Tuesday, November 24, 2020

ಮಹಾರಾಷ್ಟ್ರದ ಥಾಣೆಯಲ್ಲಿ ಪತ್ತೆಯಾಯಿತು ಬೃಹತ್ ನಕಲಿ ನೋಟು ಜಾಲ..!

ಮಂಗಳೂರು ಯುನಿಟಿ ಆಸ್ಪತ್ರೆ ಎದುರುಗಡೆ ವ್ಯಕ್ತಿಯ ಮೇಲೆ ತಲವಾರು ದಾಳಿ..!

ಮಂಗಳೂರು ಯುನಿಟಿ ಆಸ್ಪತ್ರೆ ಎದುರುಗಡೆ ವ್ಯಕ್ತಿಯ ಮೇಲೆ ತಲವಾರು ದಾಳಿ..! ಮಂಗಳೂರು : ಮಂಗಳೂರು ನಗರಲ್ಲಿ ಮತ್ತೆ ತಲವಾರು ಬೀಸಲಾಗಿದೆ. ನಗರದ ಯುನಿಟಿ ಆಸ್ಪತ್ರೆ ಸಮೀಪ ಯುವಕನ ಮೇಲೆ ತಲವಾರು ದಾಳಿ ನಡೆದಿದೆ.  ನಿನ್ನೆ ಸೋಮವಾರ...

ಕೆಲವೇ ಗಂಟೆಗಳಲ್ಲಿ 50 ಲಕ್ಷ ರೂ ಮೌಲ್ಯದ ಪಾನ್ ಮಸಾಲ ದರೋಡೆ ಪ್ರಕರಣ ಭೇದಿಸಿದ ಪೊಲೀಸರು..!

ಕೆಲವೇ ಗಂಟೆಗಳಲ್ಲಿ 50 ಲಕ್ಷ ರೂ ಮೌಲ್ಯದ ಪಾನ್ ಮಸಾಲ ದರೋಡೆ ಪ್ರಕರಣ ಭೇದಿಸಿದ ಪೊಲೀಸರು..! ಚಾಮರಾಜನಗರ : 50 ಲಕ್ಷ ರೂಪಾಯಿಗು ಹೆಚ್ಚು ಮೌಲ್ಯದ ಪಾನ್ ಮಸಾಲ ಹಾಗು ಟೊಬ್ಯಾಕೋ ದರೋಡೆಯಾದ ಕೆಲವೆ...

ಉಡುಪಿ : ಮೇಲಿಂದ ಬಿದ್ದ ಸೀಲಿಂಗ್ ಫ್ಯಾನ್ – ಕೂದಲೆಳೆಯಂತರದಲ್ಲಿ ಪಾರಾದ ತರಕಾರಿ ಮಳಿಗೆ ಮಾಲಕ

ಉಡುಪಿ : ಮೇಲಿಂದ ಬಿದ್ದ ಸೀಲಿಂಗ್ ಫ್ಯಾನ್ - ಕೂದಲೆಳೆಯಂತರದಲ್ಲಿ ಪಾರಾದ ತರಕಾರಿ ಮಳಿಗೆ ಮಾಲಕ ಉಡುಪಿ : ಮೇಲಿಂದ ಏಕಾಎಕಿ ಬಿದ್ದ ಫ್ಯಾನಿನಿಂದ ಕೂದಲೆಳೆಯ ಅಂತರದಲ್ಲಿ ಅಂಗಡಿ ಮಾಲಿಕ ಪಾರಾದ ಘಟನೆ ಉಡುಪಿ...

ಮುಂಬೈ- ಮಹಾರಾಷ್ಟ್ರ ಹೋಗುವವರು ದಯವಿಟ್ಟು ಗಮನಿಸಿ..!!

ಮುಂಬೈ- ಮಹಾರಾಷ್ಟ್ರ ಹೋಗುವವರು ದಯವಿಟ್ಟು ಗಮನಿಸಿ..!! ಮುಂಬೈ : ಮಹಾರಾಷ್ಟ್ರದಲ್ಲಿ ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಶಿಸ್ತುಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯದಿಂದ ಹೊರ ಹೋಗುವ...

ರಾಜ್ಯ ಬಂದ್ ಗೆ ಕರೆನೀಡಿದ ಕನ್ನಡ ಸಂಘಟನೆಗಳನ್ನು ಶೂಟ್ ಮಾಡಿ ಬಿಸಾಕಲಿ : ಕಾಳಿ ಶ್ರೀರಿಷಿ ಕುಮಾರ ಸ್ವಾಮೀಜಿ

ರಾಜ್ಯ ಬಂದ್ ಗೆ ಕರೆನೀಡಿದ ಕನ್ನಡ ಸಂಘಟನೆಗಳನ್ನು ಶೂಟ್ ಮಾಡಿ ಬಿಸಾಕಲಿ : ಕಾಳಿ ಶ್ರೀರಿಷಿ ಕುಮಾರ ಸ್ವಾಮೀಜಿ ಮಂಗಳೂರು :  ಡಿಸೆಂಬರ್ 5ರ ಕನ್ನಡ ಸಂಘಟನೆಗಳ ಬಂದ್ ವಿಚಾರವಾಗಿ ಕನ್ನಡ ಸಂಘಟನೆ ವಿರುದ್ಧ...

ಮಹಾರಾಷ್ಟ್ರದ ಥಾಣೆಯಲ್ಲಿ ಪತ್ತೆಯಾಯಿತು ಬೃಹತ್ ನಕಲಿ ನೋಟು ಜಾಲ..!      

ಮುಂಬೈ:ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ನಕಲಿ ನೋಟು ಜಾಲ ಪತ್ತೆಯಾಗಿದೆ. ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಮುಂಬ್ರಾದಲ್ಲಿ ನಕಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ ಎಂಬ ವಿಚಾರ ಮತ್ತು ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಥಾಣೆ ಪೊಲೀಸರು ಮಂಗಳವಾರ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮುಝಾಮಿಲ್ ಮೊಹಮ್ಮದ್ ಸಾಲ್ಹೇ ಸುರ್ವೇ , ಮುಜಾಫರ್​ ಶೌಕತ್​ ಪಾವಸ್ಕರ್​ , ಪ್ರವೀಣ್ ಪಾರ್ಮರ್ , ನಸ್ರೀನ್ ಇಮ್ತಿಯಾಜ್​ ಕಾಝಿ ಎಂದು ಗುರುತಿಸಲಾಗಿದೆ.

ಅವರಿಂದ 11.49 ಲಕ್ಷ ರೂಪಾಯಿ ಮುಖ ಬೆಲೆಯ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರ ಪೈಕಿ ಸುರ್ವೇ ಮತ್ತು ಕಾಝಿ ಮುಂಬ್ರಾದವರಾಗಿದ್ದರೆ ಉಳಿದಿಬ್ಬರು ಮುಂಬೈನವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾರ್ಮರ್​ ಬಳಿ ಸ್ಕ್ಯಾನರ್ ಪ್ರಿಂಟರ್ ಇದ್ದು, ಅದರ ಮೂಲಕವೇ ಪಾಸ್ಕರ್ ನೆರವಿನೊಂದಿಗೆ ನೋಟು ಮುದ್ರಿಸಿದ್ದಾಗಿ ತಪ್ಪೊಪ್ಪಿಗೆ ನೀಡಿದ್ದಾರೆ.

ಬಂಧಿತರ ಬಳಿ ಏಳು ಮೊಬೈಲ್ ಫೋನ್​ಗಳಿದ್ದವು. ಅವುಗಳನ್ನು ಕೂಡ ವಶಪಡಿಸಿಕೊಂಡಿರುವ ಪೊಲೀಸರು, ನಕಲಿ ನೋಟು ಜಾಲಕ್ಕೆ ಸಂಬಂಧಿಸಿದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.