ಬಹು ಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ನಾಲ್ವರು ಯುವತಿಯರು ಸೇರಿದಂತೆ 6 ಮಂದಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ತೆಲಂಗಾಣದ ಸೆಕುಂದರಾಬಾದ್ ನಲ್ಲಿ ನಡೆದಿದೆ.
ಹೈದ್ರಾಬಾದ್ : ಬಹು ಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ನಾಲ್ವರು ಯುವತಿಯರು ಸೇರಿದಂತೆ 6 ಮಂದಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ತೆಲಂಗಾಣದ ಸೆಕುಂದರಾಬಾದ್ ನಲ್ಲಿ ನಡೆದಿದೆ.
ಸಂಜೆ 7.30 ರ ವೇಳೆಗೆ ಸೆಕುಂದರಾಬಾದ್ ನ ಸ್ವಪ್ನಲೊಕ್ ಕಟ್ಟಡದ 5 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ರಮೇಣ ಬೆಂಕಿ 6 ಮತ್ತು 7 ನೇ ಮಳಿಗೆಗಳಿಗೂ ಆವರಿಸಿದೆ.
ದಟ್ಟವಾದ ಹೊಗೆ ಮತ್ತು ಬೆಂಕಿಯಿಂದಾಗಿ ಹೊರ ಬರಲಾಗದೆ 13 ಮಂದಿ ಸಿಲುಕಿಕೊಂಡಿದ್ದು, ಅವರಲ್ಲಿ 7 ಮಂದಿಯನ್ನು ರಕ್ಷಿಸಲಾಯಿತು.
ಆದರೆ ಉಳಿದ 6 ಮಂದಿ ಹೊಗೆಯಿಂದ ಉಸಿರುಕಟ್ಟಿ ಮೃತ ಪಟ್ಟಿದ್ದಾರೆ.
ಪ್ರಮೀಳಾ, ವೆನ್ನೆಲಾ, ಶ್ರಾವಣಿ, ಪ್ರಶಾಂತ್, ತ್ರಿವೇಣಿ, ಶಿವ ಮೃತ ದುರ್ದೈವಿಗಳು.
ಎಲ್ಲರೂ ತೆಲಂಗಾಣದ ವಾರಂಗಲ್ ಮತ್ತು ಕಮ್ಮಂ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಈ ಕಟ್ಟಡದಲ್ಲಿ ಬೇರೆ ಬೇರೆ ಕಂಪೆನಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಮೃತ ಪಟ್ಟವರು ಮಾರ್ಕೆಟಿಂಗ್ ಕಂಪೆನಿಯೊಂದರ ಉದ್ಯೋಗಿಗಳಾಗಿರುತ್ತಾರೆ. 10 ಕ್ಕೂ ಅಧಿಕ ಆಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಹಕರಿಸಿದವು.
ವಿದ್ಯುತ್ ಶಾರ್ಟ್ ಸಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ.