ಉಡುಪಿ:ಮುಳುಗುತ್ತಿದ್ದ ಅನ್ಯ ಕೋಮಿನ ಬಾಲಕನನ್ನು ಉಳಿಸಲು ಯತ್ನಿಸಿ ಮಾನವೀಯತೆ ಮೆರೆದ ಮೀನುಗಾರ ಯುವಕರು..!
ಪಡುಬಿದ್ರಿ: ಹೆಜಮಾಡಿ ಕೋಡಿಯ ಮುಟ್ಟಳಿವೆ ಬಳಿ ಗುರುವಾರ ಸಂಜೆ ಈಜುತಿದ್ದ ವೇಳೆ ನೀರುಪಾಲಾಗುತಿರುವ ವಿಷಯ ತಿಳಿದು ಹಿಂದೂ ಯುವಕರು ತಮ್ಮ ಜೀವದ ಹಂಗು ತೊರೆದು ನದಿಗೆ ಹಾರಿ ಬಾಲಕರನ್ನು ಉಳಿಸಲು ಯತ್ನಿಸಿದ್ದಾರೆ..
ಸ್ಥಳೀಯ ಮೀನುಗಾರರಾದ ನಿತೇಶ್ ಮೊಗವೀರ, ಕಿರಣ್ ಮೊಗವೀರ, ಹಾಗೂ ರಂಜಿತ್ ಮೊಗವೀರ, ಶೈಲೇಶ್ ಇವರು ಮಾನವೀಯತೆ ಮೆರೆದ ಯುವಕರು.
ಇವರ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಗುರುವಾರ ಸಂಜೆ ಹೆಜಮಾಡಿ ಮುಟ್ಟಳಿವೆಯಲ್ಲಿ ಎನ್.ಎಸ್. ರಸ್ತೆ ನಿವಾಸಿ ಮೋಸಿನ್(೧೬), ಎಸ್. ಎಸ್. ರಸ್ತೆ ನಿವಾಸಿ ಮೊಹಮ್ಮದ್ ರಾಯಿಸ್(೧೬) ಈಜುತಿದ್ದ ವೇಳೆ ಮುಳುಗುತ್ತಿರುವುದನ್ನು ಕಂಡ ಇನ್ನೋರ್ವ ಸ್ನೇಹಿತ ಮೊಹಮ್ಮದ್ ನಬೀಲ್ ಅವರನ್ನು ಉಳಿಸಲು ಬೊಬ್ಬೆ ಹಾಕುತಿದ್ದ ಆದರೆ ಯಾರೂ ನದಿಗೆ ಹಾರುವ ಧೈರ್ಯ ತೋರಲಿಲ್ಲ. ಏಕೆಂದರೆ ಇದು ಅಪಾಯಕಾರಿ ಪ್ರದೇಶವಾಗಿತ್ತು.
ಒಂದು ಕಿಮೀ ದೂರದಲ್ಲಿ ಮೀನುಗಾರಿಕೆ ನಡೆಸುತಿದ್ದ ಕಿರಣ್, ರಂಜಿತ್, ನಿತೇಶ್, ಶೈಲೇಶ್ ಕ್ಷಣಾರ್ಧದಲ್ಲಿ ಓಡೋಡಿ ಬಂದು ನದಿಗೆ ಹಾರಿ ಅವರನ್ನು ಉಳಿಸುವ ಪ್ರಯತ್ನ ಮಾಡಿದರು.
ಮೊಸೀನ್‌ನನ್ನು ಮೊದಲು ಮೇಲಕ್ಕೆತ್ತಿದ ಇವರು ಅವರಿಗೆ ಪ್ರಥಮ ಚಿಕಿತ್ಸೆ ನಡೆಸಿ ಅವರ ಬಾಯಿಗೆ ಬಾಯಿ ಕೊಟ್ಟು ಬದುಕಿಸುವ ಪ್ರಯತ್ನ ನಡೆಸಿ ಕೂಡಲೇ ಅಲ್ಲಿದ್ದ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ರಾಯಿಸ್‌ಗಾಗಿ ಹುಡುಕಾಟ ನಡೆಸಿದ ಇವರು ಕೆಲವೇ ಕ್ಷಣದಲ್ಲಿ ಮೇಲಕೆತ್ತಿದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ರಾಯಿಸ್ ಬದುಕುಳಿಯಲಿಲ್ಲ.
೧೨-೧೩ ಅಡಿ ಆಳವಿರುವ ಈ ಪ್ರದೇಶ ಅಪಾಯಕಾರಿ ಸ್ಥಳವಾಗಿದೆ. ಒಂದು ಕಿಮೀ ದೂರವಿದ್ದು ಯುವಕರು ನೀರಿಗೆ ಹಾರಿ ಒಬ್ಬರನ್ನು ಕೂಡಲೇ ಮೇಲಕೆತ್ತಿ. ಪ್ರಥಮ ಚಿಕಿತ್ಸೆ ಮಾಡಿದ್ದೇವೆ. ಇನ್ನೊಬ್ಬರನ್ನು ಮೂರು ನಿಮಿಷದಲ್ಲಿ ಮೇಲಕೆತ್ತಿದ್ದೇವೆ. ನಮ್ಮಿಂದ ಆಗುವ ಪ್ರಯತ್ನ ಮಾಡಿದ್ದೇವೆ. ಆದರೆ ಬದುಕಿಸಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಇದೆ ಎನ್ನುತ್ತಾರೆ ನಿತೇಶ್ ಸುವರ್ಣ.
ಮುಟ್ಟಳಿವೆ ಪ್ರದೇಶ ಅಪಾಯಕಾರಿಯಾಗಿದ್ದು, ಒಂದು ಕಿಮೀ ದೂರ ಓಡಿಕೊಂಡು ಹೋಗಿ ನೀರಿಗೆ ಇಳಿಯುವುದು ಅಷ್ಟು ಸುಲಭವಲ್ಲ. ನದಿಗೆ ಹಾರಿ ಬಚಾವ್ ಮಾಡಲು ಯತ್ನಿಸಿದ್ದೇವೆ. ಆದರೆ ಜೀವ ಉಳಿಸಲು ಆಗಲಿಲ್ಲ, ಮಾಡಿದ ಕೆಲಸದಲ್ಲಿ ನಮಗೆ ತೃಪ್ತಿ ಇದೆ ಎನ್ನುತ್ತಾರೆ ಕಿರಣ್ ಮೊಗವೀರ.