Monday, August 15, 2022

ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ವಿವಿಧ ಯೋಜನೆಗಳಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ

ಮಂಗಳೂರು : ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯ ವಿವಿಧ ಯೋಜನೆಗಳಿಗೆ ಇಂದು ವೆರ್ಚುವಲ್ ಮೂಲಕ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಸಚಿವರಾದ ಧರ್ಮೇಂದ್ರ ಪ್ರಧಾನ್ ರವರು ಚಾಲನೆ ನೀಡಿದರು.

ಮಂಗಳೂರಿನ ಎರಡು ಯೋಜನೆಗಳು ಸೇರಿದಂತೆ ಒಟ್ಟು ನಾಲ್ಕು ವಿವಿಧ ಯೋಜನೆಗಳಿಗೆ ಇಂದು ಹಸಿರು ನಿಶಾನೆ ತೋರಿಸಿದರು.
ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಉಪಸ್ಥಿತರಿದ್ದರು.

ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಮೂಡಬಿದಿರೆಯ ಸರ್ಕಾರಿ ಆಸ್ಪತ್ರೆಗೆ 50 ಹಾಸಿಗೆಗಳನ್ನು ಒಟ್ಟು ರೂ. 18.00 ಲಕ್ಷ ವೆಚ್ಚದಲ್ಲಿ ನೀಡುವ ಕಾರ್ಯಕ್ರಮ ಹಾಗೂ ಮಂಗಳೂರಿನ ಕೆ.ಐ.ಒ.ಸಿ.ಎಲ್ ಪೆಲೆಟ್ ಪ್ಲಾಂಟ್ ನ ಆಧುನೀಕರಣದ ಅಂಗವಾಗಿ ಸುಮಾರು ರೂ. 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾರೆಲ್ ಟೈಪ್ ಬ್ಲೆಂಡರ್ ರೆಕ್ಲೈಮರ್ (Barrel Type Blender Reclaimer) ನ್ನು ಕೇಂದ್ರ ಸಚಿವರು ಉದ್ಘಾಟಿಸಿದರು.

ಕೋವಿಡ್ 19 ವೈರಾಣು ರೋಗದ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಮಾನ್ಯ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರ ಮನವಿಯ ಮೇರೆಗೆ ಕುದುರೆಮುಖ ಕಂಪೆನಿಯು ತನ್ನ ಸಿ.ಎಸ್.ಆರ್. ವತಿಯಿಂದ ಈಗಾಗಲೇ ಜಿಲ್ಲಾಡಳಿತಕ್ಕೆ ಅಂಬುಲೆನ್ಸ್, ವೆಂಟಿಲೇಟರ್ ಸೇರಿದಂತೆ ಉಪ್ಪಿನಂಗಡಿ ಹಾಗೂ ಮೂಡಬಿದಿರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 250LPM (ಲೀಟರ್ ಪರ್ ಮಿನಿಟ್) ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕವನ್ನು ನೀಡುತ್ತಿರುವುದಕ್ಕಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ಉಕ್ಕು ಖಾತೆಯ ಸಚಿವರಾದ  ಧರ್ಮೇಂದ್ರ ಪ್ರಧಾನ್ ರವನ್ನು ಅಭಿನಂದಿಸಿದರು.

ಸಭೆಯಲ್ಲಿ ಪೂಜ್ಯ ಶ್ರೀಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಠ, ರಾಜ್ಯದ ಉಪಮುಖ್ಯಮಂತ್ರಿಯವರಾದ ಡಾ. ಸಿ.ಎನ್. ಆಶ್ವಥ ನಾರಾಯಣ ಸೇರಿದಂತೆ ಇತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here

Hot Topics

ಅಬ್ಬಕ್ಕನ ನಾಡಿನಲ್ಲಿ ಅತೀ ಎತ್ತರದಲ್ಲಿ ಶಾಶ್ವತವಾಗಿ ಅರಳಿದ ತಿರಂಗಾ

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಂಗಳೂರು ಹೊರವಲಯದ ಅತ್ಯಂತ ಎತ್ತರ ಧ್ವಜಸ್ತಂಭದಲ್ಲಿ ಇಂದು ಬೃಹತ್ ರಾಷ್ಟ್ರ ಧ್ವಜಾರೋಹಣ ನೆರವೇರಿತು.ತೊಕ್ಕೊಟ್ಟುವಿನ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಂಡ 110 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿ ಧ್ವಜಾರೋಹಣ...

ಮಂಗಳೂರು: ಸ್ವಾತಂತ್ರ್ಯ ಅಮೃತೋತ್ಸವದಲ್ಲಿ ಮಿಂದೆದ್ದ ಕೆನರಾ ಹೈಸ್ಕೂಲ್

ಮಂಗಳೂರು: ದೇಶದ ಮಹನೀಯರ ತ್ಯಾಗ, ಬಲಿದಾನ, ನಿಸ್ವಾರ್ಥ ಬದುಕಿನ ದ್ಯೋತಕವಾದ ಸ್ವಾತಂತ್ರ್ಯವೆಂಬ ಹಕ್ಕಿ ರೆಕ್ಕೆ ಬಿಚ್ಚಿ ಹಾರಿ 75 ಸಂವತ್ಸರಗಳು ಕಳೆದು ರಾಷ್ಟ್ರ ಹೊಸ ಭರವಸೆಗಳ ಕಡೆ ಮುನ್ನಡೆಯುತ್ತಿದೆ.ದೇಶವಾಸಿಯ ಕಣಕಣದಲ್ಲೂ ರಾಷ್ಟ್ರಪ್ರೇಮದ ಸೌಗಂಧ...

“ಇಂದು ಸೂರ್ಯಾಸ್ತದೊಳಗೆ ನಿಯಮಬದ್ಧವಾಗಿ ಧ್ವಜವನ್ನು ಸುರಕ್ಷಿತವಾಗಿ ಮಡಚಿಡಿ”

ಮಂಗಳೂರು: ಸ್ವಾತಂತ್ರ್ಯದ ಆಚರಣೆಯು ಈಗಾಗಲೇ ಮುಗಿದಿದ್ದು, ಇಂದು ಸಂಜೆ ಸೂರ್ಯಾಸ್ತಮಾನದೊಳಗೆ ನಿಯಮಬದ್ಧವಾಗಿ ತ್ರಿವರ್ಣ ಧ್ವಜವನ್ನು ಸುರಕ್ಷಿತವಾಗಿ ಮಡಚಿಡುವಂತೆ ಎಲ್ಲಾ ಸಾರ್ವಜನಿಕರಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದಾರೆ.ಈ ಬಗ್ಗೆ...