Monday, July 4, 2022

ಗಂಭೀರ ಗಾಯಗೊಂಡಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಸಾವು

ಉಡುಪಿ:  ಟ್ಯಾಂಕರ್ ನ‌ ಹಿಂಬದಿಗೆ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂಲ್ಕಿ ಗೃಹರಕ್ಷಕ ದಳದ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಉಡುಪಿಯ ಮೂಲ್ಕಿಯಲ್ಲಿ ನಡೆದಿದೆ.

ರಾಕೇಶ್ ಕುಬೆವೂರು (27) ಮೃತ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಬಲಾಯಿಪಾದೆ ಜಂಕ್ಷನ್ ಬಳಿ ಬುಧವಾರ ಮುಂಜಾನೆ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸಿ, ಉಡುಪಿಯಲ್ಲಿರುವ ತಂಗಿಯ ಮನೆಗೆ ತೆರಳುತ್ತಿದ್ದಾಗ ಕಾರು ಟ್ಯಾಂಕರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡಿದ್ದ ಗಾಯಾಳು ರಾಕೇಶ್ ಅವರನ್ನು ಸ್ಥಳೀಯರು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೂಲ್ಕಿ ತಾಲೂಕಿನ‌ ಕಿಲ್ಪಾಡಿ ಕುಬೆವೂರು ನಿವಾಸಿಯಾಗಿದ್ದ ರಾಕೇಶ್ ಅವರು ಅವಿವಾಹಿತರಾಗಿದ್ದು, ತಾಯಿಯ ಜೊತೆಗೆ ವಾಸವಿದ್ರು.‌ಮೂಲ್ಕಿ ಗೃಹ ರಕ್ಷಕದಳದ ಸಕ್ರಿಯ ಮತ್ತು ನಿಷ್ಟಾವಂತ ಸಿಬಂದಿಯಾಗಿದ್ದ ಅವರು ಮೂಲ್ಕಿ ಪೊಲೀಸ್ ಠಾಣೆಯ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಗೃಹರಕ್ಷಕ ದಳದ ಸೇವೆಯ ಜೊತೆಗೆ, ಬಿಡುವಿನ ವೇಳೆಯಲ್ಲಿ ವಾಹನದಲ್ಲಿ ಬಾಡಿಗೆ ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here

Hot Topics

ಪೌರಕಾರ್ಮಿಕರ ಬೆಂಬಲಕ್ಕೆ ನಿಂತ ವಿರೋಧ ಪಕ್ಷದ ಉಪನಾಯಕ ಖಾದರ್

ಮಂಗಳೂರು: ರಾಜ್ಯದಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಮುಷ್ಕರ ನಾಳೆ ಐದನೇ ದಿನಕ್ಕೆ ಕಾಲಿರಿಸಲಿದೆ. ರಾಜ್ಯ ಘಟಕದ ಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರತಿಭಟನೆ ಮುಂದುವರಿದಿದೆ.ಸ್ವಚ್ಛತಾ ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿ ಪೌರ ಕಾರ್ಮಿಕರು ಮಂಗಳೂರಿನಲ್ಲಿ...

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲು-ಓರ್ವನ ರಕ್ಷಣೆ

ಬಂಟ್ವಾಳ: ನದಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿದ್ದು, ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದರೆ, ಮತ್ತೋರ್ವ ಬಾಲಕ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಳ್ಳಾಲ ತಾಲೂಕಿನ ಸಜಿಪಪಡು...

ಬಂಟ್ವಾಳದ ವಿಶ್ವ ಹಿಂದು ಪರಿಷತ್ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ: ವಿಶ್ವಹಿಂದುಪರಿಷತ್ ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ಪ್ರಖಂಡದ ವತಿಯಿಂದ ಕೆಎಮ್‌ಸಿ ಮಂಗಳೂರು ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ರಕ್ತದಾನ ಶಿಬಿರದಲ್ಲಿ 180 ಯೂನಿಟ್ ರಕ್ತ ಸಂಗ್ರಹ...