ಮಂಗಳೂರು: ಕುಡಿದ ಮತ್ತಿನಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಮಾಡಿದ ಘಟನೆ ಮಂಗಳೂರಿನ ಬಜಪೆ ಠಾಣಾ ವ್ಯಾಪ್ತಿಯ ಎಕ್ಕಾರಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಎಕ್ಕಾರು ಪಲ್ಲದ ಕೋಡಿ ನಿವಾಸಿ ಸರಿತಾ ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಪತಿ ದುರ್ಗೇಶ್ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ದುರ್ಗೆಶ್ ಕುಡಿತದ ಚಟ ಹೊಂದಿದ್ದು, ಪ್ರತೀ ದಿನ ಪತ್ನಿ ಸರಿತಾಳಿಗೆ ಕಿರುಕುಳ ಕೊಡುತ್ತಿದ್ದ. ಈ ಹಿಂದೆ ಹಲವು ಬಾರಿ ದುರ್ಗೇಶ್ ಪತ್ನಿಗೆ ಹಲ್ಲೆ ನಡೆಸಿದ್ದು ಗಾಯಗೊಂಡ ಪತ್ನಿ ಒಂದೆರಡು ಬಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು.
ಆದರೆ ನಿನ್ನೆ ಈತನ ವರ್ತನೆ ಅತಿರೇಕಕ್ಕೆ ಹೋಗಿದ್ದು, ಇದಕ್ಕೆ ಸರಿತ ಬಲಿಯಾಗಿದ್ದಾರೆ.
ಘಟನೆ ಸಮಯ ಮನೆಯಲ್ಲಿದ್ದ ದುರ್ಗೇಶನ ಮಗ ರಾಹುಲ್ ಹೆದರಿಕೊಂಡು ಸ್ಥಳದಿಂದ ಓಡಿಕೊಂಡು ತನ್ನ ಅಜ್ಜಿಯ ಮನೆಗೆ ಹೋಗಿದ್ದಾನೆ.
ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.