲಬುರಗಿ, ಯಾದಗಿರಿ, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಆಮಿಷ; ಇಬ್ಬರು ಆರೋಪಿಗಳ ಸೆರೆ

ಹುಬ್ಬಳ್ಳಿ-ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಇನ್ನೂ ಹಲವರನ್ನು ಗಡಿಪಾರು ಮಾಡಲು ಯೋಜಿಸಲಾಗಿದೆ. ಕೆಲವರು ನ್ಯಾಯಾಂಗ ವಶದಲ್ಲಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಮಾಡಿ ಪಟ್ಟಿ ಸಿದ್ದಪಡಿಸಲಾಗುವುದು. ಕೆಲವರ ಮೇಲೆ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಎನ್. ಶಶಿಕುಮಾರ್ ಮಂಗಳೂರು ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದರು.

Continue Reading

LATEST NEWS

Trending

Exit mobile version