Connect with us

    LATEST NEWS

    ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಎನ್ನಿಸುತ್ತೆ; ನಿನ್ನೆಯ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಭಾಪತಿ ಹೊರಟ್ಟಿ

    Published

    on

    ಮಂಗಳೂರು/ಬೆಳಗಾವಿ: ನಿನ್ನೆ ಇಡೀ ರಾಜ್ಯ ರಾಜಕಾರಣವೇ ಕಂಡು ಕೇಳರಿಯದಂತಹ ಘಟನೆ ನಡೆದಿದೆ. ಅಶ್ಲೀಲ ಪದದಿಂದ ಹಿಡಿದು ವಿಧಾನಪರಿಷತ್ ಸದಸ್ಯನ ಮೇಲೆ ಹಲ್ಲೆಗೆ ಹೋಗಿರುವವರೆಗೆ ಆರೋಪಗಳು ಕೇಳಿಬಂದಿದೆ. ಸದನದಲ್ಲಾದ ಈ ಘಟನೆಯ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

    ನಡೆದಿದ್ದು ಏನು?
    ಗುರುವಾರ ಮಧ್ಯಾಹ್ನ ವಿಧಾನ ಪರಿಷತ್ ಗದ್ದಲದಿಂದ ಕೂಡಿತ್ತು. ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ವಾಗ್ಯುದ್ದ ನಡೆದಿತ್ತು. ವಾಗ್ವಾದದ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಿಜೆಪಿ ಎಂಎಲ್ ಸಿ ಟಿ ರವಿ ಅವರಿಗೆ ಕೊಲೆಗಡುಕ ಎಂದು ನಿಂದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಶ್ಲೀಲ ಪದಗಳಿಂದ ನಿಂದಿಸಿದರು.

    ನಂತರ ಸಿ ಟಿ ರವಿ ಅವರ ಮೇಲೆ ಲಕ್ಷೀ ಹೆಬ್ಬಾಳ್ಕರ್ ಬೆಂಬಲಿಗರು ಹಲ್ಲೆ ಕೂಡ ನಡೆಸಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಯಿಂದ ಮಾನ್ಯ ಸಭಾದ್ಯಕ್ಷರಾದ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

    ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ನಿಧನ

    ಸಭಾಪತಿ ಹೊರಟ್ಟಿ ಬೇಸರ
    ಸದನದಲ್ಲಾದ ಘಟನೆಯ ಬಗ್ಗೆ ನನಗೆ ನಿಜಕ್ಕೂ ಬೇಸರವಿದೆ. ನನ್ನ 45 ವರ್ಷದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕೂಡ ಈ ರೀತಿಯಾಗಿರಲಿಲ್ಲ. ಒಂದೊಂದು ಸಲ ಯಾಕಾದರೂ ಅಲ್ಲಿ ಕೂತಿದ್ದೇನೆ ಎನಿಸುತ್ತಿದೆ ಎಂದು ಹೊರಟ್ಟಿಯವರು ಬೇಸರ ವ್ಯಕ್ತಪಡಿಸಿದ್ದಾರೆ.

    ಘಟನೆಯ ಬಗ್ಗೆ ಅಸಮಾಧಾನಗೊಂಡಿರುವ ಬಸವರಾಜ್ ಹೊರಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್, ಸಿ.ಟಿ ರವಿ ಇಬ್ಬರ ಜೊತೆಯೂ ನಾನು ಮಾತಾಡಿದೆ. ನಾನು ಅಶ್ಲೀಲ ಪದ ಬಳಸಿಲ್ಲ ಎಂದು ಸಿ.ಟಿ ರವಿ ಹೇಳಿದ್ದು, ಒಟ್ಟಾರೆಯಾಗಿ ನನಗೆ ನಿಜಕ್ಕೂ ಬೇಸರವಾಗಿದೆ ಎಂದು ಹೊರಟ್ಟಿ ಹೇಳಿದ್ದಾರೆ.

    ಇನ್ನು ಸಿ ಟಿ ರವಿ ಅವರು ಬಳಸಿದ್ದಾರೆ ಎನ್ನಲಾಗಿರುವ ಅಶ್ಲೀಲ ಪದಗಳ ಬಗ್ಗೆ ದಾಖಲೆಗಳು ಇಲ್ಲ ಎಂದು ಈಗಾಗಲೇ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

    LATEST NEWS

    ಅಮೇರಿಕಾದ ಮಾಜಿ ಅಧ್ಯಕ್ಷರ ನಿ*ಧನಕ್ಕೆ ಭಾರತದ ಗ್ರಾಮದಲ್ಲಿ ರಜೆ..!

    Published

    on

    ಮಂಗಳೂರು/ಹರಿಯಾಣ : ಡಿಸೆಂಬರ್ 29 ರಂದು ತನ್ನ 100 ನೇ ವಯಸ್ಸಿನಲ್ಲಿ ನಿ*ಧನರಾದ ಯುನೈಟೆಡ್ ಸ್ಟೇಟ್ಸ್‌ನ 39 ನೇ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಗೌರವಾರ್ಥ ಭಾರತದ ಗ್ರಾಮವೊಂದರಲ್ಲಿ ರಜೆ ಘೋಷಣೆ ಮಾಡಲಾಗಿದೆ. ವಿಶೇಷ ಅಂದರೆ ಈ ಗ್ರಾಮಕ್ಕೆ ಜಿಮ್ಮಿ ಕಾರ್ಟರ್ ಅವರ ಹೆಸರಿಡಲಾಗಿದ್ದು, ಕಾರ್ಟರ್‌ ಪುರಿ ಅಂತ ಗುರುತಿಸಿಕೊಂಡಿದೆ. ಭಾರತಕ್ಕೆ ಭೇಟಿ ನೀಡಿದ ಅಮೆರಿಕಾದ ಮೂರನೇ ಅಧ್ಯಕ್ಷ ಹಾಗೂ ತುರ್ತು ಪರಿಸ್ಥಿಯ ಬಳಿಕ ಭೇಟಿ ನೀಡಿದ ಮೊದಲ ಅಧ್ಯಕ್ಷ ಜಿಮ್ಮಿ ಕಾರ್ಟರ್.

    1978 ರ ಜನವರಿ 3 ರಂದು ಜಿಮ್ಮಿ ಕಾರ್ಟರ್ ಅವರು ಪತ್ನಿ ರೋಸಾಲಿನ್ ಅವರ ಜೊತೆ ಅಧಿಕೃತ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಹರಿಯಾಣದ ಗುರ್ಗಾಂವ್‌ನ ಸಣ್ಣ ಹಳ್ಳಿಯಾಗಿದ್ದ ಚುಮಾ ಖೇರಗಾಂವ್ ಗೆ ಭೇಟಿ ನೀಡಿದ್ದರು. 1960ರ ಸುಮಾರಿಗೆ ಜಿಮ್ಮಿ ಕಾರ್ಟರ್ ಅವರ ತಾಯಿ ಲಿಲಿಯನ್ ಅವರು ಬಾಂಬೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದು, ಈ ಗ್ರಾಮದ ಜೊತೆ ನಂಟು ಹೊಂದಿದ್ದರು ಎನ್ನಲಾಗಿದೆ. ಹೀಗಾಗಿ ಈ ಗ್ರಾಮಕ್ಕೆ ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭೇಟಿ ನೀಡಿದ್ದರು.


    ಮೂಲಭೂತ ಸೌಲಭ್ಯ ವಂಚಿತವಾಗಿದ್ದ ಈ ಹಳ್ಳಿಗೆ ಅಮೇರಿಕಾ ಅಧ್ಯಕ್ಷರು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಅಂದಿನ ಮೊರಾರ್ಜಿ ದೇಸಾಯಿ ಸರ್ಕಾರ ಗ್ರಾಮದ ರಸ್ತೆಗಳನ್ನು ಉನ್ನತೀಕರಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿ ಅವರೇ ಈ ಗ್ರಾಮಕ್ಕೆ ತೆರಳಿ ಅಮೆರಿಕದ ಅಧ್ಯಕ್ಷರನ್ನು ಸ್ವಾಗತಿಸಿದ್ದರು. ಹರಿಯಾನಿ ಪೇಟ ಧರಿಸಿ ಅಮೇರಿಕಾ ಅಧ್ಯಕ್ಷರು ಕಾಣಿಸಿಕೊಂಡರೆ, ಅವರ ಪತ್ನಿ ಸ್ಥಳೀಯ ಉಡುಗೆ ಧರಿಸಿ ಗ್ರಾಮದಲ್ಲಿ ಅಡ್ಡಾಡಿದ್ದರು.
    ಅಭಿವೃದ್ದಿ ಕಾಣದೇ ಇದ್ದ ಗ್ರಾಮಕ್ಕೆ ಅಮೇರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭೇಟಿಯಿಂದ ಅದೃಷ್ಟ ಖುಲಾಯಿಸಿತ್ತು. ಹೀಗಾಗಿ ಕಾರ್ಟರ್ ಅವರ ಗೌರವಾರ್ಥ ಗ್ರಾಮದ ಹೆಸರನ್ನೇ ‘ಕಾರ್ಟರ್ ಪುರಿ’ ಎಂದು ಮರು ನಾಮಕರಣ ಮಾಡಲಾಗಿತ್ತು.

    ಇದನ್ನೂ ಓದಿ : ಕೇರಳ ಮೂಲದ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡ್ ನದಿಯಲ್ಲಿ ಪತ್ತೆ

    ಜಿಮ್ಮಿ ಕಾರ್ಟರ್ ಅವರು ಗ್ರಾಮಕ್ಕೆ ಭೇಟಿ ನೀಡಿದ ಜನವರಿ 3 ರಂದು ಇಂದಿಗೂ ಈ ಗ್ರಾಮದಲ್ಲಿ ರಜಾ ದಿನವಾಗಿ ಸ್ವಾತಂತ್ರ್ಯದಂತೆ ಸಂಭ್ರಮದ ದಿನವಾಗಿ ಆಚರಿಸಲಾಗುತ್ತದೆ. 2002 ರಲ್ಲಿ ಕಾರ್ಟರ್ ಅವರಿಗೆ ನೋಬೆಲ್ ಪ್ರಶಸ್ತಿ ಸಿಕ್ಕಾಗಲೂ ಇಲ್ಲಿ ಸಂಭ್ರಮಾಚರಣೆ ಮಾಡಲಾಗಿತ್ತು. ಇದೀಗ ತನ್ನ 100ನೇ ವಯಸ್ಸಿನಲ್ಲಿ ಅಗಲಿದ ನಾಯಕನಿಗೆ ಗ್ರಾಮದಲ್ಲಿ ಶೃದ್ಧಾಂಜಲಿ ಸಲ್ಲಿಸಿ ರಜೆ ಘೋಷಣೆ ಮಾಡಲಾಗಿದೆ.

    Continue Reading

    International news

    ಕೇರಳ ಮೂಲದ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡ್ ನದಿಯಲ್ಲಿ ಪತ್ತೆ

    Published

    on

    ಮಂಗಳೂರು/ಲಂಡನ್: ಡಿಸೆಂಬರ್ 6 ರಿಂದ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿಯ ಶ*ವ ಸ್ಕಾಟ್ಲೆಂಡಿನ ನದಿಯೊಂದರಲ್ಲಿ ಪತ್ತೆಯಾಗಿದೆ.

    ಕೇರಳದ ಕೋಲೆಂಚೇರಿಯ ಮೂಲದ ಸಂತ್ರಾ ಸಾಜು ಅವರು ಸ್ಕಾಟಿಷ್ ನ ಎಡಿನ್ ಬರ್ಗ್ ನಲ್ಲಿರುವ ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಡಿಸೆಂಬರ್ 6ರ ಸಂಜೆ ಲಿವಿಂಗ್ ಸ್ಟನ್ ನ ಆಲ್ಮಂಡ್ ವೇಲ್ ನಲ್ಲಿರುವ ಅಸ್ಡಾ ಸೂಪರ್ ಮಾರ್ಕೆಟ್ ನಲ್ಲಿ ಕೊನೆಯದಾಗಿ ಸಂತ್ರಾ ಕಾಣಿಸಿಕೊಂಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಇದನ್ನೂ ಓದಿ: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಹಗ್ಗ ತುಂಡಾಗಿ ಬಿದ್ದು ಸಾವು

    ‘ಡಿಸೆಂಬರ್ 27ರ ಬೆಳಿಗ್ಗೆ 11:55ರ ವೇಳೆ ಎಡಿನ್ ಬರ್ಗ್ ನ ನ್ಯೂಬ್ರಿಡ್ಜ್ ಬಳಿ ನದಿಯಲ್ಲಿ ಯುವತಿಯೊಬ್ಬಳ ಶ*ವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಸಂತ್ರಾ ಅವರ ಮೃ*ತದೇಹವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃ*ತದೇಹದ ಗುರುತು ಖಚಿತಪಡಿಸಿಕೊಳ್ಳಲು ಸಂತ್ರಾ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ’ ಎಂದು ಸ್ಕಾಟ್ಲೆಂಡ್ ಪೊಲೀಸರು ತಿಳಿಸಿದ್ದಾರೆ.

    ಸಂತ್ರಾ ಅವರ ಸಾವಿನ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Continue Reading

    LATEST NEWS

    ಸಿದ್ಧರಾಮಯ್ಯ ಪರ ಪ್ರತಾಪ್ ಸಿಂಹ ಬ್ಯಾಟಿಂಗ್; ಕಾಂಗ್ರೆಸ್ ಸೇರ್ತಾರಾ ಮಾಜಿ ಸಂಸದ?

    Published

    on

    ಮಂಗಳೂರು/ಮೈಸೂರು : ಮೈಸೂರಿನ ರಸ್ತೆಯೊಂದಕ್ಕೆ ಸಿಎಂ ಸಿದ್ಧರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ಸೂಚಿಸಿದ್ದರು. ಇದರ ಬೆನ್ನಲ್ಲೇ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಗಾಸಿಪ್ ಹರಿದಾಡಲಾರಂಭಿಸಿದೆ.

    ಮೈಸೂರು ಪಾಲಿಕೆಯು ಕೆಆರ್‌ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರಿಡುವ ಬಗ್ಗೆ ಬಿಜೆಪಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಹೆಸರಿಟ್ಟರೇನು ತಪ್ಪು? ಎಂದು ಮಾಜಿ ಸಂಸದ ಸಿಎಂ ಪರ ಮಾತನಾಡಿದ್ದರು. ಈ ವಿಚಾರ ಸ್ವತಃ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಹುಟ್ಟಿಸಿತ್ತು. ಇದೀಗ ಪ್ರತಾಪ್ ಸಿಂಹ ಕಾಂಗ್ರೆಸ್ ಸೇರ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

    ಏನಂದ್ರು ಪ್ರತಾಪ್ ಸಿಂಹ?

    ರಸ್ತೆಗೆ ಸಿದ್ಧರಾಮಯ್ಯರ ಹೆಸರಿಡಿ ಎಂದ ತಕ್ಷಣ ನಾನು ಸಿದ್ಧರಾಮಯ್ಯ ಪರ ಅಂತಲ್ಲ. ಕೆ.ಆರ್.ಎಸ್ ರಸ್ತೆಗೆ ಹೆಸರಿಲ್ಲ ಎಂದು ಕಾರ್ಪೋರೇಷನ್‌ನವರು ಹೇಳಿದ್ದರು. ಹಾಗಾಗಿ ಸಿದ್ಧರಾಮಯ್ಯ ಹೆಸರಿಡಲಿ ಬಿಡಿ ಎಂದಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿಗೆ ಹಲವು ಕೊಡುಗೆಗಳನ್ನು ಸಿದ್ಧರಾಮಯ್ಯ ನೀಡಿದ್ದಾರೆ. ಹಾಗಾಗಿ ಅವರ ಹೆಸರಿಡುವುದರಲ್ಲಿ ತಪ್ಪಿಲ್ಲ ಎಂದಿದೆ. ಹಾಗೆಂದ ತಕ್ಷಣ ನಾನು ಸಿದ್ಧರಾಮಯ್ಯ ಪರ ಅಂತಲ್ಲ ಎಂದಿದ್ದಾರೆ.

    ಕಳೆದ 11 ವರ್ಷದಿಂದ ಸಿದ್ಧರಾಮಯ್ಯರನ್ನು ವಿರೋಧಿಸುತ್ತಿರುವವನು ಪ್ರತಾಪ್ ಸಿಂಹ ಒಬ್ಬನೇ. ಅವರ ಸಿದ್ಧಾಂತಗಳ ವಿರೋಧಿ ನಾನು. ಮೈಸೂರು ಏರ್ಪೋರ್ಟ್‌ಗೆ ಟಿಪ್ಪು ಹೆಸರನ್ನು ಇಡಲು ಸಿದ್ಧರಾಮಯ್ಯ ಹೊರಟಿದ್ದರು. ಅದನ್ನು ಬೊಮ್ಮಾಯಿಗೆ ಹೇಳಿ ತಡೆದೆ. ಇದಕ್ಕೆ ಮೈಸೂರು ಮಹಾರಾಣಿ ಕೂಡ ನನ್ನನ್ನು ಹೊಗಳಿದ್ರು. ಮೈಸೂರು ಬೆಂಗಳೂರು ನಡುವೆ ಟಿಪ್ಪು ಎಕ್ಸ್‌ಪ್ರೆಸ್ ಅಂತ ಇತ್ತು. ಅದನ್ನು ಒಡೆಯರ್ ಎಕ್ಸ್‌ಪ್ರೆಸ್ ಅಂತ ಬದಲಾಯಿಸಿದೆ. ಅಂದು ಕೂಡ ಪ್ರಮೋದಾದೇವಿ ನನ್ನ  ಕಾರ್ಯಕ್ಕೆ ಶ್ಲಾಘಿಸಿದ್ರು .

    ಇದನ್ನೂ ಓದಿ : ಅಯ್ಯಪ್ಪ ಮಾಲಾಧಾರಿಗಳು ಕಪ್ಪು ಬಟ್ಟೆ ಯಾಕೆ ಧರಿಸುತ್ತಾರೆ ಗೊತ್ತಾ?

    ಸಿದ್ಧರಾಮಯ್ಯ ಸರ್ಕಾರ ನನ್ನ ಮೇಲೆ ಕಳೆದ 3 ತಿಂಗಳಲ್ಲಿ 5 ಎಫ್‌ಐಆರ್ ಹಾಕಿದೆ. ನನ್ನ ಬದ್ಧತೆ ಪ್ರಶ್ನಿಸುವವರು ನನ್ನ ಟ್ರ್ಯಾಕ್ ರೆಕಾರ್ಡ್ ಒಮ್ಮೆ ನೋಡಿ ಎಂದು ವದಂತಿ ಹಬ್ಬಿಸಿದವರಿಗೆ ಟಾಂಗ್ ನೀಡಿದ್ದಾರೆ. ರಸ್ತೆಗೆ ಹೆಸರಿಡುವ ವಿಚಾರವನ್ನು ದೊಡ್ಡದು ಮಾಡೋದು ಬೇಡ. ವಿವಾದ ಮಾಡೋದು ಬೇಡ. ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದಿದ್ದಾರೆ.

    Continue Reading

    LATEST NEWS

    Trending