ಬೆಂಗಳೂರು: ದಿನವಿಡೀ ಮೊಬೈಲ್‌ನಲ್ಲೇ ಮಾತನಾಡುತ್ತಿದ್ದ ಪತ್ನಿಯನ್ನು ಪ್ರಶ್ನಿಸಿದ ಗಂಡನಿಗೆ ‘ನಾನು ಯಾರ ಜತೆ ಬೇಕಾದರೂ ಮಾತನಾಡುತ್ತೇನೆ’ ಎಂದು ಎದುರು ಉತ್ತರ ನೀಡಿದ ಪತ್ನಿಯನ್ನು ಸಿಟ್ಟಿಗೆದ್ದ ಗಂಡ ಕತ್ತು ಹಿಸುಕಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಾವೇರಿಪುರದ ವನಜಾಕ್ಷಿ (31) ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ವ್ಯಕ್ತಿ ಗಂಡ ಅಶೋಕ್ (37) ಬಂಧಿತ ಆರೋಪಿ.
ಏ.17ರಂದು ಸಂಜೆ ಅಶೋಕ್ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ವನಜಾಕ್ಷಿ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದ. ಇದರಿಂದ ಸಿಟ್ಟಿಗೆದ್ದ ಆತ, ‘ಯಾರ ಜತೆ ಮಾತನಾಡುತ್ತಿದ್ದೀಯಾ? ಯಾವಾಗಲೂ ಪೋನ್‌ನಲ್ಲಿಯೇ ಬ್ಯುಸಿ ಇರ್ತಿಯಾ’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ವನಜಾಕ್ಷಿ ಕೂಡ, ‘ನಾನು ಯಾರ ಜತೆ ಬೇಕಾದರೂ ಮಾತನಾಡುತ್ತೇನೆ’ ಎಂದು ಎದುರು ಉತ್ತರ ನೀಡಿದ್ದಾಳೆ.
ಇದೇ ವಿಚಾರ ವಿಕೋಪಕ್ಕೆ ಹೋಗಿ ಸಿಟ್ಟಿಗೆದ್ದ ಗಂಡ ಪತ್ನಿಯ ಕತ್ತು ಹಿಸುಕಿದ್ದಾನೆ. ನಂತರ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ, ಮೃತದೇಹವನ್ನು ಮನೆಯ ಒಳಗಡೆಯೇ ಬಿಟ್ಟು, ಮನೆ ಹೊರಗಿನಿಂದ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ವನಜಾಕ್ಷಿ ಸಹೋದರ ಆಕೆಯ ಮೊಬೈಲ್ ಕರೆ ಮಾಡಿದರೂ ಸ್ವೀಕರಿಸಿದ ಹಿನ್ನೆಲೆ ಅನುಮಾನಗೊಂಡು ರಾತ್ರಿ ತಂಗಿ ಮನೆಯ ಹತ್ತಿರ ಹೋಗಿ ನೋಡಿದಾಗ ಬೀಗ ಹಾಕಿರುವುದು ಕಂಡು ಬಂದಿದೆ.
ಜತೆಗೆ ಮನೆಯ ಒಳಗಡೆಯಿಂದ ಕೆಟ್ಟ ವಾಸನೆ ಬಂದಿದ್ದು, ಕಿಟಕಿ ಮೂಲಕ ನೋಡಿದಾಗ ವನಜಾಕ್ಷಿ ಮೃತದೇಹ ಮನೆಯ ಹಾಲ್‌ನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಇವರು 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಅಶೋಕ್ ಕ್ಯಾಬ್ ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದರೆ, ವನಜಾಕ್ಷಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು.
ಶಾಲೆಗಳಿಗೆ ರಜಾ ಇದ್ದುದರಿಂದ ಮೂವರು ಮಕ್ಕಳನ್ನು ಇತ್ತೀಚೆಗೆ ಊರಿಗೆ ಕಳುಹಿಸಿದ್ದರು.
ಪ್ರಕರಣ ದಾಖಲಿಸಿ ಆರೋಪಿ ಅಶೋಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪತ್ನಿ ವನಜಾಕ್ಷಿ ಯಾವಾಗಲೂ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಇರುತ್ತಿದ್ದಳು. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಮೊಬೈಲ್‌ನಲ್ಲಿ ಮಾತನಾಡುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ, ಜಗಳ ವಿಕೋಪಕ್ಕೆ ಹೋಗಿ ಸಿಟ್ಟಿನಿಂದ ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.
ಸದ್ಗತಿ ಪ್ರಾಪಗತಿರಸ್ತು..