Tuesday, October 19, 2021

ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮೀ, ನೀವು ಯಾವ ಲೆಕ್ಕ: ಹಿಂದೂ ಮಹಾಸಭಾ

ಮಂಗಳೂರು: ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ ಸ್ವಾಮೀ ನೀವು ಯಾವ ಲೆಕ್ಕ. ಹಿಂದೂಗಳ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಗಾಂಧಿಯನ್ನು ಹತ್ಯೆ ಮಾಡಕ್ಕಾಗುತ್ತೆ. ನಿಮ್ಮ ವಿಚಾರದಲ್ಲಿ ನಾವು ಅಲೋಚಿಸಬೇಕಾಗುತ್ತದೆ ಎಂದು ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬಿಜೆಪಿ ನಾಯಕರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.


ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ಕೆಡವಿರುವುದನ್ನು ಖಂಡಿಸಿ ಮಾತನಾಡಿ, ನೂರಾರು ವರ್ಷ ಇತಿಹಾಸ ಹೊಂದಿರುವ ದೇವಾಲಯಗಳನ್ನು ಅನಧಿಕೃತ ಎನ್ನುವ ಅಧಿಕಾರ ನ್ಯಾಯಾಲಕ್ಕಿದೆಯೇ ಎಂಬ ಪ್ರಶ್ನೆ ಮಾಡಬೇಕಿದೆ.

ಕೇವಲ ಹಿಂದೂ ಶ್ರದ್ದಾ ಕೇಂದ್ರಗಳ ಮೇಲೆ ದಾಳಿಯಾಗುತ್ತದೆ. ಬಿಜೆಪಿ ಸರ್ಕಾರವಿದ್ದಾಗಲೇ ಹಿಂದೂ ದೇವಾಲಯ ನೆಲಸಮವಾಗಿರುತ್ತದೆ ಯಾಕೆ ಎಂದು ಪ್ರಶ್ನಿಸಿದರು.

ಇವರದ್ದೇ ಸರ್ಕಾರ ಇದೆ. ನೀವೂ ಪ್ರಾಮಾಣಿವಾಗಿ ಹೋರಾಟ ಮಾಡಿದ್ದರೆ, ಬಿಜೆಪಿಗೆ ಮತ ನೀಡಬೇಡಿ, ಹಿಂದೂ ಮಹಾಸಭಕ್ಕೆ ಓಟು ನೀಡಿ ಎಂದರು.
ಈ ಪ್ರಕರಣದಲ್ಲಿ ಕೇವಲ ಅಧಿಕಾರಿಗಳ ತಲೆದಂಡ ಯಾಕೆ ಎಂದರು.

ಇದು ಬೆನ್ನು ಮೂಳೆ ಇಲ್ಲದ ಸರಕಾರ. ದೇವಸ್ಥಾನವನ್ನು ಯಾರು ಕೆಡವಿದ್ದಾರೊ ಅವರ ಕೈಯಲ್ಲೆ ದೇವಸ್ಥಾನವನ್ನು ಪುನರ್ ಪ್ರತಿಷ್ಠಾನ ಮಾಡಿಸಬೇಕು.

ಇದಕ್ಕೆ ಜನರ ತೆರಿಗೆ ದುಡ್ಡನ್ನು ಬಳಸಬಾರದು ಎಂದು ಆಗ್ರಹಿಸಿದರು. ದೇವಾಲಯವನ್ನು ಕೆಡವಲು ಆದೇಶವನ್ನು ಬಿಜೆಪಿ ನಾಯಕರೇ ನೀಡಿದ್ದಾರೆ.

ನಮ್ಮಿಂದ ತಪ್ಪಾಗಿದೆ , ಪುನರ್‌ ನಿರ್ಮಿಸುತ್ತೇವೆ ಎಂದು ಈಗ ಇವರು ಹೇಳುವುದು ನಾಚಿಕೆಗೇಡಿನ ವಿಚಾರ.

ಸಣ್ಣ ತಪ್ಪು ಆಗಿದೆ ಎಂದು ಹೇಳುವುದು ದೇವಸ್ಥಾನವನ್ನು ಕೆಡವುದು ಸಣ್ಣ ತಪ್ಪೇ ಎಂದು ಪ್ರಶ್ನಿಸಿದರು. ನಿಮಗೆ ತಾಕತ್ತಿದ್ದರೆ ಅನಧಿಕೃತ ಮಸೀದಿ ಪಟ್ಟಿಯಲ್ಲಿರುವ ಒಂದೇ ಒಂದು ಮಸೀದಿಯನ್ನು ಒಡೆದು ನೋಡಿ. ನಿಮ್ಮನ್ನು ಬಿಡ್ತಾರಾ ಎಂದು ಸವಾಲು ಹಾಕಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...