ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟು, 27 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಲಾನಾ ಜಿಲ್ಲೆಯ ಪುಣೆ-ನಾಗುರ ಹೆದ್ದಾರಿಯಲ್ಲಿ ನಡೆದಿದೆ.
ಮುಂಬಯಿ: ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ 11 ಜನ ಮೃತಪಟ್ಟು, 27 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಲಾನಾ ಜಿಲ್ಲೆಯ ಪುಣೆ-ನಾಗ್ಪುರ ಹೆದ್ದಾರಿಯಲ್ಲಿ ನಡೆದಿದೆ.
ಮೃತರಲ್ಲಿ ಬಸ್ ಪ್ರಯಾಣಿಕರು ಮತ್ತು ಎರಡೂ ವಾಹನಗಳ ಚಾಲಕರು ಸೇರಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಬಸ್ ಹಾಗೂ ಟ್ರಕ್ ಡಿಕ್ಕಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ.
ಪುಣೆಯ ಮೆಹೆಕರ್‌ನಿಂದ ಬರುತ್ತಿದ್ದ ಬಸ್ ಎದುರಿನಿಂದ ಬಂದ ಟ್ರಕ್‌ಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ತೀವ್ರ ಹಾನಿಯಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ವಾಹನಗಳ ಜಖಂಗೊಂಡ ಅವಶೇಷಗಳ ಮೂಲಕ ಬದುಕುಳಿದವರನ್ನು ಹೊರತೆಗೆಯಲಾಗುತ್ತಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಸಿಂಧ ಖೇಡರಾಜ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.