hong kong ಖ್ಯಾತ ರೂಪದರ್ಶಿ ಹತ್ಯೆಗೀಡಾಗಿದ್ದಾಳೆ. 28 ವರ್ಷದ ಅಬ್ಬಿ ಚೋಯ್ ಬರ್ಬರವಾಗಿ ಹತ್ಯೆಯಾಗಿದ್ದು ಆಕೆಯ ಕಾಲು ಮನೆಯ ಒಳಭಾಗದ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ.
ಹಾಂಗ್ ಕಾಂಗ್ : ಹಾಂಗ್ ಕಾಂಗ್ ನಲ್ಲಿ ಖ್ಯಾತ ರೂಪದರ್ಶಿ ಹತ್ಯೆಗೀಡಾಗಿದ್ದಾಳೆ. 28 ವರ್ಷದ ಅಬ್ಬಿ ಚೋಯ್ ಬರ್ಬರವಾಗಿ ಹತ್ಯೆಯಾಗಿದ್ದು ಆಕೆಯ ಕಾಲು ಮನೆಯ ಒಳಭಾಗದ ಫ್ರಿಡ್ಜ್ ನಲ್ಲಿ ಪತ್ತೆಯಾಗಿದೆ.
ಅವರ ತಲೆ, ದೇಹ ಮತ್ತು ಕೈಗಳು ಇನ್ನೂ ಪತ್ತೆಯಾಗಿಲ್ಲ.
ಹಾಂಕಾಂಗ್ ಪೊಲೀಸರು ಮೂವರ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಚೋಯ್ ಅವರ ಮಾಜಿ ಪತಿ ಅಲೆಕ್ಸ್ ಕ್ವಾಂಗ್ ಅವರನ್ನೂ ಬಂಧಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.