ಮಧ್ಯಪ್ರದೇಶ: 3,419 ಕೋಟಿ ರೂಪಾಯಿ ವಿದ್ಯುತ್ ಬಿಲ್ ನೋಡಿದ ಮನೆ ಮಾಲೀಕ ಪ್ರಜ್ಞೆ ತಪ್ಪಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನ ಶಿವ ವಿಹಾರ್ ಕಾಲೋನಿಯಲ್ಲಿ ನಡೆದಿದೆ.
ಮಧ್ಯಪ್ರದೇಶ ಸರ್ಕಾರದ ಇಂಧನ ಕಂಪನಿ ಈ ರೀತಿಯ ತಪ್ಪು ಬಿಲ್ ಪಾವತಿಸುವ ಮೂಲಕ ಕುಟುಂಬಕ್ಕೆ ಆಘಾತ ನೀಡಿದೆ.
ಜುಲೈ ತಿಂಗಳ ಗೃಹಬಳಕೆಯ ವಿದ್ಯುತ್ ಬಳಕೆಗೆ 3,419 ಕೋಟಿ ರೂಪಾಯಿ ಬಂದಿತ್ತು. ಕಂಪೆನಿಯು ಜುಲೈ 20 ರಂದು ಬಿಲ್ ನೀಡಿತ್ತು.
ಆದರೆ ನಂತರ ಕಂಪನಿ ಇದನ್ನು ಸರಿಪಡಿಸಿ ಕುಟುಂಬಕ್ಕೆ 1300 ರೂ.ಗಳ ಹೊಸ ಬಿಲ್ ನೀಡಿದೆ. ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ಬಿಲ್‌ನಲ್ಲಿನ ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.