Connect with us

    ಅನಾಥ ಶವಕ್ಕೆ ಮುಕ್ತಿ ನೀಡಿ ಪುಣ್ಯ ಕಟ್ಟಿಕೊಂಡ ಮುಲ್ಕಿಯ ಸಾಮಾಜಿಕ ಕಾರ್ಯಕರ್ತರು..!

    Published

    on

    ಅನಾಥ ಶವಕ್ಕೆ ಮುಕ್ತಿ ನೀಡಿ ಪುಣ್ಯ ಕಟ್ಟಿಕೊಂಡ ಮುಲ್ಕಿಯ ಸಾಮಾಜಿಕ ಕಾರ್ಯಕರ್ತರು..!

    ಮಂಗಳೂರು :  ಕಳೆದ ನಾಲ್ಕು ದಿನಗಳಿಂದ ವಾರಿಸುದಾರರಿಲ್ಲದೆ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಶವವನ್ನು ಸಾಮಾಜಿಕ ಕಾರ್ಯಕರ್ತರು ಸಾರ್ವಜನಿಕರು ಸೇರಿ ಮುಕ್ತಿ ನೀಡಿದ ಘಟನೆ ಗುರುವಾರ ಮುಲ್ಕಿಯಲ್ಲಿ ನಡೆದಿದೆ.

    ಕಳೆದ ಎರಡು ತಿಂಗಳ ಹಿಂದೆ ಮಂಗಳೂರಿನ ಜಿಲ್ಲಾ ಆಸ್ಪತ್ರೆಯನ್ನು ಕೊರೋನಾ ಕಾರಣದಿಂದಾಗಿ ಕೋವಿಡ್ ಅಸ್ಪತ್ರೆಯನ್ನಾಗಿಸುವ ಸಂದರ್ಭದಲ್ಲಿ ಅಲ್ಲಿದ್ದ ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿತ್ತು.

    ಆ ಮುಖೇನ ಮುಲ್ಕಿಯ ಸರಕಾರಿ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಕೆಲವೊಂದು ರೋಗಿಗಳಲ್ಲಿ ಫಾತಿಮ ಎಂಬ ಹೆಸರಿನ ಮಹಿಳೆಯೂ ಇದ್ದರು.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ, ಕಳೆದ ನಾಲ್ಕು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ,

    ವಾರಿಸುದಾರರು ಇಲ್ಲದ ಕಾರಣ ಮುಲ್ಕಿ ಶವಗಾರದಲ್ಲಿ ಇರಿಸಿದ್ದ ಶವವನ್ನು ಸಾಮಾಜಿಕ ಕಾರ್ಯಕರ್ತರು ಸೇರಿ ಮುಲ್ಕಿ ನಗರ ಸದಸ್ಯ ಪುತ್ತುಬಾವ ಹಾಗು ಇಬ್ರಾಹಿಮ್ ಕಾರ್ನಾಡ್ ಅವರ ಸಹಕಾರದಲ್ಲಿ ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗು ಸ್ಥಳೀಯ ಆಡಳಿತದ ಕಾರ್ಯವಿಧಾನ ಕಾನೂನುಗಳನ್ನು ಪಾಲಿಸಿದ ಬಳಿಕ ಧಾರ್ಮಿಕ ವಿಧಿವಿಧಾನದೊಂದಿಗೆ ಮುಲ್ಕಿ ಬಳಿಯ ಕಾರ್ನಾಡು ದರ್ಗಾ ಪಕ್ಕದ ದಫನ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
    ಸ್ಥಳೀಯ ಸಾಮಾಜಿಕ ಕಾರ್ಯಕರ್ತರಾದ ಆಪತ್ಭಾಂಧವ ಆಶಿಫ್, ಅದ್ದಿ ಬೊಳ್ಳೂರು, ಮರ್ವಾನ್, ನವಾಝ್ ಹಾಗು ಕಾರ್ನಾಡಿನ ರಿಝ್ವಾನ್ ಅವರ ತಂಡ ಮತ್ತಿತರರು ಈ ಸತ್ಕಾರ್ಯದಲ್ಲಿ ಪಾಲ್ಗೊಂಡಿದ್ದರು.

    Click to comment

    Leave a Reply

    Your email address will not be published. Required fields are marked *

    LATEST NEWS

    ದಸರಾ ಆನೆಗಳ ಮುಂದೆ ಸೆಲ್ಫೀ, ರೀಲ್ಸ್, ಫೋಟೋಶೂಟ್’ಗೆ ಇಲ್ಲ ಅವಕಾಶ

    Published

    on

    ಬೆಂಗಳೂರು : ಈಗೀಗ ಮೊಬೈಲ್ ಕ್ರೇಝ್ ಹೆಚ್ಚಾಗಿದೆ. ಹಾಗಾಗಿ ಸಿಕ್ಕ ಸಿಕ್ಕಲ್ಲಿ ರೀಲ್ಸ್, ಸೆಲ್ಫಿಗಳದೇ ಕಾರುಬಾರು.  ಅಲ್ಲದೇ, ಕ್ಯಾಮೆರಾ ಹಿಡಿದು ಫೋಟೋಕ್ಕೆ ಫೋಸು ಕೊಡುವವರೇ ಹೆಚ್ಚು. ಆದರೆ, ಈ ಬಾರಿ ನೀವು ಮೈಸೂರು ದಸರಾ ಉತ್ಸವದ ಮೆರವಣಿಗೆಗೆ ಹೋಗಿ ಫೋಟೋ  ತೆಗೆಯೋಣ, ಸೆಲ್ಫಿ ತೆಗೆಯೋಣ ಅಂದ್ಕೊಂಡ್ರೆ ಅವಕಾಶವಿಲ್ಲ.

    ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ. ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಸಾಕು ಆನೆಗಳ ಬಳಿ ಫೋಟೋ ಶೂಟ್, ಸೆಲ್ಫೀ, ರೀಲ್ಸ್‌ಗಳಿಗೆ ಅವಕಾಶ ನೀಡಬಾರದು ಎಂದಿದ್ದಾರೆ.

    ಶುಕ್ರವಾರ(ಸೆ.20) ಮೈಸೂರಿನಲ್ಲಿ ದಸರಾ ಆನೆಗಳ ನಡುವಿನ ಕಾದಾಟ ನಡೆದಿತ್ತು. ಆ ಬಳಿಕ ಸಚಿವ ಈಶ್ವರ್ ಖಂಡ್ರೆ ಈ ಆದೇಶ ಹೊರಡಿದ್ದಾರೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಆನೆಗಳ ಬಳಿ ದಂತ ಹಿಡಿದುಕೊಂಡು ಫೋಟೋ ಶೂಟ್ ಮಾಡಿಸುವುದು, ವೀಡಿಯೋ ಮಾಡುವುದು, ಸೆಲ್ಫೀ ಕ್ಲಿಕ್ಕಿಸುವುದು ಹಾಗೂ ರೀಲ್ಸ್‌ಗೆ ಮುಂದಾಗುವಂತಹ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಇದನ್ನೂ ಓದಿ : ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸ್ಪರ್ಧಿಗಳ ಹೆಸರು ಘೋಷಣೆ- ಯಾರದು?

    ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಕಾನೆಗಳ ಬಳಿ ಫೋಟೋಶೂಟ್ ಮತ್ತು ರೀಲ್ಸ್ ಮಾಡಲು ಅಧಿಕಾರಿಗಳೇ ಅವಕಾಶ ನೀಡಿದ್ದು, ಇದರಿಂದ ಆನೆಗಳು ವಿಚಲಿತವಾಗಿ ಅನುಚಿತವಾಗಿ ವರ್ತಿಸುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಕಾಂಜನ್ ಮತ್ತು ಧನಂಜಯ ಆನೆಗಳ ನಡುವೆ ಕಾದಾಟ ನಡೆದಿತ್ತು.

    Continue Reading

    LATEST NEWS

    ಫರಂಗಿಪೇಟೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಮೂವರಿಗೆ ಗಾಯ

    Published

    on

    ವಿಟ್ಲದಿಂದ ಮಂಗಳೂರು ವಿಮಾನ ನಿಲ್ದಾಣದ ಕಡೆಗೆ ಸಾಗುತ್ತಿದ್ದ ಕಾರೊಂದು ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮೂವರು ಗಾಯಗೊಂಡ ಘಟನೆ ಇಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ಸಂಭವಿಸಿದೆ.

    ಬೆಳಗ್ಗೆ 6.15 ರ ವೇಳೆಗೆ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಮೂವರು ಪ್ರಯಾಣಿರಿಗೆ ತುರ್ತಾಗಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿದ್ದರಿಂದ ಅವರನ್ನು ಆಟೋ ರಿಕ್ಷಾದಲ್ಲಿ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಕೊಡಲಾಯಿತು.

    ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ಮನೆಯೊಂದರ ಅಂಗಳದಲ್ಲಿ ಮಗುಚಿ ಬಿದ್ದಿದೆ. ಬೆಳಗ್ಗಿನ ವೇಳೆ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಚಾಲಕನ ನಿಯಂತ್ರಣ ಕಳೆದುಕೊಂಡಿರ ಬೇಕೆಂದು ಶಂಕಿಸಲಾಗಿದೆ.

    Continue Reading

    LATEST NEWS

    ಮೆಟ್ರೋ ನಿಲ್ದಾಣದಲ್ಲಿಅನಾಹುತ; ಹಳಿಗೆ ಹಾರಿ ವ್ಯಕ್ತಿ ಆತ್ಮಹ*ತ್ಯೆ

    Published

    on

    ದೆಹಲಿ/ಮಂಗಳೂರು: ದೆಹಲಿಯ ಲೋಕ ಕಲ್ಯಾಣ್ ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಳಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಘಟನೆ ನಡೆದಿದೆ. 28 ವರ್ಷದ ದೇವೇಂದ್ರಕುಮಾರ್ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

    ರಾಜಸ್ಥಾನ್‌ ಅಲ್ವಾರ್ ನಿವಾಸಿಯಾಗಿರುವ ದೇವೆಂದ್ರ ಕುಮಾರ್ ಲೋಕಕಲ್ಯಾಣ್ ಮಾರ್ಗ ಮೆಟ್ರೋ ನಿಲ್ದಾಣದ ಪ್ಲಾಟ್‌ ಫಾರ್ಮ್‌ ಸಂಖ್ಯೆ 2ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಶವವನ್ನು ಆರ್‌ಎಂಎಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

    Continue Reading

    LATEST NEWS

    Trending