Wednesday, October 20, 2021

ಬ್ಯಾಂಕ್‌ ಮ್ಯಾನೇಜರ್‌ಗೆ ಹನಿಟ್ರ್ಯಾಪ್‌ ನಡೆಸಿ ಪೊಲೀಸರ ಅತಿಥಿಯಾದ ಆಂಟಿ

ಜೈಪುರ: ಖಾಸಗಿ ರಂಗದ ಪ್ರಖ್ಯಾತ ಬ್ಯಾಂಕ್‌ನ ಮ್ಯಾನೇಜರ್ ಒಬ್ಬನನ್ನು ಹೋಟೆಲಿಗೆ ಕರೆಸಿಕೊಂಡ ಖತರ್ನಾಕ್ ಆಂಟಿಯೊಬ್ಬಳು ಹನಿಟ್ರ್ಯಾಪ್‌ ನಡೆಸಿ ಪೊಲೀಸರ ಖೆಡ್ಡಾಕ್ಕೆ ಬಿದ್ದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಸದ್ಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಜೈಪುರದ ಭರತಪುರದ 44 ವರ್ಷದ ಸೀಮಾ ಶರ್ಮಾ ಮೂಲತಃ ದೆಹಲಿಯ ಉತ್ತಮನಗರದ ನಿವಾಸಿ. ಈಕೆ ಖಾಸಗಿ ರಂಗದ ಬ್ಯಾಂಕ್‌ನ ಮ್ಯಾನೇಜರ್ ಅನ್ನು ಆತನ ಗೆಳೆಯನ ಮೂಲಕವೇ ಪರಿಚಯ ಮಾಡಿಕೊಂಡು ಪ್ರೊಜೆಕ್ಟ್ ಗಾಗಿ ಸಾಲ ಪಡೆದುಕೊಳ್ಳುವ ಕುರಿತಾಗಿ ಮಾತನಾಡಲು ಹೋಟೇಲ್‌ಗೆ ಮ್ಯಾನೇಜರ್ ನನ್ನು ಕರೆಸಿಕೊಂಡಿದ್ದಾಳೆ.
ಹೊಟೇಲ್‌ನ ಕೋಣೆಗೆ ಬ್ಯಾಂಕ್ ಮ್ಯಾನೇಜರ್ ಬರುವ ಮೊದಲೇ ಕ್ಯಾಮೆರಾ ಅಳವಡಿಸಿ, ಮ್ಯಾನೇಜರ್ ಒಳಗೆ ಬರುತ್ತಿದ್ದಂತೆ ಆತನೊಂದಿಗೆ ಅಶ್ಲೀಲವಾಗಿ ನಡೆದುಕೊಂಡು ಎರಡು ವಿಡಿಯೋ ಮಾಡಿದ್ದಾಳೆ.

ನಂತರ ಮ್ಯಾನೇಜರ್ ಹೋಟೆಲ್ ನಿಂದ ಹೊರ ಹೋಗುತ್ತಿದ್ದಂತೆ ಕರೆ ಮಾಡಿದ ಆಕೆ, ಇಬ್ಬರ ಅಶ್ಲೀಲ ವಿಡಿಯೋ ಸೆರೆ ಹಿಡಿದಿದ್ದೇನೆ. 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದಳು.ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾಳೆ.

ಇದರಿಂದ ಗಾಬರಿಗೊಂಡ ಬ್ಯಾಂಕ್‌ ಮ್ಯಾನೇಜರ್‌ ವಿಧಾಯಕಪುರಿಗೆ ಠಾಣೆಗೆ ತೆರಳಿ ಹನಿಟ್ರ್ಯಾಪ್ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿನಿಮೀಯ ರೀತಿಯಲ್ಲಿ ಆಂಟಿಯನ್ನು ಬಂಧಿಸಿದ್ದಾರೆ.

ಪೊಲೀಸರ ಸೂಚನೆಯಂತೆ ಸೀಮಾಗೆ ಕರೆ ಮಾಡಿದ ಬ್ಯಾಂಕ್ ಮ್ಯಾನೇಜರ್ ಹಣ ಅರೇಂಜ್ ಮಾಡಿಕೊಂಡಿದ್ದು ಎಲ್ಲಿ ತಲುಪಿಸಬೇಕು ಎಂದು ಕೇಳಿದಾಗ ಭರತಪುರಕ್ಕೆ ಬರುವಂತೆ ಹೇಳಿದ್ದಾಳೆ. ಬ್ಯಾಂಕ್ ಮ್ಯಾನೇಜರ್ ಜೊತೆ ಪೊಲೀಸರು ಸಹ ಮಾರುವೇಷದಲ್ಲಿ ಹೋಗಿದ್ದರು. ಆದರೆ ಭರತಪುರ ಹೋಗುತ್ತಿದ್ದಂತೆ ಪ್ಲಾನ್ ಬದಲಿಸಿದ ಸೀಮಾ ಅಲ್ವಾರಾಗೆ ಬರುವಂತೆ ಹೇಳಿದ್ದಾಳೆ. ಆದರೆ ಅಲ್ಲಿಯೂ ಆಕೆ ಬಂದಿರಲಿಲ್ಲ.

ಕೊನೆಗೆ ಕರೆ ಮಾಡಿದ ಸೀಮಾ, ತಾನೇ ಜೈಪುರಕ್ಕೆ ಬರುತ್ತಿರೋದಾಗಿ ತಿಳಿಸುತ್ತಾಳೆ. ಪೊಲೀಸರ ಹೆಣೆದ ಬಲೆಯಲ್ಲಿ ತಾನೇ ಬಂದು ಬೀಳುತ್ತಾಳೆ.
ಜೈಪುರಿಗೆ ಬಂದ ಸೀಮಾ ಬ್ಯಾಂಕ್ ಮ್ಯಾನೇಜರ್ ನನ್ನು ರಾಜಾಪಾರ್ಕ್​ಗೆ ಕರೆಸಿಕೊಂಡಿದ್ದಾಳೆ. ಭೇಟಿಯಾಗುತ್ತಿದ್ದಂತೆ ಸೀಮಾ ಹಣ ಕೇಳಿದ್ದಾಳೆ.

ಮ್ಯಾನೇಜರ್ ಒಂದು ಲಕ್ಷ ರೂ. ನೀಡಿದ್ದಕ್ಕೆ ಕೋಪಗೊಂಡು ಶೀಘ್ರದಲ್ಲಿಯೇ ಉಳಿದ ಹಣ ನೀಡುವಂತೆ ತಾಕೀತು ಮಾಡಿ ಹೋಗುತ್ತಿರುವಾಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆಯೂ ಮಹಿಳೆ ಇದೇ ರೀತಿ ಪುರುಷರನ್ನ ಕರೆಸಿಕೊಂಡು ಹನಿಟ್ರ್ಯಾಪ್ ವ್ಯೂಹದಲ್ಲಿ ಸಿಲುಕಿಸಿ ಹಣ ಕಿತ್ಕೊಂಡಿದ್ದಳು.

ನಂತರ ಜೈಲುವಾಸ ಅನುಭವಿಸಿ ದೆಹಲಿಯಿಂದ ಜೈಪುರಗೆ ಬಂದೂ ಅದೇ ರೀತಿ ಹಣ ದೋಚಲು ಮುಂದಾಗಿದ್ದಳು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...