Thursday, September 29, 2022

ಕೋಟಿ ಹಣ, ಕೆ.ಜಿ ಚಿನ್ನ ಕೊಟ್ರೂ ಪತ್ನಿ ತಲೆ ಮೇಲೆ ಮೂತ್ರ ಮಾಡಿ ಕಿರುಕುಳ..!

ಬೆಂಗಳೂರು: ಕೋಟಿಗಟ್ಟಲೆ ಹಣ, ಕೆ. ಜಿ. ಗಟ್ಟಲೆ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ಕೊಟ್ಟು ವೈಭಪೂರಿತವಾಗಿ ಮದುವೆ ಮಾಡಿಕೊಟ್ಟರೂ ಧನದಾಹಿ ಪತಿ ಮತ್ತೆ ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಯ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡಿ ಕಿರುಕುಳ ಕೊಟ್ಟು ವಿಕೃತಿ ಮೆರೆದ ಘಟನೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ತೆಲಂಗಾಣ ಮೂಲದ ಖ್ಯಾತ ಉದ್ಯಮಿಯೊಬ್ಬರ ಮಗಳನ್ನು, 2021ರ ಜನವರಿಯಲ್ಲಿ ಬೆಂಗಳೂರು ನಗರದ ಶಂಕರಪುರಂನ ಸಂದೀಪ್‌ ಎಂಬುವವರನ್ನು ಮದುವೆಯಾಗಿದ್ದರು. ಆಗರ್ಭ ಶ್ರೀಮಂತರಾದ ನಮ್ರತಾ ತಂದೆ ವರದಕ್ಷಿಣೆಯಾಗಿ ಸಂದೀಪ್‌ಗೆ 4 ಕೆ. ಜಿ. ಚಿನ್ನಾಭರಣ,

200 ಕೆ. ಜಿ. ಬೆಳ್ಳಿ ಆಭರಣ ಮತ್ತು 55 ಲಕ್ಷ ರೂ. ಬೆಲೆ ಬಾಳುವ ಮಿನಿ ಕೂಪರ್‌ ಕಾರು ಕೊಟ್ಟಿದ್ದರು. ಇಷ್ಟು ಸಾಲದೆಂಬಂತೆ 6 ಕೋಟಿ ರೂ. ವೆಚ್ಚದಲ್ಲಿ ಹೈದರಾಬಾದ್‌ನ ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದರು.
ಮನೆಗೆ ಬಂದ ಹೊಸದರಲ್ಲಿ ಆಕೆಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಪತಿ ಮತ್ತು ಕುಟುಂಬಸ್ಥರು ತವರು ಮನೆಯಿಂದ ಮತ್ತಷ್ಟು ಹಣ ತರುವಂತೆ ಕಿರುಕುಳ ಕೊಡಲಾರಂಭಿಸಿದರು.

ಈ ವೇಳೆ ತನ್ನ ಮಗಳು ಚೆನ್ನಾಗಿರಲಿ ಎಂದು 2 ಶೋರೂಂಗಳನ್ನು ಪುತ್ರಿಯ ಹೆಸರಿಗೆ ತಂದೆ ಬರೆದು ಕೊಟ್ಟಿದ್ದರು. ಅದಾದ ನಂತರವೂ ಕಿರುಕುಳ ತಾಳಲಾರದೆ ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಾದಕ ವ್ಯಸನಿಯಾದ ನನ್ನ ಪತಿಯು ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದು ಡ್ರಗ್ಸ್‌ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದರು. ಡ್ರಗ್ಸ್‌ ಸೇವಿಸಿದ ನಂತರ ನಶೆಯಲ್ಲಿ ನನ್ನ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದರು.

ಅಲ್ಲದೆ, ನನ್ನ ಬಟ್ಟೆ ಮತ್ತು ವಸ್ತುಗಳನ್ನು ಬ್ಯಾಗ್‌ಗೆ ತುಂಬಿಸಿ ಮನೆ ಬಿಟ್ಟು ಹೋಗುವಂತೆ ಅವಾಚ್ಯವಾಗಿ ನಿಂದಿಸಿದ್ದರು. ಆಗ ಅತ್ತೆ ಮಾವ ಸಹ ತಮ್ಮ ಮಗನನ್ನು ಬೆಂಬಲಿಸಿ ನನಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಕಡಬ: ಕಾನ್ವೆಂಟ್‌ಗೆ ನುಗ್ಗಿ ಹಲ್ಲೆಗೆ ಯತ್ನ-ಇಬ್ಬರು ಯುವಕರು ಅರೆಸ್ಟ್

ಕಡಬ: ಕಾನ್ವೆಂಟ್‌ವೊಂದಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ ಘಟನೆ ಕಡಬದ ನೆಲ್ಯಾಡಿಯಲ್ಲಿ ನಡೆದಿದೆ.ಕಡಬ ತಾಲೂಕಿನ ಪೇರಡ್ಕ ನಿವಾಸಿಗಳಾದ ಸದಾಂ...

ತುಳು ಭಾಷೆಗೆ ಸ್ಥಾನಮಾನ: ನವರಾತ್ರಿ ಮುಗಿದ ಕೂಡಲೇ ಮೀಟಿಂಗ್

ಮಂಗಳೂರು: ಮಂಗಳೂರಿನ ಸರಕಾರಿ ಕಛೇರಿ ಹಾಗೂ ಬಸ್ಸುಗಳಲ್ಲಿ ಕನ್ನಡ ಕಡ್ಡಾಯ ಮಾಡಿ ತುಳು ಭಾಷೆಯ ಮೇಲೆ ಸವಾರಿ ಮಾಡಿದ್ದಲ್ಲದೆ ದ.ಕ ಜಿಲ್ಲೆ ಸೇರಿ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ಸಚಿವ ಸುನೀಲ್ ಕುಮಾರ್‌ರವರು...

ಮಂಗಳೂರು: ಚಿಟ್ ಫಂಡ್ ಹೆಸರಲ್ಲಿ ಕೋಟ್ಯಾಂತರ ರೂ. ಪಂಗನಾಮ-ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಗಳೂರು: ಮಂಗಳೂರು ನಗರ ಹೊರವಲಯದ ಸುರತ್ಕಲ್‌ನಲ್ಲಿ ಭಾರ್ಗವಿ ಫೈನಾನ್ಸ್‌ ಮತ್ತು ಚಿಟ್ ಫಂಡ್ ನಡೆಸಿ ಅಮಾಯಕರಿಗೆ ವಂಚಿಸಿದ ಪ್ರಕರಕ್ಕೆ ಸಂಬಂಧಿಸಿ ಭಾರ್ಗವಿ ಫೈನಾನ್ಸ್‌ ಮಾಲಕ ಅಶೋಕ್ ಭಟ್ ಮತ್ತು ಆತನ‌ ಪತ್ನಿ ವಿದ್ಯಾಭಟ್...