Thursday, August 11, 2022

ಉಡುಪಿ: ಪತ್ನಿಗೆ ಬೆಲ್ಟ್‌ ಹಾಗೂ ಕಲ್ಲಿನಿಂದ ಹೊಡೆದು ಜೀವಬೆದರಿಕೆ-ಪ್ರಕರಣ ದಾಖಲು

ಉಡುಪಿ: ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆಲ್ಟ್‌ ಹಾಗೂ ಕಲ್ಲಿನಿಂದ ಹೊಡೆದು ಜೀವಬೆದರಿಕೆ ಹಾಕಿದ ವ್ಯಕ್ತಿಯೋರ್ವನ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ
ಉಡುಪಿ ಮೂಲದ ನಿವೇದಿತಾ ಶೆಟ್ಟಿ ಎಂಬುವವರನ್ನು ಬೆಂಗಳೂರಿನ ಕವೀಶ್ ಶೆಟ್ಟಿ ಎಂಬುವವರಿಗೆ ಕುಟುಂಬಸ್ಥರ ಸಮ್ಮುಖದಲ್ಲಿ 6 ಲಕ್ಷ ವರದಕ್ಷಿಣೆ ನೀಡಿ ಹಾಗೂ ಮದುವೆಯ ಎಲ್ಲಾ ಖರ್ಚನ್ನು ನಿವೇದಿತಾ ಶೆಟ್ಟಿ ತಂದೆ ತಾಯಿ ಭರಿಸಿ 2008ರ ಡಿ.7ರಂದು ಮದುವೆ ಮಾಡಿ ಕೊಟ್ಟಿದ್ದರು.

ಮದುವೆಯ ಕೆಲ ತಿಂಗಳ ನಂತರ ಕವೀಶ್ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಯನ್ನು ನೀಡಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ನೀಡುತ್ತಿದ್ದರು. ಹಾಗೂ ಪತ್ನಿಗೆ ಬೆಲ್ಟ್ ನಿಂದ ಹೊಡೆದು ದೈಹಿಕ ಹಿಂಸೆಯನ್ನು ನೀಡಿದ್ದಾನೆ.

ಇದರಿಂದ ನೊಂದು 2018ರ ಜೂನ್ ತಿಂಗಳಲ್ಲಿ ಉಡುಪಿಯ ತವರು ಮನೆಗೆ ಬಂದಿದ್ದರು. ಈ ವೇಳೆ ಉಡುಪಿಗೆ ಬಂದ ಆರೋಪಿ ಕೆಲವು ಪೇಪರ್ ಹಾಗೂ ಚೆಕ್ ಗಳನ್ನು ತಂದು ಸಹಿ ಹಾಕುವಂತೆ ನಿವೇದಿತಾ ಶೆಟ್ಟಿಯನ್ನು ಒತ್ತಾಯಿಸಿದಾಗ ಆಕೆ ನಿರಾಕರಿಸಿದ್ದು ಆಗ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದಿದ್ದು,

ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ 24/2022 ಕಲಂ: 498(ಎ), 323, 324, 504,506 ಐಪಿಸಿ ಮತ್ತು ಕಲಂ: 3, 4 ಡಿಪಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics

ಕೃಷಿಕರೇ ಗಮನಿಸಿ: ಕಿಸಾನ್ ಸಮ್ಮಾನ್ ನಿಧಿಯ ಪರಿಹಾರಕ್ಕಾಗಿ ಆ. 15 ರೊಳಗೆ ಇ-ಕೆವೈಸಿ ಕಡ್ಡಾಯ

ಮಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕರ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾhttp://pmkisan.gov.in ಪೋರ್ಟಲ್‌ನ ಫಾರ್ಮರ್ಸ್ ಕೋರ್ನರ್ ಮೂಲಕ ಆಧಾರ್ ಸಂಖ್ಯೆ ಹಾಗೂ ಮೊಬೈಲ್...

“ಬೆಳ್ತಂಗಡಿಯಲ್ಲಿ ಪೂಂಜಾ ಬಂದ್ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ”

ಬೆಳ್ತಂಗಡಿ: 'ನಮ್ಮ ತಾಲೂಕಿನಲ್ಲಿ ಹರೀಶ್ ಪೂಂಜಾನ 40 ಪರ್ಸೆಂಟ್ ವ್ಯವಹಾರ ನಡೆಯುತ್ತಿದೆ. ಬೆಳ್ತಂಗಡಿಯಲ್ಲಿ ಪೂಂಜಾ ಬಂದ ಮೇಲೆ ಮರ ಕಡಿಯಲು, ಮರಳು ತೆಗೆಯಲು ಲೈಸನ್ಸ್‌ ಬೇಡ್ವೇ ಬೇಡ. ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವೇಳೆ...

ಮಂತ್ರಾಲಯದಲ್ಲಿ ರಾಯರಿಗೆ ಪೂಜೆ ಸಲ್ಲಿಸಿದ ಮಾಜಿ CM ಬಿ.ಎಸ್ ವೈ & ಕುಟುಂಬ

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪನವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಅವರು ಹಾಗೂ ಸಹೋದರ ಬಿ. ವೈ ವಿಜಯೇಂದ್ರ ಅವರು...