Sunday, November 27, 2022

ಎಸ್‌ಡಿಪಿಐ, ಒವೈಸಿಯ ಪಕ್ಷಗಳೊಂದಿಗೆ ವಕ್ಫ್ ಬೋರ್ಡನ್ನೂ ನಿಷೇಧಿಸಿ : ಹಿಂದೂ ಮಹಾಸಭಾ

ಮಂಗಳೂರು : ಆಡಳಿತದಲ್ಲಿರುವ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಇದು ಹಿಂದುತ್ವಕ್ಕೆ ಸಿಕ್ಕ ಗೆಲುವು ಎಂದು ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹರ್ಷ ವ್ಯಕ್ತಪಡಿಸಿದ್ದಾರೆ.

ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಸರಕಾರ ಪಿಎಫ್ ಐ ಹಾಗೂ ಅದರ ಸಹವರ್ತಿ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿ , ಅದರ ರಾಜಕೀಯ ಮುಖವಾಣಿಯಾದ ಎಸ್ ಡಿಪಿಐಯನ್ನು, ಹಾಗೆ ಬಿಟ್ಟಿರುವುದು ಭಾರತೀಯ ಜನತಾ ಪಕ್ಷದ ಇಚ್ಚಾಶಕ್ತಿಯ ದೋಷ ಎಂದು ತಿಳಿಸಿದರು.

ಈ ಎಲ್ಲಾ ಬೆಳವಣಿಗೆಗಳಿಗೆ ಮದರಸಗಳಲ್ಲಿ ಕೊಡುವಂತಹ ರಾಷ್ಟ್ರ ವಿರೋಧ ಶಿಕ್ಷಣವೇ ಕಾರಣ. ಅದರಿಂದ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಸರಕಾರ ತಕ್ಷಣ ಮದರಾಸಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಮುಖಾಂತರ ತನಿಖೆಯನ್ನು ಮಾಡಬೇಕು.

ಈವರೆಗೆ ಮದರಾಸಗಳಲ್ಲಿ ನಡೆದಂತಹ ಹಣಕಾಸಿನ ವಹಿವಾಟುಗಳನ್ನು ಇಡಿ ಮುಖಾಂತರ ತನಿಖೆ ನಡೆಸಿ, ತಕ್ಷಣ ಮದರಾಸಗಳ ಮೇಲೆ ನಿರ್ಬಂಧ ಹೇರಬೇಕು ಎಂದರು.

ಇನ್ನು ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅವರು ಮಾತಾಡಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಆರೆಸ್ಸೆಸ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಎಲ್ಲಿದ್ದವರು, ಏನು ಅರ್ಹತೆಯಿದೆ ಇವರಿಗೆ. ಆರೆಸ್ಸೆಸ್ ಕಾರ್ಯಕರ್ತರ ಮೆಟ್ಟಲಿಗೆ ಸಮ ನೀವು.

ದೇಶಭಕ್ತ ಸಂಘಟನೆಯ ಮಾತನಾಡುವಾಗ ಎಚ್ಚರ ಇರಲಿ. ಆರೆಸ್ಸೆಸ್ ಬಗ್ಗೆ ಏನೇ ವ್ಯತಿರಿಕ್ತ ಹೇಳಿಕೆ ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು ಆರೆಸ್ಸೆಸ್ ಯಾವತ್ತೂ ದೇಶ ವಿರೋಧಿ ಕೃತ್ಯ ಮಾಡಿಲ್ಲ.

ಆದ್ರೆ ಎಸ್‌ಡಿಪಿಐ, ಒವೈಸಿಯ ಪಕ್ಷಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು ಅವುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಕ್ಫ್ ಬೋರ್ಡ್ ಯಾರ ಅಧೀನದಲ್ಲಿದೆ ಎಂದು ಪ್ರಶ್ನಿಸಿದ ಧರ್ಮೇಂದ್ರ ವಕ್ಫ್ ಬೋರ್ಡ್ ಮೂಲಕ ಉಗ್ರಗಾಮಿಗೆ ದೇಣಿಗೆ ಹೋಗುತ್ತದೆ ಎಂದರೇನು ? ತಾಕತ್ತಿದ್ದರೆ ವಕ್ಫ್ ಬೋರ್ಡನ್ನು ನಿಷೇಧಿಸಬೇಕು ಎಂದು ಸರ್ಕಾಕ್ಕೆ ಸವಾಲ್ ಹಾಕಿದರು.

 

 

LEAVE A REPLY

Please enter your comment!
Please enter your name here

Hot Topics

ನಂತೂರಿನಲ್ಲಿ ಜೋಡಿ ಮೇಲೆ ದಾಳಿ-ಮೂವರು ಹಿಂದೂ ಕಾರ್ಯಕರ್ತರು ಅರೆಸ್ಟ್

ಮಂಗಳೂರು:ಮಂಗಳೂರಿನ ನಂತೂರು ಸರ್ಕಲ್‌ ಬಳಿ ಗುರುವಾರ ಸಂಜೆ ಭಿನ್ನ ಕೋಮಿನ ಜೋಡಿ ಮೇಲೆ ದಾಳಿ ನಡೆಸಿದ್ದ ಘಟನೆಗೆ ಸಂಬಂಧಿಸಿದಂತೆ ಕದ್ರಿ ಠಾಣಾ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಸುರತ್ಕಲ್‌ ನಿವಾಸಿ ಮುತ್ತು(18), ಪ್ರಕಾಶ್‌(21) ಮತ್ತು ಅಸೈಗೋಳಿ...

ಮಂಗಳೂರಿನಲ್ಲಿ ಹಣದ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ-ಖ್ಯಾತ ವೈದ್ಯೆ ಸಹಿತ ಮೂವರ ವಿರುದ್ಧ ಸಂತ್ರಸ್ತ ಯುವತಿಯಿಂದಲೇ ದೂರು ದಾಖಲು

ಮಂಗಳೂರು: ಮುಸ್ಲಿಂ ಯುವಕನೊಬ್ಬ ಮತಾಂತರಗೊಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಯುವತಿಯೋರ್ವಳು ಮಂಗಳೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.ಆಕೆ ನೀಡಿರುವ ದೂರಿನಲ್ಲಿ 'ಮಂಗಳೂರಿನ ಬಿಕರ್ನಕಟ್ಟೆಯಲ್ಲಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾಗ ಬಿಕರ್ನಕಟ್ಟೆಯ ಕೈಕಂಬದಲ್ಲಿರುವ ಖಲೀಲ್‌ನ...

ಇನ್ಮುಂದೆ ಬಾಡಿಗೆ ಮನೆ ಪಡೆಯಲು ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ಅಗತ್ಯ-ಮೈಸೂರು ನಗರ ಪೊಲೀಸ್ ಕಮಿಷನರ್ ಹೊಸ ಸುತ್ತೋಲೆ

ಮಂಗಳೂರು: ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್ ಆಗಿರುವ ಘಟನೆ ಬೆನ್ನಲ್ಲೇ ಆರೋಪಿ ವಾಸವಾಗಿದ್ದ ಮೈಸೂರಿನ ಬಾಡಿಗೆ ಮನೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ನಡುವೆ ಬಾಡಿಗೆ ಮನೆ ನೀಡುವ ಮಾಲಕರು ಯಾರೂ ಗುರುತು ಪರಿಚಯ...