Connect with us

STATE

ಹೊನ್ನಾವರ ಮೀನುಗಾರಿಕಾ ಬೋಟು ಅಪಘಾತ :25 ಮೀನುಗಾರರ ರಕ್ಷಣೆ.!

Published

on

ಹೊನ್ನಾವರ ಮೀನುಗಾರಿಕಾ ಬೋಟು ಅಪಘಾತ :25 ಮೀನುಗಾರರ ರಕ್ಷಣೆ.!

ಕಾರವಾರ : ಉತ್ತರ ಕನ್ನಡ ಜಿಲ್ಲೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಅಪಘಾತಕ್ಕೀಡಾಗಿ ಮುಳುಗಡೆಯಾಗಿದೆ.

ಹೊನ್ನಾವರ ಬಂದರಿನಿಂದ ಸೈಂಟ್ ಅಂತೋನಿ ಎಂಬ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿದ್ದು ಈ ಸಂದರ್ಭ ಬೋಟ್ ಇಲ್ಲಿನ ಅಳಿವೆಯಲ್ಲಿ ಸಮುದ್ರದ ಅಲೆಗಳ  ಹೊಡೆತಕ್ಕೆ ಸಿಲುಕಿ ಮುಳುಗಡೆಯಾಗಿದೆ.

ಬೋಟ್ ನಲ್ಲಿ 25 ಮೀನುಗಾರರಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳುವ ವೇಳೆ ಈ ದುರಂತ ಸಂಭವಿಸಿದೆ. ಘಟನೆ ನಡೆಯತ್ತಿದ್ದಂತೆ ಸನಿಹದಲ್ಲಿದ್ದ ಇತರ  ದೊಣಿಗಾರರಿದ್ದ ಮೀನುಗಾರರು 25 ಮಂದಿಯನ್ನು ರಕ್ಷಣೆ ಮಾಡಿದ್ದಾರೆ.

ಸದ್ಯ ಮುಳುಗಡೆಯಾಗಿರುವ ಬೋಟ್ ಅನ್ನು ಮೇಲಕ್ಕೆತ್ತಲು ಪ್ರಯತ್ನ ನಡೆಸಲಾಗುತ್ತಿದೆಯಾದರೂ ಸಾಧ್ಯವಾಗುತ್ತಿಲ್ಲ ಎನ್ನಲಾಗಿದ್ದು ಲಕ್ಷಾಂತರ ಮೌಲ್ಯದ ಸೊತ್ತುಗಳು ಸಮುದ್ರ ಪಾಲಾಗಿದೆ ಎನ್ನಲಾಗಿದೆ.

DAKSHINA KANNADA

ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

Published

on

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೀಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ರಾತ್ರಿಯ ಹೊತ್ತು ಚಿಕ್ಕ ಮಕ್ಕಳು ಅಪ್ಪ ಅಮ್ಮನ ಒಟ್ಟಿಗೆ ಮಲಗುತ್ತಾರೆ. ಅದೇ ರೀತಿ ಗಂಡ ಹೆಂಡತಿಯರು ಒಟ್ಟಿಗೆ ಮಲಗುವುದು ಸರ್ವೇ ಸಾಮಾನ್ಯ.

ಮದುವೆಯ ನಂತರ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಇದು ಸಮಾಜದ ಸಾಮಾನ್ಯ ನಿಯಮ ಸಹ ಹೌದು ಎನ್ನಬಹುದು. ಮದುವೆಯ ನಂತರ ಪತಿ-ಪತ್ನಿಯರ ನಡುವಿನ ಚರ್ಚೆಗಳು, ಮಾತುಗಳು ಸಾಮಾನ್ಯವಾಗಿ ಮಲಗುವ ಸಮಯದಲ್ಲೇ ಆಗುತ್ತದೆ. ಇನ್ನು ಪತಿ-ಪತ್ನಿಯರು ಪ್ರತ್ಯೇಕವಾಗಿ ಮಲಗುವುದರಿಂದಲೂ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

ಮೊದಲಿಗೆ, ಈ ವಿಷಯದ ಬಗ್ಗೆ ಮಾಡಿದ ಎಲ್ಲಾ ಸಂಶೋಧನೆಗಳು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತೋರಿಸುತ್ತದೆ ಮತ್ತು ಪ್ರತಿ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಆದರೆ ಅನೇಕ ಬಾರಿ ಜನರು ಇಂತಹ ಮಾತುಗಳನ್ನು ಕೇಳಲು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಈ ದಂಪತಿಗಳ ಜೀವನದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ.

ಆದರೆ ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆ ಬೇರೆ ಕೋಣೆಗಳಲ್ಲಿ ದಂಪತಿಗಳಿಗೆ ಮಲಗುವುದರಿಂದ ದಂಪತಿಗಳಿಗೆನೇ ಹೆಚ್ಚು ಅನುಕೂಲಕರವಾಗಿರುತ್ತದೆ. ಸಂಶೋಧನೆಯ ಪ್ರಕಾರ ನೀವು ಪ್ರತ್ಯೇಕವಾಗಿ ಏಕೆ ಮಲಗುವುದರಿಂದ ಯಾವುದೇ ನಿದ್ರಾ ಭಂಗವನ್ನು ಉಂಟುಮಾಡುವುದಿಲ್ಲ. ಇದರಿಂದ ಸುಖಕರವಾಗಿ ನಿದ್ರೆ ಮಾಡಬಹುದು.

ರಾತ್ರಿಯಲ್ಲಿ ಗೊರಕೆ ಹೊಡೆಯುವುದು, ಒದೆಯುವುದು, ದೇಹದ ಉಷ್ಣತೆಯ ಬದಲಾವಣೆ ವಿಭಿನ್ನವಾಗಿರುತ್ತದೆ. ನೀವು ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿದರೆ ನಿಮ್ಮ ದೇಹವು ಅರಾಮವಾಗಲು ಸಹಾಯಕವಾಗುತ್ತದೆ. ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ.


ಜೊತೆಗೆ ಕೆಲವೊಮ್ಮೆ ದಂಪತಿಗಳ ನಡುವೆ ಮನಸ್ಥಾಪವಾದಾಗ ಈ ರೀತಿ ಕೆಲ ದಿನ ದೂರ ಮಲಗಿದರೆ ಆ ವಿರಹ ವೇದನೆಯಿಂದ ಕೋಪವೂ ತಣ್ಣಗಾಗುತ್ತದೆ. ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಪ್ರೀತಿಯ ಅವಶ್ಯಕತೆ ಯಾವಾಗಲೂ ಇರುತ್ತದೆ ಮತ್ತು ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದು ಉತ್ತಮ. ಜೊತೆಗೆ ಕೆಲವೊಮ್ಮೆ ಜ್ವರ ರೀತಿಯ ಅನಾರೋಗ್ಯವಿದ್ದಾಗ ದೂರ ಮಲಗಿದರೆ ಒಬ್ಬರಿಂದ ಒಬ್ಬರಿಗೆ ಅದು ಹರಡುವುದಿಲ್ಲ.

ಇದನ್ನೂ ಓದಿ ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ಕೆಲವೊಮ್ಮೆ ದಂಪತಿಗಳಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೆ ಒಳ್ಳೆಯದು ಎಂದು ಸಂಶೋಧನೆ ಸೂಚಿಸುತ್ತದೆ. ಇದರಿಂದ ದಣಿವು ಆಗುವುದು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಲೈಂಗಿಕ ಜೀವನವನ್ನು ಸುಧಾರಿಸಬಹುದು.

Continue Reading

LATEST NEWS

ರಜೆಯಿದೆ ಎಂದು ಪ್ರವಾಸಕ್ಕೆ ಹೊರಟಿದ್ದೀರಾ? ಗಮನಿಸಿ, ಈ ಪ್ರವಾಸಿ ತಾಣಗಳಿಗಿದೆ ನಿರ್ಬಂಧ

Published

on

ಮೈಸೂರು : ಶುಕ್ರವಾರ ಮತದಾನ ನಡೆಯಲಿದೆ. ಶನಿವಾರ ಹಾಗೂ ಭಾನುವಾರ ರಜೆ ಇರುತ್ತೆ. ಹಾಗಾಗಿ ಮೈಸೂರಿಗೆ ಪ್ರವಾಸ ಬೆಳೆಸೋಣ ಅಂತ ನೀವಂದುಕೊಂಡಿದ್ರೆ ಅದು ಸಾಧ್ಯವಿಲ್ಲ. ಯಾಕೆಂದ್ರೆ, ಮೈಸೂರಿನ ಪ್ರವಾಸಿ ತಾಣಗಳು ಏಪ್ರಿಲ್ 26 ರಂದು ಬಂದ್ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಹೀಗಾಗಿ ಈ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಏಪ್ರಿಲ್ 26 ರಂದು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರು ರೆಸಾರ್ಟ್ ಬುಕ್ಕಿಂಗ್ ನಿರ್ಬಂಧ

ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಹಾಗಾಗಿ ಏಪ್ರಿಲ್ 25 ಹಾಗೂ 26 ರಂದು ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರ ಬುಕ್ಕಿಂಗ್ ಸ್ವೀಕರಿಸಬಾರದು ಎಂದು ಡಿಸಿ ಮೀನಾ ನಾಗರಾಜ್ ರೆಸಾರ್ಟ್ ಮಾಲಕರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

ನಂದಿ ಗಿರಿಧಾಮಕ್ಕೂ ನಿರ್ಬಂಧ :

ನಂದಿ ಗಿರಿಧಾಮಕ್ಕೂ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇತ್ತೀಚೆಗೆ ಆದೇಶ ಹೊರಡಿಸಿದೆ. ಏಪ್ರಿಲ್ 25 ಹಾಗೂ 26 ರಂದು ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Continue Reading

bangalore

ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!

Published

on

ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿ ಬಿಜೆಪಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.

ishwarappaishwarappa

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆಎಸ್‌ ಈಶ್ವರಪ್ಪ, ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿನ್ನೆ(ಎ.22) ಕೊನೆಯ ದಿನವಾಗಿತ್ತು. ಆದರೆ, ಈಶ್ವರಪ್ಪ ನಾಮಪತ್ರವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರು ವರ್ಷಗಳ ಕಾಲ ಅವರು ಬಿಜೆಪಿ ಪಕ್ಷದಡಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಮುಂದೆ ಓದಿ..; ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ

ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡ ಕೆ ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ಕೆ ಎಸ್ ಈಶ್ವರಪ್ಪ ತೀವ್ರವಾಗಿ ಟೀಕಿಸುತ್ತಿದ್ದರು. ತನ್ನ ಬೆಂಬಲ ಮೋದಿ ಪ್ರಧಾನಿಗೆ ಇದೆ ಎಂದು ಹೇಳಿಕೊಂಡಿದ್ದ ಈಶ್ವರಪ್ಪ ತಾನು ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಪಕ್ಷದಿಂದಲೇ ಇವರನ್ನು ಉಚ್ಛಾಟಿಸಲಾಗಿದೆ.

Continue Reading

LATEST NEWS

Trending