ಸಾಮಾನ್ಯವಾಗಿ ಮಂಗಳೂರಿಗರ ಮನೆಗೆ ಸಂಬಂಧಿಕರು, ಸ್ನೇಹಿತರು ಬಂದರೆ ಮೊದಲು ಹೋಗುವುದು ಮಂಗಳೂರಿನ ಸುಂದರ ಬೀಚ್‌ಗಳಿಗೆ. ನಂತರದ ಸ್ಪಾಟ್ ಐಸ್‌ಕ್ರೀಂ ಪಾರ್ಲರ್. ಅದರಲ್ಲೂ ಐಡಿಯಲ್ ಐಸ್‌ಕ್ರೀಂಗೆ ಅಂದ್ರೇ ತಪ್ಪಾಗಲಾರದು.
ಮಂಗಳೂರಿಗೆ ಬಂದವ ಐಡಿಲ್ ಐಸ್ ಕ್ರೀಂ ಸವಿಯದೇ ವಾಪಾಸ್ ಹೋದರೆ ಛೇ,, ಮಂಗಳೂರಿಗೆ ಹೋಗಿ ಐಡಿಯಲ್ ಐಸ್ ಕ್ರೀಂ ತಿನ್ನದೇ ಬಂದಿದ್ಯಾ ಎಂದು ಆಶ್ಚರ್ಯ ವ್ಯಕ್ತಪಡಿಸಿ ಅವರನ್ನ ಮೂರ್ಖರ ಪಟ್ಟಿಗೆ ಸೇರಿಸಲಾಗುತ್ತಿತ್ತು..! ಐಡಿಯಲ್ ‘ಗಡ್‌ಬಡ್’ ದಶಕಗಳಿಂದ ದೇಶಾದ್ಯಂತ ಚಿರಪರಿಚಿತವಾಗಿದೆ.
ಹತ್ತಾರು ಪ್ರಖ್ಯಾತ ಐಸ್ ಕ್ರೀಂ ಕಂಪೆನಿಗಳಿಗೆ ಸಡ್ಡು ಹೊಡೆದು ಬೆಳೆದು ನಿಂತಿರುವ ಕರಾವಳಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಮನೆ ಮಾತರಾಗಿರುವ ಐಡಿಯಲ್ ಐಸ್ ಕ್ರೀಮ್ ನ ರೂವಾರಿ ಎಸ್. ಪ್ರಭಾಕರ ಕಾಮತ್, ಮೂಲತಃ ಹೊಲಿಗೆ ಸಾಮಗ್ರಿ ಮತ್ತು ಪಟಾಕಿಗಳ ವ್ಯಾಪಾರಸ್ಥರು ಇವರು. ಆಯಾಯ ಸೀಸನ್ ಗಳ ಈ ಉದ್ಯಮದಲ್ಲಿ ಏರುಪೇರು ಸಾಮಾನ್ಯವಾಗಿತ್ತು. ಆಗ ಏನಾದರೂ ಹೆಚ್ಚು ಬೇಡಿಕೆಯಿರುವ ಹೊಸ ಉದ್ಯಮದ ಬಗ್ಗೆ ಪ್ರಭಾಕರ್ ಕಾಮತ್ ಆಲೋಚಿಸಿದರು. ಇದರ ಫಲವೇ ಐಸ್‌ಕ್ರೀಂ ಪಾರ್ಲರ್.
ಆದರೆ ಎಲ್ಲವನ್ನು ಕೂಲಂಕುಶವಾಗಿ ಆಲೋಚಿಸಿ ಹೆಜ್ಜೆ ಇಡುವ ಹೊತ್ತಿಗೆ ಸಾಕಷ್ಟು ಸ್ಪರ್ಧೆ ಆರಂಭವಾಗಿತ್ತು. ಅದಕ್ಕಾಗಿ ಅವರು ಪಟ್ಟ ಪಾಡು ಅಸ್ಟಿಷ್ಟಲ್ಲ.ಆರಂಭದಲ್ಲಿ ಈ ಸ್ಪರ್ಧೆಯನ್ನು ಎದುರಿಸಲು ಮನೆಯಲ್ಲೇ ಬಗೆಬಗೆಯ ಐಸ್‌ಕ್ರೀಂ ತಯಾರು ಮಾಡಿ ಅಕ್ಕ ಪಕ್ಕದ ಮನೆಯವರಿಗೆ ಹಂಚಿ ಅವರಿಂದ ಹಿಮ್ಮಾಹಿತಿ ಪಡೆದರು. ಕೊನೆಗೆ ಮೇ, 1975ರಲ್ಲಿ ಮಾರ್ಕೆಟ್ ರಸ್ತೆಯಲ್ಲಿ 14 ಸ್ವಾದಗಳ ಐಸ್‌ಕ್ರೀಂ, ಪಾರ್ಲರನ್ನು ಆರಂಭಿಸಿಯೇ ಬಿಟ್ಟರು. ಆರಂಭದಲ್ಲಿ ತುಸು ಕಷ್ವಾದರೂ ಎರಡು ವರ್ಷಗಳಲ್ಲಿ ಪಾರ್ಲರ್ ಪ್ರಖ್ಯಾತವಾಯಿತು. ಬೇಡಿಕೆ ಹೆಚ್ಚಾಯಿತು. ಪ್ರಸ್ತುತ ಮಂಗಳೂರು ನಗರದಲ್ಲಿ ಐಡಿಯಲ್ ಐಸ್ ಕ್ರೀಮ್ ನ 5 ಶಾಖೆಗಳಿವೆ. ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ ಮತ್ತು ಗೋವಾದಲ್ಲೂ ಐಡಿಯಲ್ ಐಸ್ ಕ್ರೀಂ ವಿತರಣೆಯಾಗುತ್ತಿದೆ.
ಪ್ರಸ್ತುತ ಐಡಿಯಲ್ ಐಸ್ ಕ್ರೀಂ ಗುಚ್ಚದಲ್ಲಿ ಹತ್ತಾರು ಬಗೆಯ ವಿವಿಧ ಸ್ವಾದಗಳ ಐಸ್ ಕ್ರೀಂ ಗಳು ಲಭ್ಯವಿದ್ದರೂ, ಐಡಿಯಲ್ ಸಂಸ್ಥೆಗೆ ಹೆಸರನ್ನು ತಂದುಕೊಟ್ಟ ಕೀರ್ತಿ ಗಡ್ಬಡ್ ಗೆ ಸಲ್ಲುತ್ತದೆ. ಗಡ್ಬಡ್ ಸವಿಯಲೆಂದೇ ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ನೆರೆಯ ಕಾಸರಗೋಡು ಮಾತ್ರವಲ್ಲದೇ ದೂರದ ಬೆಂಗಳೂರು, ಮುಂಬಾಯಿಗಳಿಂದಲೂ ಐಸ್ ಕ್ರೀಂ ಪ್ರಿಯರು ಐಡಿಯಲ್ ಗೆ ಬರುತ್ತಿದ್ದರು. ಅಂದಹಾಗೇ ಈ ಶಬ್ದದ ಹಿಂದೆ ಒಂದು ರೋಚಕ ಕಥೆ ಇದೆ. ಗಡಿಬಿಡಿ ಧಾರವಾಡದ ಭಾಷೆಯಲ್ಲಿ ಗಡ್‌ಬಡ್. ಧಾರವಾಡದ ತಂಡವೊಂದು ಐಸ್ ಕ್ರೀಂ ಸವಿಯಲು ಐಡಿಯಲ್ ಗೆ ಬಂದಿದ್ದರು. ಬಂದ ತಂಡ ಸ್ವಲ್ಪ ತರಾತುರಿಯಲ್ಲಿದ್ದರಿಂದ ಐಸ್‌ಕ್ರೀಂ ಗಡ್ಬಡ್ (ಬೇಗ) ನೀಡಿ ಎಂದು ಕೇಳಿದ್ದಾರೆ. ಅದೇ ಗಡ್ಬಡ್ ಶಬ್ದ ಮುಂದೆ ಬಹಳ ಫೇಮಸ್ ಆಯಿತು ಎಂಬುದು ಪ್ರತೀತಿ. ಪ್ರಸ್ತುತ ಐಡಿಯಲ್ ಐಸ್ ಕ್ರೀಂ ಗುಚ್ಚದಲ್ಲಿ 40 ಕ್ಕೂ ಹೆಚ್ಚಿನ ಫ್ಲೇವರ್ ಗಳಿವೆ, ಸುಮಾರು 175 ವಿವಿಧ ಬಗೆಯ ಐಸ್‌ಕ್ರೀಂ ಗಳು ಇಲ್ಲಿ ಐಸ್ ಕ್ರೀಂ ಪ್ರಿಯರಿಗೆ ಸವಿಯಲು ಸಿದ್ಧವಾಗುತ್ತವೆ.
ಪ್ರಸ್ತುತ ಕಾಮತರ ಮಗ ಮುಕುಂದ ಕಾಮತ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾಲಯದಲ್ಲಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನ ಕೇಂದ್ರಗಳಲ್ಲಿ ಉನ್ನತ ತರಬೇತಿ ಪಡೆದು ಬಂದಿದ್ದಾರೆ ಮುಕುಂದ ಕಾಮತ್. ಪ್ರಸ್ತುತ ನಾಡಿನ ಉದ್ದಗಲಕ್ಕೂ 2000ಕ್ಕೂ ಐಡಿಯಲ್ ಐಸ್ ಕ್ರೀಂ ಡೀಲರ್‌ಗಳಿವೆ. 27 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿದೆ ಐಡಿಯಲ್‌ನದ್ದು, ಇದರ ಮತ್ತೊಂದು ವಿಶೇಷತೆ ಅಂದರೆ ಮೊಟ್ಟೆ ಅಥವಾ ಯಾವುದೇ ಇತರ ಪ್ರಾಣಿಜನ್ಯ ಕೊಬ್ಬನ್ನು ಬಳಸದೇ ಶೇಕಡ ನೂರರಷ್ಟು ಶುದ್ದ ಸಸ್ಯಾಹಾರಿ ಐಸ್‌ಕ್ರೀಂ ಐಡಿಯಲ್ ನಲ್ಲಿ ತಯಾರಾಗುತ್ತದೆ. ಮತ್ತೊಂದು ವಿಶೇಷವೆಂದರೆ ದಶಕಗಳಿಂದ ಲಕ್ಷಾಂತರ ಗ್ರಾಹಕರಿಗೆ ಉಣಬಡಿಸಿದ ಈ ಐಡಿಯಲ್ ಐಸ್‌ಕ್ರೀಂ ತಯಾರಿಕೆಯ ಗುಟ್ಟು ಕೂಡ ಕುಟುಂಬಸ್ಥರ ಬಳಿ ಗೌಪ್ಯವಾಗಿದೆ…!! ನೀವು ಕೂಡ ಇದುವರೆಗೆ ಐಡಿಯಲ್ ಐಸ್ ಕ್ರೀಂ ಸವಿಯದಿದ್ದರೆ ದಯವಿಟ್ಟು ಮಂಗಳೂರಿಗೆ ಬಂದರೆ ಐಡಿಯಲ್ ಐಸ್ ಕ್ರೀಂ ಪಾರ್ಲರ್ ಗೆ ಭೇಟಿ ನೀಡಿ ನಿಮ್ಮ ಇಷ್ಟದ ಮತ್ತು ಸ್ವಾದದ ಐಸ್ ಕ್ರೀಮನ್ನು ಸವಿಯಿರಿ.
ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕುಂಬಳೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಮೃತಪಟ್ಟ ಮಗು. ಅನಾಸ್ ಪಿಸ್ತಾವನ್ನು ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದಾರೆ. ಬಳಿಕ ಕಂದಮ್ಮನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಯಿತು.
ಆದಿತ್ಯವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ. ಊರಿಗೆ ಬಂದಿದ್ದ ತಂದೆ ಅನ್ವರ್ ಒಂದು ವಾರದ ಹಿಂದೆಯಷ್ಟೇ ಗಲ್ಫ್ ಗೆ ತೆರಳಿದ್ದರು. ಸುದ್ದಿ ತಿಳಿದು ತಂದೆ ಊರಿಗೆ ಮರಳಿದ್ದಾರೆ ಎನ್ನಲಾಗಿದೆ.
ಮಂಗಳೂರು: ಸಮಾಜದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅತ್ಯಾಚಾರಗಳನ್ನು ಕಂಡು ಮನನೊಂದ ಮಂಗಳೂರಿನ ಸಮಾಜ ಸೇವಕರ ತಂಡವೊಂದು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ದೇಶದಾದ್ಯಂತ ಜಾಗೃತಿ ಮೂಡಿಸಲು ಮಂಗಳೂರಿನಿಂದ ದಿಲ್ಲಿಗೆ ಜಾಥ ಹಮ್ಮಿಕೊಂಡು ತೆರಳುತ್ತಿದ್ದರು.
ಆದರೆ ವಿಧಿಯಾಟವೆಂಬಂತೆ ತಂಡದ ಸದಸ್ಯರಿಗೆ ಸೂರತ್ ಬಳಿ ಟ್ರಕ್ ಡಿ*ಕ್ಕಿ ಹೊಡೆದಿದ್ದು, ಇಬ್ಬರು ಸಾ*ವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಗುಜರಾತ್ ನ ಸೂರತ್ ನ 200 ಕಿ.ಮಿ. ದೂರದಲ್ಲಿ ಘಟನೆ ಸಂಭವಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್, ಪ್ರವೀಣ್ ಸಾವನ್ನಪ್ಪಿದ್ದಾರೆ. ಅತ್ಯಾಚಾರಿಗಳಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಮೂಸಾ ಶರೀಫ್, ನೌಫಲ್ ಅಬ್ಬಾಸ್, ಹಂಝ, ಪ್ರವೀಣ್, ಲಿಂಗೇಗೌಡ ಕಾಲ್ನಡಿಗೆ ಜಾಥಾ ಕೈಗೊಂಡಿದ್ದರು.
ರಸ್ತೆ ಬದಿ ಕಾರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಟ್ರಕ್ ಡಿ*ಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಓಮ್ನಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅ*ಪಘಾತ ನಡೆಸಿ ಚಾಲಕ ಪರಾರಿಯಾಗಿದ್ದಾನೆ.
ಇನ್ನು ಮೃತ ಮೂಸಾ ಶರೀಫ್ ಕೆ ಆರ್‌ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಸಾಮಾಜಿಕ ಹೋರಾಟಗಾರರಾಗಿದ್ದ ಮೂಸಾ ಶರೀಫ್ ಕರ್ನಾಟಕ ಸಾರಥಿಗಳ ಟ್ರೇಡ್ ಯೂನಿಯನ್ ಮುಖಂಡರಾಗಿದ್ದರು.