Friday, July 1, 2022

ಉಳ್ಳಾಲ ಕ್ಷೇತ್ರದಲ್ಲಿ ‘ಹಿಂದೂ ಶಾಸಕ’ ಅಭಿಯಾನ: ಫೀಲ್ಡಿಗಿಳಿದ VHPಗೆ ಖಾದರ್ ತಿರುಗೇಟು!

ಮಂಗಳೂರು: ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ. ಉಳ್ಳಾಲದ ಶಾಸಕ ಯಾರಾಗಬೇಕು ಅಂತ ಸರ್ವ ಧರ್ಮದ ಮತದಾರರು ತೀರ್ಮಾನಿಸ್ತಾರೆ. ಹೊರಗಿನವರು ಬಂದು ಮಾತನಾಡಿದ್ರೆ ಏನೂ ಪ್ರಯೋಜನ ಇಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.


ಚುನಾವಣೆ ಸಮೀಪಿಸುತ್ತಿರೋ ಹೊತ್ತಲ್ಲೇ ಕರಾವಳಿಯಲ್ಲಿ ಈ ಬಾರಿ ಹಿಂದೂ ಶಾಸಕನ ಆಯ್ಕೆಗಾಗಿ ಹಿಂದೂ ಸಂಘಟನೆಗಳು ಅಭಿಯಾನ ಆರಂಭಿಸಿದ್ದು ಈ ಹಿನ್ನೆಲೆ ಯು.ಟಿ ಖಾದರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

‘ಹಿಂದೂ ಶಾಸಕ’ ಅಭಿಯಾನಕ್ಕೆ ವಿಎಚ್ ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಕರೆ ನೀಡಿ ಮಾತನಾಡಿ ‘ಬದಲಾವಣೆಗೆ ವಿಎಚ್ ಪಿ ಅಭಿಯಾನ ನಡೆಸ್ತಿದೆ. ‘ಉಳ್ಳಾಲದಲ್ಲಿ ಹಿಂದೂಗಳ ಪರ ಧ್ವನಿ ಎತ್ತಲು ಹಿಂದೂ ಶಾಸಕ ಇರಲಿ, ಮುಂದಿನ ಚುನಾವಣೆಯಲ್ಲಿ ಉಳ್ಳಾಲದಲ್ಲಿ ಹಿಂದೂ ಶಾಸಕನ ಗೆಲ್ಲಿಸಲು ವಿಎಚ್ ಪಿ ಈ ಅಭಿಯಾನ ನಡೆಸ್ತಿದೆ ಅಂತ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದಲ್ಲಿ ಹಿಂದೂ ಶಾಸಕ ಬರಲಿ. ಉಳ್ಳಾಲದಲ್ಲಿ ರಾಹುಲ್ ಗಾಂಧಿಯೇ ನಿಲ್ಲಲಿ, ಕಾಂಗ್ರೆಸ್ ಹಿಂದೂವನ್ನ ನಿಲ್ಲಿಸಿ ಗೆಲ್ಲಿಸಲಿ. ಉಳ್ಳಾಲದಲ್ಲಿ ಹಲವು ವರ್ಷಗಳಿಂದ ಒಂದೇ ಕುಟುಂಬದ ಮುಸ್ಲಿಂ ಶಾಸಕರಿದ್ದಾರೆ. ಉಳ್ಳಾಲ ಕಾಂಗ್ರೆಸ್ ನಲ್ಲಿ ಸಾಕಷ್ಟು ಹಿಂದೂಗಳಿದ್ದು, ಅವರಿಗೆ ಅವಕಾಶ ಕೊಡಿ. ಉಳ್ಳಾಲದಲ್ಲಿ 50% ಮುಸಲ್ಮಾನರಿದ್ದು, ಹಿಂದೂಗಳಿಗೆ ಬದುಕಲು ಕಷ್ಟ ಇದೆ ಅನ್ನೋ ಭಯ ಇದೆ’ ಎಂದು ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಯು.ಟಿ ಖಾದರ್ “ಎಲ್ಲಾ ಜಾತಿ-ಧರ್ಮದ ಜೊತೆ ಇದ್ದುಕೊಂಡೇ ನಾನು ರಾಜಕೀಯ ಮಾಡಿದ್ದೇನೆ. ತಂದೆ ಶಾಸಕರಾಗಿದ್ದರೂ ನಾನು ಜನಾರ್ದನ ಪೂಜಾರಿ ತತ್ವ ಆದರ್ಶದಿಂದ ಬೆಳೆದವನು.

ನನ್ನ ಮನೆ, ಕಚೇರಿಗೆ ಬಂದವರಿಗೆ ಯಾವ ಜಾತಿ-ಧರ್ಮ ಅಂತ ಕೇಳಿದವನಲ್ಲ. ಕ್ಷೇತ್ರವ್ಯಾಪ್ತಿಯ ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ರಸ್ತೆ ಮತ್ತು ಮೂಲಭೂತ ಸೌಕರ್ಯ ಮಾಡಿದ್ದೇನೆ. ಪಕ್ಷದ ಎಲ್ಲಾ ಧರ್ಮದ ಕಾರ್ಯಕರ್ತರು, ಮುಖಂಡರು, ಮತದಾರರು ಸೌಹಾರ್ದತೆಯಿಂದ ಇದ್ದಾರೆ. ಕೋಮುವಾದಿಗಳಿಗೆ ಉಳ್ಳಾಲದ ಮಣ್ಣಿನಲ್ಲಿ ಅವಕಾಶ ಕೊಡಲ್ಲ ಎಂದರು.

ಚುನಾವಣೆ ಬಂದಾಗ ಒಂದೊಂದು ಅಭಿಯಾನ, ವಿಚಾರ ತರ್ತಾರೆ. ಹಿಂದೆಯೂ ಆಂತರಿಕವಾಗಿ ಮಾಡಿದ್ದರು, ಈ ಬಾರಿ ಬಹಿರಂಗವಾಗಿ ಮಾಡಿದ್ದಾರೆ. ನನ್ನ ಕ್ಷೇತ್ರ ಸೌಹಾರ್ದತೆಯ ಸರ್ವಧರ್ಮೀಯರು ಪ್ರೀತಿಸೋ ಕ್ಷೇತ್ರ. ಅಲ್ಲಿ ಎಲ್ಲ ಜಾತಿ-ಧರ್ಮವನ್ನ ಪ್ರೀತಿಸೋರನ್ನ ಶಾಸಕರನ್ನಾಗಿ ಜನ ಗೆಲ್ಲಿಸ್ತಾರೆ.

ರಾಜಕೀಯಕ್ಕೋಸ್ಕರ ಜನರನ್ನು ವಿಭಾಗ ಮಾಡಲು ಹೋಗಬೇಡಿ. ಜನರ ಸೌಹಾರ್ದತೆ ಹಾಳು ಮಾಡೋದು ದೇಶದ್ರೋಹಿಗಳ ಕೆಲಸ. ಕಾಂಗ್ರೆಸ್ ಮುಂದೆ ನನ್ನನ್ನೇ ನಿಲ್ಲಿಸುತ್ತದೆ ಅಂತ ಹೇಳಲು ಆಗಲ್ಲ‌. ಕಾಂಗ್ರೆಸ್ ಅಲ್ಲಿ ಯಾರಿಗೂ ಮುಂದೆ ಟಿಕೆಟ್ ಕೊಡಬಹುದು. ಮಹಿಳೆಯರು ಅಥವಾ ಯಾರಿಗೂ ಪಕ್ಷ ಮುಂದೆ ಟಿಕೆಟ್ ಕೊಡಬಹುದು. ಆದರೆ ಕಾಂಗ್ರೆಸ್ ಯಾರನ್ನ ನಿಲ್ಲಿಸಿದ್ರೂ ಆ ಕ್ಷೇತ್ರದ ಜನ ಗೆಲ್ಲಿಸ್ತಾರೆ‌ ಎಂದು ತಿರುಗೇಟು ನೀಡಿದರು.

ಪಕ್ಷ ಮುಂದೆ ಅಲ್ಲಿ ಬದಲಾಯಿಸಲೂ ಬಹುದು, ಏನೇ ಮಾಡಿದ್ರೂ ಸಂತೋಷ. ವಿಎಚ್ ಪಿ ಒಂದು ಬಿಜೆಪಿಯ ಅಂಗಸಂಸ್ಥೆ. ಅದರಲ್ಲಿ 80% ಹಿಂದೂ ಸಹೋದರರು ಇಲ್ಲ, ಕೇವಲ 20% ಇದಾರೆ. ಉಳಿದ ಎಲ್ಲರೂ ಪ್ರೀತಿ ವಿಶ್ವಾಸದಿಂದ ಜೊತೆ ಇದ್ದಾರೆ. ರಾಜಕೀಯಕ್ಕಾಗಿ ಇಬ್ಭಾಗ ಮಾಡಬೇಡಿ, ಅಲ್ಲಿ ರಕ್ತ ಚೆಲ್ಲಬೇಡಿ. ಜನರ ಶಾಂತಿ ನೆಮ್ಮದಿಗಾಗಿ ಬೇಕಾದ್ರೆ ನಾನು ದೂರ ನಿಲ್ಲಲು ಸಿದ್ದ ಎಂದು ಸ್ಪಷ್ಟ ಹೇಳಿಕೆ ನೀಡಿದರು.

LEAVE A REPLY

Please enter your comment!
Please enter your name here

Hot Topics

ಮಂಗಳೂರು: ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೊಗ್ಲಿಂಗ್ ಸ್ಮರಣೆ

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಸ್ಮರಣೆ ಕಾರ್ಯಕ್ರಮ ಇಂದು ಮಂಗಳೂರು ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆಯಿತು.ಕನ್ನಡದ ಪ್ರಥಮ ಪತ್ರಿಕೆ...

ಮಹಿಳೆಯರ ಸ್ವಾವಲಂಬಿ ಬದುಕಿಗೆ ಭಾಷ್ಯ ಬರೆದ ಉಡುಪಿಯ ಸವಿತಾ ಶೇಟ್

ಉಡುಪಿ: ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಉಡುಪಿಯ ಮಹಿಳೆಯೊಬ್ಬರು ಪ್ರೇರಣೆಯಾಗಿದ್ದಾರೆ. ಉಡುಪಿಯ ಒಳಕಾಡು ನಿವಾಸಿ ಸವಿತಾ ಶೇಟ್ ಎಂಬವರೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ಪೂರ್ತಿದಾಯಕರಾಗಿದ್ದಾರೆ.ಇವರ ಗಂಡ ಉದ್ಯಮಿಯಾಗಿದ್ದು ಹಾಗೂ ಮಗ ಶಿಕ್ಷಕರಾಗಿ ಕೆಲಸ...

ಬೆಳ್ತಂಗಡಿ: ಬೀದಿ ಬದಿ ಅಂಗಡಿ ತೆರವು ಪ್ರಕರಣದ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಿಂದ ಕೊಕ್ಕಡ ಸಂಪರ್ಕಿಸುವ ನಿಡ್ಲೆ ಪಂಚಾಯತ್‌ ವ್ಯಾಪ್ತಿಯ ಪಾರ್ಪಿಕಲ್‌ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು PWD ತೆರವುಗೊಳಿಸಿರುವ ವಿರುದ್ಧ ಬೃಹತ್ ಪ್ರತಿಭಟನೆ ಇಂದು ಬೆಳ್ತಂಗಡಿಯ ಪಿಡಬ್ಲ್ಯೂಡಿ...