Home ಪ್ರಮುಖ ಸುದ್ದಿ ಹುಷಾರ್.. ಎಲ್ಲರೂ ಮನೆಯಲ್ಲೇ ಇರಿ ರಸ್ತೆಗಿಳಿದರೆ ವಾಹನ ಸೀಜ್ ಬೀಳುತ್ತೆ ಕೇಸ್..!!

ಹುಷಾರ್.. ಎಲ್ಲರೂ ಮನೆಯಲ್ಲೇ ಇರಿ ರಸ್ತೆಗಿಳಿದರೆ ವಾಹನ ಸೀಜ್ ಬೀಳುತ್ತೆ ಕೇಸ್..!!

ಹುಷಾರ್.. ಎಲ್ಲರೂ ಮನೆಯಲ್ಲೇ ಇರಿ ರಸ್ತೆಗಿಳಿದರೆ ವಾಹನ ಸೀಜ್ ಬೀಳುತ್ತೆ ಕೇಸ್..!!

ಮಂಗಳೂರು : ಕೊರೊನಾ ಮಹಾಮಾರಿ ತಡೆಯುವ ಕಾರಣಕ್ಕಾಗಿ ಇಡೀ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನ ಮನೆಯಲ್ಲೇ ಇದ್ದು, ಸಾಮಾಜಿಕ ತರ ಕಾಯ್ದುಕೊಳ್ಳವುದರಿಂದ ಮಾತ್ರ ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟಲು ಸಾಧ್ಯ ಎನ್ನುವ ಕಾರಣಕ್ಕಾಗಿ ಈ ಲಾಕ್ ಡೌನ್ ಅನ್ನು ಜಾರಿಗೆ ತರಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲೆಯ ಗಡಿಭಾಗವಾದ ಕೇರಳದ ಕಾಸರಗೋಡಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈ ಮಾರಕ ರೋಗ ಹರಡದಂತೆ ಎಚ್ಚರಿಕೆವಹಿಸುವ ನಿಟ್ಟಿನಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಇಂದು ಮುಂಜಾನೆಯಿಂದಲೇ ರಸ್ತೆಗಿಳಿದ ಪೋಲೀಸ್ ಇಲಾಖೆ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗಸ್ತು ಆರಂಭಿಸಿದೆ.

ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಪಿಕೆಟಿಂಗ್ ನಡೆಸಿರುವ ಪೋಲೀಸರು ರಸ್ತೆಯಲ್ಲಿ ತಿರುಗಾಡುವ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ.

ಮುಖ್ಯವಾಗಿ ದ್ವಚಕ್ರ ವಾಹನಗಳನ್ನು ನಿಲ್ಲಿಸಿ ಸೂಕ್ತ  ಕಾರಣಗಳಿಲ್ಲದೆ ತಿರುಗಾಡುವ ವಾಹನಗಳನ್ನು ಸ್ಥಳದಲ್ಲೇ ಸೀಝ್ ಮಾಡಲಾಗುತ್ತಿದ್ದಾರೆ.

ಮುಂದಿನ ಒಂದು ವಾರಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಅನಿವಾರ್ಯವಾಗಿದ್ದು, ಈ ನಿಟ್ಡಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಅದಲ್ಲದೆ ಅರೆಸೇನಾ ಪಡೆಗಳನ್ನೂ ರಸ್ತೆಗಿಳಿಸುವ ಆಯ್ಕೆ ಕೂಡಾ ಜಿಲ್ಲಾಡಳಿತದ ಮುಂದಿದೆ. ಅಗತ್ಯ ಸಾಮಾಗ್ರಿಗಳನ್ನು ಮನೆ ಬಾಗಿಲಿಗೇ ಕೊಂಡೊಯ್ಯವ ವ್ಯವಸ್ಥೆಯನ್ನೂ ಸಮರ್ಪಕವಾಗಿ ಮಾಡಲು ಜಿಲ್ಲಾಡಳಿತ ಹಲವು ಕ್ರಮಗಳನ್ನೂ ಕೈಗೊಂಡಿದೆ.

ದಿನಸಿಗಾಗಿ ಆ್ಯಪ್‌ ಮೂಲಕ ಆರ್ಡರ್, ಅಪಾರ್ಟ್‌ಮೆಂಟ್ ಗಳು ತಮಗರ ಬೇಕಾದ ದಿನಸಿ ಗಳ ಪಟ್ಟಿಯನ್ನು ಗೋಡೆಗೆ ಅಂಟಿಸಿ ಮನೆ ಬಾಗಿಲಿಗೆ ಸಾಮಾಗ್ರಿಗಳು ಬರಲಿವೆ ಎಂದು ಮಂಗಳೂರು ಮಹಾನಗರ ಪಾಲಿಕರ ಆಯುಕ್ತರು ಈಗಾಗಲೇ ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಭಾಗದಲ್ಲೂ ಇಂಥ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

video..

- Advertisment -

RECENT NEWS

ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಗಳಲ್ಲಿ ಜೂ 13 ರಿಂದ ಪ್ರಾರ್ಥನೆಗೆ ಅವಕಾಶ

ಚರ್ಚ್ ಗಳಲ್ಲಿ ನಡೆಯುತ್ತಿದೆ ಭರದ ಸಿದ್ದತೆ ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜೂ 13ರಿಂದ ಸರಕಾರದ ನಿಯಮಗಳನ್ನು ಪಾಲಿಸಿ ಚರ್ಚ್ ಗಳಲ್ಲಿ ಪ್ರಾರ್ಥನೆಗಳನ್ನು ಆರಂಭಿಸಲಾಗುವುದು ಎಂದು ಧರ್ಮಾಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ತಿಳಿಸಿದ್ದಾರೆ. ಈ ಕುರಿತು...

ಜೂನ್ 8 ರಿಂದ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ….!!

 ಶೀತ, ಕೆಮ್ಮು ಇದ್ದವರಿಗೆ ನಮಾಝ್ ಗೆ ಪ್ರವೇಶ ನಿರಾಕರಣೆ ಮಂಗಳೂರು : ರಾಜ್ಯ ಸರಕಾರ ಜೂನ್‌ 8 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಜೂನ್ 8 ರಿಂದ ಮಸೀದಿಗಳಲ್ಲಿ...

ಜುಲೈವರೆಗೆ ಉಡುಪಿ ಕೃಷ್ಣನ ದರ್ಶನ ಭಾಗ್ಯ ಇಲ್ಲ

20 ರಿಂದ 30 ದಿನಗಳ ನಂತರ ಪರಿಸ್ಥಿತಿ ನೋಡಿ ಅವಕಾಶ ಉಡುಪಿ: ರಾಜ್ಯ ಸರಕಾರ ಈಗಾಗಲೇ ಜೂನ್ 8ರ ನಂತರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಅದರಂತೆ ಈಗಾಗಲೇ ರಾಜ್ಯದ ಮುಜರಾಯಿ ಇಲಾಖೆ...

ಕೃಷ್ಣನಗರಿಯಲ್ಲಿ ನಿಲ್ಲದ ಕೊರೊನಾ ಪ್ರವಾಹ: ಇಂದು ಮತ್ತೆ 121 ಮಂದಿಗೆ ಪಾಸಿಟಿವ್..!

ಉಡುಪಿಗೆ ಕಂಟಕವಾದ ಮಹಾರಾಷ್ಟ್ರ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889ಕ್ಕೆ ಏರಿಕೆ..! ಉಡುಪಿ: ಕೃಷ್ಣನಗರಿ ಉಡುಪಿಯಲ್ಲಿ ಹೆಮ್ಮಾರಿ ಕೊರೊನಾ ಪ್ರವಾಹ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ದಿನೇ ದಿನೇ ಕೋವಿಡ್-19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 121...