Connect with us

LATEST NEWS

ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ‘ನನಗೆ EDಯಿಂದ ಲವ್‌ ಲೆಟರ್‌ ಬಂದಿದೆ’ ಎಂದ ಶರದ್‌ ಪವಾರ್‌

Published

on

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಂಡ ಮರುದಿನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. 2004, 2009, 2014 ಮತ್ತು 2020ರ ಚುನಾವಣೆಗಳಲ್ಲಿ ಅವರು ಸಲ್ಲಿಸಿದ್ದ ಅಫಿಡವಿಟ್‌ಗಳಿಗೆ ಸಂಬಂಧಿಸಿದಂತೆ ಈ ನೋಟಿಸ್ ಕಳುಹಿಸಲಾಗಿದೆ.


ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿದ ಪವಾರ್, “2004, 2009, 2014 ಮತ್ತು 2020ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಸಲ್ಲಿಸಿರುವ ಎಲ್ಲ ಅಫಿಡವಿಟ್‌ಗಳಲ್ಲಿರುವ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯು ಪ್ರಸ್ತುತ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪವಾರ್, “ನನಗೆ ಆದಾಯ ತೆರಿಗೆ ಇಲಾಖೆಯಿಂದ ಪ್ರೇಮ ಪತ್ರ ಬಂದಿದೆ.”  ಎಂದು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಜಾರಿ ನಿರ್ದೇಶನಾಲಯದ ಮುಂದೆ ಶುಕ್ರವಾರ ಹಾಜರಾದರು. ಈ ವೇಳೆ ಅವರು ತಮ್ಮನ್ನು ‘ನಿರ್ಭೀತ’ ಎಂದು ವರ್ಣಿಸಿಕೊಂಡಿದ್ದಾರೆ.

“ನಾನು ನಿರ್ಭೀತ ವ್ಯಕ್ತಿ. ಏಕೆಂದರೆ ನನ್ನ ಜೀವನದಲ್ಲಿ ನಾನು ಯಾವ ತಪ್ಪನ್ನೂ ಮಾಡಿಲ್ಲ. ಇದೆಲ್ಲವೂ ರಾಜಕೀಯ. ಇದು ಮುಂದೆ ನಮಗೆ ಗೊತ್ತಾಗಲಿದೆ.

ಈಗ ನಾನು ತಟಸ್ಥ ಸಂಸ್ಥೆಗೆ ಹೋಗುತ್ತಿರುವ ಭಾವನೆ ಇದೆ. ನಾನು ಅವರನ್ನು ಸಂಪೂರ್ಣವಾಗಿ ನಂಬುತ್ತೇನೆ” ಎಂದು ರಾವತ್ ತಿಳಿಸಿದ್ದಾರೆ.

DAKSHINA KANNADA

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಲಕ್ಷಾಧಿಪತಿ….ಅವರ ಆಸ್ತಿ ವಿವರ ಇಲ್ಲಿದೆ!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಅವರ ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂ. ಆಗಿದೆ. ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ. ಆಗಿದೆ. ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ., ಇನ್ನು ಒಟ್ಟು 9,62,010 ರೂ. ಅನ್ನು ಇನ್ನೋವಾ ಕಾರಿಗಾಗಿ ಸಾಲ ಮಾಡಿದ್ದಾರೆ.
ಇನ್ನು ಬಿಎಸ್ಸಿ ಶಿಕ್ಷಣದ ಜೊತೆಗೆ ಐಐಎಂ ಅನ್ನು ಇಂದೋರ್​ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಫೆನ್ಸ್ ಆಫೀಸರ್ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ. ಅವರು, ಅವಿವಾಹಿತರಾಗಿದ್ದು 42 ವರ್ಷ ಪ್ರಾಯದವರಾಗಿದ್ದಾರೆ.

ಬ್ರಿಜೇಶ್‌ ಚೌಟ ಯಾರು?

ಮಂಗಳೂರಿನ ರಥಬೀದಿಯಲ್ಲಿ ನೆಲೆಸಿರುವ ಕ್ಯಾಪ್ಟನ್ ಬೃಜೇಶ್ ಚೌಟ ಕಾಲೇಜು ದಿನಗಳಲ್ಲಿಯೇ ಎನ್ ಸಿಸಿಯಲ್ಲಿ ತೊಡಗಿಕೊಂಡಿದ್ದು, ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಅವರು ಇಂದೋರ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಆಡಳಿತ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಯುಪಿಎಸ್ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ 7ನೇ ಬೆಟಾಲಿಯನ್ ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು.

ನಳಿನ್ ಬದಲು ಚೌಟ ಕಣಕ್ಕೆ :

ಕಳೆದ 15 ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಹಿಡಿತದಲ್ಲಿದೆ. ಸತತ ಮೂರು ಬಾರಿ ನಳಿನ್ ಕುಮಾರ್ ಕಟೀಲ್ ಅವರು ಗೆದ್ದುಕೊಂಡು ಬಂದಿದ್ದರು. ಈ ಬಾರಿ ಮಾಜಿ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಆ ಮೂಲಕ ನಳಿನ್ ಕುಮಾರ್ ಕಟೀಲ್​ಗೆ ಟಿಕೆಟ್​ ಕೈತಪ್ಪಿ ಹೋಗಿದೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 4 ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಸಲ್ಲಿಸಿರುವ ನಾಮಪತ್ರ ಅಫಿಡವಿಟ್‌ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ.

Continue Reading

bangalore

ಐದು ವರ್ಷದಲ್ಲಿ ನಾಲ್ಕು ಪಟ್ಟು ಏರಿದ ಆಸ್ತಿ…! ಪ್ರಜ್ವಲ್ ರೇವಣ್ಣ ಘೋಷಿಸಿದ ಆಸ್ತಿ ವಿವರದಲ್ಲಿ ಬಹಿರಂಗ..!!

Published

on

ಬೆಂಗಳೂರು: ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ಅವರು ಗುರುವಾರ (ಮಾ.28) ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

revannaನಾಮಪತ್ರದಲ್ಲಿ ಪ್ರಜ್ವಲ್ ಅವರು ತಮ್ಮ ಆಸ್ತಿ ಮೌಲ್ಯಗಳನ್ನು ಘೋಷಿಸಿದ್ದಾರೆ. ತಮ್ಮ ಒಟ್ಟು ಆಸ್ತಿ ಮೌಲ್ಯ 40.94 ಕೋಟಿ ಎಂದು ಘೋಷಿಸಿದ್ದಾರೆ.

2019ರ ಚುನಾವಣೆಯಲ್ಲಿ ಘೋಷಿಸಿದ ಆಸ್ತಿ ಮೌಲ್ಯಕ್ಕೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. 2019 ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿದವಿಟ್‌ನಲ್ಲಿ ಅವರು ತಮ್ಮ ಒಟ್ಟು ಆಸ್ತಿ ಮೌಲ್ಯ 9.78 ಕೋಟಿ ರೂಪಾಯಿ ಎಂದು ಘೋಷಿಸಿದ್ದರು. ಈ ಬಾರಿ ಪ್ರಜ್ವಲ್ ರೇವಣ್ಣ ಅವರು ಅಫಿಡವಿಟ್‌ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯ 40.94 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಈ ಪೈಕಿ 5.44 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ, 35.40 ಕೋಟಿ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೆ, 9.29 ಲಕ್ಷ ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿವಿಧ ಬ್ಯಾಂಕ್​ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ನಗದು ಇದ್ದು, 5 ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ಆದಾಯ ಗಳಿಸಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಸಿದ್ದು, 31 ಹಸುಗಳು, 4 ಎತ್ತುಗಳು, 1 ಟ್ರ್ಯಾಕ್ಟರ್ ಹೊಂದಿದ್ದಾರೆ.

ಪ್ರಜ್ವಲ್ ರೇವಣ್ಣ ಮಾಡಿದ ಸಾಲ
ಬೆಂಗಳೂರು ನಗರ, ಮೈಸೂರು ಸೇರಿದಂತೆ ವಿವಿಧೆಡೆ ವಾಣಿಜ್ಯ ಕಟ್ಟಡ, ಹೊಳೆನರಸೀಪುರ, ನೆಲಮಂಗಲದಲ್ಲಿ ಆಸ್ತಿ ಹೊಂದಿದ್ದಾರೆ. ಅತ್ತೆ ಅನುಸೂಯಾರಿಂದ 22 ಲಕ್ಷ, ಅತ್ತೆ ಶೈಲಜಾರಿಂದ 10 ಲಕ್ಷ ಸಾಲ ಪಡೆದಿದ್ದು, ತಂದೆ ರೇವಣ್ಣರಿಂದ 86 ಲಕ್ಷ, ಸೋದರ ಸೂರಜ್​ರಿಂದ 1 ಕೋಟಿ ಸಾಲ ಮಾಡಿದ್ದಾರೆ. ಹೀಗೆ ಒಟ್ಟು 4.48 ಕೋಟಿ ಸಾಲ ಹೊಂದಿದ್ದಾರೆ.

ತೆರಿಗೆ ಬಾಕಿ ಉಳಿಸಿಕೊಂಡ ಪ್ರಜ್ವಲ್ ರೇವಣ್ಣ
ಸರ್ಕಾರಕ್ಕೆ 3.4 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. 67 ಲಕ್ಷ ಮೌಲ್ಯದ 1 ಕೆ.ಜಿ. 100 ಗ್ರಾಂ ಚಿನ್ನ ಹೊಂದಿದ್ದಾರೆ. 17.48 ಲಕ್ಷ ಮೌಲ್ಯದ 23 ಕೆ.ಜಿ. ಬೆಳ್ಳಿ, 1.90 ಲಕ್ಷ ಮೌಲ್ಯದ ವಜ್ರಾಭರಣ ಹೊಂದಿದ್ದಾರೆ ಎಂದು ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿದ್ದಾರೆ.

Continue Reading

LATEST NEWS

ಈ ದೇವಸ್ಥಾನದಲ್ಲಿ ಒಂದು ಲಿಂಬೆಹಣ್ಣಿಗೆ ಲಕ್ಷಾಂತರ ರೂ. ಬೇಡಿಕೆ..! ಅಂತದ್ದೇನಿದೆ ಈ ಲಿಂಬೆ ಹಣ್ಣಲ್ಲಿ?

Published

on

ತಮಿಳುನಾಡು: ತಮಿಳುನಾಡಿನಲ್ಲಿರುವ ದೇವಸ್ಥಾನದಲ್ಲಿ ಒಂದು ಲಿಂಬೆ ಹಣ್ಣಿಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇದ್ದು, ಲಿಂಬೆಹಣ್ಣಿಗಾಗಿ ಜನ ಮುಗಿ ಬೀಳುತ್ತಿದ್ದಾರೆ.  ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದ ಉತಿರಂ ಹಬ್ಬದ ಸಂದರ್ಭದಲ್ಲಿ ಒಟ್ಟು ಒಂಬತ್ತು ನಿಂಬೆ ಹಣ್ಣು ಬರೋಬ್ಬರಿ 2.36 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗಿದೆ. ಸಾಮಾನ್ಯವಾಗಿ ಅಂಗಡಿಗಳಲ್ಲಿ 10 ರೂಪಾಯಿಗೆ ಎರಡು ಮೂರು ನಿಂಬೆ ಹಣ್ಣು ಖರೀದಿಸಬಹುದು. ಆದ್ರೆ, ಇಲ್ಲಿನ ಲಿಂಬೆ ಹಣ್ಣು ಮಾತ್ರ ವಿಶೇಷವಾಗಿದೆ. ಹಾಗಾಗಿ ಭಾರೀ ಬೇಡಿಕೆ ಗಿಟ್ಟಿಸಿಕೊಂಡಿದೆ.

ಈ ಲಿಂಬೆಹಣ್ಣಿನಲ್ಲೇನಿದೆ?

ಮುರುಗನ್ ದೇವಸ್ಥಾನದಲ್ಲಿ ಪತ್ರೀ ವರ್ಷ ಅದ್ಧೂರಿಯಾಗಿ ಒಂಭತ್ತು ದಿನಗಳ ಕಾಲ ಉತಿರಂ ಹಬ್ಬವನ್ನು ಆಚರಿಸಲಾಗುತ್ತದೆ. ಒಂಭತ್ತು ದಿನಗಳ ದೇವರ ಪೂಜಾ ಸಮಯದಲ್ಲಿ ಒಂದೊಂದು ದಿನ ದೇವರ ತ್ರಿಶೂಲದ ಮೇಲೆ ಲಿಂಬೆ ಹಣ್ಣುಗಳನ್ನು ಇಟ್ಟು ಅರ್ಚಕರು ಪೂಜೆ ಸಲ್ಲಿಸುತ್ತಾರೆ.

ಈ ಲಿಂಬೆಹಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎಂದು ಸಾಕಷ್ಟು ವರ್ಷಗಳಿಂದ ಭಕ್ತರು ನಂಬಿಕೊಂಡು ಬಂದಿದ್ದಾರೆ. ಸಂತಾನದೋಷದಿಂದ ಬಳಲುತ್ತಿರುವ ದಂಪತಿಗಳಿಗೆ ಈ ಲಿಂಬೆಹಣ್ಣು ಸಿಕ್ಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಲಿಂಬೆ ಹಣ್ಣನ್ನು ಪಡೆದವರಿಗೆ ಯಶಸ್ಸು ಹೆಗಲೇರಿ ಬರುತ್ತದೆ ಎಂಬ ಪ್ರತೀತಿ ಇದೆ.

Continue Reading

LATEST NEWS

Trending