Tuesday, May 18, 2021

ಬೀಫ್ ತಿನ್ನಬೇಕು ಅನ್ನಿಸಿದರೆ ಬೀಫ್ ತಿನ್ನುತ್ತೇನೆ ಅದನ್ನು ಕೇಳಲು ಬಿಜೆಪಿ ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ..!

ಬೀಫ್ ತಿನ್ನಬೇಕು ಅನ್ನಿಸಿದರೆ ಬೀಫ್ ತಿನ್ನುತ್ತೇನೆ ಅದನ್ನು ಕೇಳಲು ಬಿಜೆಪಿ ಯಾರು? ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ..!

ಮಂಗಳೂರು: ಕೋಮುವಾದವನ್ನು ಯಾರೇ ಮಾಡಲಿ ಅದು ಕೋಮುವಾದನೇ. ಕೋಮುವಾದ ಇರುವಲ್ಲಿ ಶಾಂತಿ ನೆಮ್ಮದಿ ಇರೋದಿಲ್ಲ. ಹಿಂದುತ್ವ ಹೇಳುವವರು ಭಾರತೀಯರಲ್ಲ, ಹಿಂದುತ್ವ ಹೇಳುವವರು ಕೋಮುವಾದಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ನಡೆದ ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಕರಾವಳಿಯನ್ನು ಕೋಮುವಾದದ ಪ್ರಯೋಗಾಲಯವನ್ನಾಗಿ ಮಾಡಿದ್ದಾರೆ ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಅಂತಾ ಹೇಳುತ್ತಾರೆ. ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ, ಆರೆಸ್ಸೆಸ್ ಒಂದು ಜಾತಿ ಸಂಘಟನೆಯಾಗಿದೆ ಆರೆಸ್ಸೆಸ್ ನವ್ರು ದೇಶ ಭಕ್ತರು ಅಂತಾ ಹೇಳ್ತಾರೆ ಹಾಗಾದರೆ ಸ್ವಾತಂತ್ರ್ಯ ಹೋರಾಟಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಸಿದ್ದು,

1977 ರಲ್ಲಿ ಜನತಾಪಾರ್ಟಿ ಆಗದೇ ಇರುತ್ತಿದ್ದರೆ ಇಷ್ಟೊಂದು ಶಕ್ತಿ ಬರುತ್ತಿರಲಿಲ್ಲ ಹೆಗಡೇವಾರ್ ಬಳಿಕ ಗೋಳ್ವಾಲ್ಕರ್ ಆರೆಸ್ಸೆಸ್ ಮುಖ್ಯಸ್ಥರು ಬಂದ್ರು ಆದರೆ ಇವರು ಯಾರೂ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿಲ್ಲ ಎಂದು ದೂರಿದರು.ಗೋ ಹತ್ಯೆ ನಿಷೇಧ ಒಂದು ಧರ್ಮವನ್ನು ಗುರಿಯಾಗಿಸಿ ಜಾರಿ ಮಾಡಿದ್ದಾರೆ. ಬೀಫ್ ತಿನ್ನೋದು ಅವರವರ ಆಹಾರದ ಹಕ್ಕು. ಅದನ್ನು ನಿಯಂತ್ರಣ ಮಾಡೋಕೆ‌ ನೀವು ಯಾರು..?

ನಾನು ಇಲ್ಲಿಯವರೆಗೆ ಭೀಫ್ ತಿಂದಿಲ್ಲ. ತಿನ್ನಬೇಕು ಅನಿಸಿದರೆ ಬೀಫ್ ತಿನ್ನುತ್ತೇನೆ. ಅದನ್ನು ಕೇಳೋಕೆ ಬಿಜೆಪಿಯವರು ಯಾರು. ಬೀಫ್ ತಿನ್ನಬಾರದು ಅಂತಾ ಹೇಳುತ್ತಾರೆ. ಆದರೆ ಆಸ್ಟ್ರೇಲಿಯಾ ದಿಂದ ಬಂದ ಭೀಫ್ ನ್ನು ತಿನ್ನಬಹುದು ಅಂತಾ ಹೇಳುತ್ತಾರೆ ಎಂದು ಕಿಡಿಕಾರಿದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...