Connect with us

LATEST NEWS

ಉಡುಪಿ ಮತಾಂತರ ಕೇಂದ್ರಕ್ಕೆ ಹಿಂಜಾವೇ ಕಾರ್ಯಕರ್ತರಿಂದ ದಾಳಿ

Published

on

ಉಡುಪಿ: ಹಿಂದೂ ಧರ್ಮದ ಮಕ್ಕಳು, ಮಹಿಳೆಯರನ್ನು ಕೂಡಿಹಾಕಿಕೊಂಡು ಅಕ್ರಮವಾಗಿ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಮತಾಂತರ ಕೇಂದ್ರದ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಕಾರ್ಕಳದ ಕುಕ್ಕಂದೂರು ಗ್ರಾಮದ ನಕ್ರೆ ಎಂಬಲ್ಲಿ ನಡೆದಿದೆ.


ಇಲ್ಲಿನ ಆನಂದಿ ಮೈದಾನದಲ್ಲಿರುವ ಪ್ರಗತಿ ಸೆಂಟರ್ ಮೇಲೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದು,

ಇಲ್ಲಿ ಹಲವಾರು ವರ್ಷಗಳಿಂದ ಮತಾಂತರ ನಡೆಯುತ್ತಿದೆ. ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ ಎಂದು ಆರೋಪಿಸಿದ್ದಾರೆ.

ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದು, ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ.

ಕಳೆದ ಹತ್ತು ವರ್ಷಗಳಿಂದ ಮತಾಂತರ ಕೆಲಸದಲ್ಲಿ ನಿರತವಾಗಿರುವ ಪ್ರಗತಿ ಸೆಂಟರ್ ಸಂಪೂರ್ಣ ಅಕ್ರಮವಾಗಿದ್ದು,​ ಯಾವುದೇ ಅನುಮತಿ ಪಡೆಯದೇ ಇದನ್ನು ನಡೆಸಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ.

ಅಕ್ರಮ ಮತಾಂತರ ಕೇಂದ್ರಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನುಗ್ಗಿದ ಕೂಡಲೇ ಪರಿಸ್ಥಿತಿ ಬಿಗಡಾಯಿಸಿದ್ದು, ಕೇಂದ್ರದಲ್ಲಿದ್ದ ಪ್ರಾರ್ಥನಾನಿರತರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಸಂಘರ್ಷಕ್ಕೆ ಕಾರಣವಾಗಿದೆ.

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಬೆನಡಿಕ್ಟ್ ನೇತೃತ್ವದಲ್ಲಿ ಮತಾಂತರ ಕಾರ್ಯ ನಡೆಯುತ್ತಿದೆ.

ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಪ್ರಾರ್ಥನಾಲಯ ನಡೆಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.

bangalore

ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾನೆ…ಎಂದು ಪಟ್ಟು ಹಿಡಿದ ಸ್ಪರ್ಧಿ ಯಾರು ಗೊತ್ತಾ..?

Published

on

Bigboss: ಬಿಗ್ ಬಾಸ್ ಮುಕ್ತಾಯಕ್ಕೆ ಇನ್ನು ಅರ್ಧ ಜರ್ನಿ ಬಾಕಿ ಇದೆ. ಆದರೆ ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಫೈಟ್ ಜೋರಾಗಿದ್ದು, ಈ ಬಾರಿ ಬಿಗ್ ಬಾಸ್ ಗೆಲ್ಲೋದು ನಾವೇ ಎಂದು ಪಟ್ಟು ಹಿಡಿದ ಸ್ಫರ್ಧಿಗಳು ಗೆಲ್ಲುತ್ತಾರೋ ಅನ್ನೋದು ಕಾದು ನೋಡಬೇಕಿದೆ.

ಈ ವಾರ ದೊಡ್ಮನೆಯಲ್ಲಿ ವಿನಯ್ ಆರ್ಭಟ ಜೋರಾಗಿತ್ತು. ಜೊತೆಗೆ ಟೀಮ್ ನಲ್ಲಿ ಕಿತ್ತಾಟ ನಡೆದರೂ ವಿನಯ್ ಮಾತ್ರ ತಲೆಕೆಡಿಸದೆ ಈ ಬಾರಿ ಬಿಗ್ ಬಾಸ್ ಟೈಟಲ್ ನಾನೇ ಗೆಲ್ಲೋದು ಎಂದು ಹೇಳಿಕೊಂಡಿದ್ದಾರೆ.


ಈಗಾಗಲೇ ಬಿಗ್ ಬಾಸ್ ಜರ್ನಿ ಅರ್ಧ ಮುಗಿದಿದ್ದು, ಇನ್ನು ಅರ್ಧ ಬಾಕಿ ಇದೆ. ಹಾಗಾಗಿ ಇದರಲ್ಲಿ ಯಾರು ಗೆಲ್ಲೋತ್ತಾರೋ ಅನ್ನೊ ಪ್ರಶ್ನೆ ಮತ್ತೇ ಕಾಡಿದೆ. ವಾರದಿಂದ ವಾರಕ್ಕೆ ಎಲಿಮಿನೇಟ್ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದರೆ. ಇತ್ತ ವಿನಯ್ ಯಾರನ್ನೂ ಲೆಕ್ಕಿಸದೇ ತಾವೇ ಈ ಬಾರಿ ಫಿನಾಲೆ ಮೆಟ್ಟಿಲೇರಬೇಕು ಎಂದಾಗ ಸ್ನೇಹಿತ್ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹಾಗಗಿ ವಿನಯ್ ಗೆ ಮತ್ತಷ್ಟು ಧೈರ್ಯ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ನಮ್ರತಾ, ಸ್ನೇಹಿತ್ ಮತ್ತು ವಿನಯ್ ಅವರದ್ದು ಒಂದು ಗುಂಪು. ಈ ಮೂವರು ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಆಟವಾಡುತ್ತಾ ಬಂದಿದ್ದಾರೆ. ಆದರೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಿನಯ್ ವಿರುದ್ಧ ನಮ್ರತಾ ಮತ ಚಲಾಯಿಸಿದ್ದಾರೆ. ಹಾಗಾಗಿ ನಮ್ರತಾ ಇವರ ಗುಂಪಿನಿಂದ ಹೊರ ನಡೆದಿದ್ದಾರೆ.


ಆ ಬಳಿಕ ವಿನಯ್ ಹಾಗೂ ಸ್ನೇಹಿತ್ ಬಿಗ್ ಬಾಸ್ ಗೆಲುವಿನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ನಾವೇ ಇರಬೇಕು ಅಂತಾರೆ ಸ್ನೇಹಿತ್. ನಾವೇ ಇರಬೇಕು. ಆದರೆ, ನಾನೇ ವಿನ್ ಆಗಬೇಕು ಎಂದು ವಿನಯ್ ನುಡಿಯುತ್ತಾರೆ. ಅದಕ್ಕೆ ಸ್ನೇಹಿತ್ ಖುಷಿಯಿಂದಲೇ, ನಿಜಕ್ಕೂ ಇದಕ್ಕಿಂತ ಸಂತೋಷ ಏನಿದೆ ಎನ್ನುತ್ತಾರೆ.

ಈ ಮಾತು ಕೇಳಿಸಿಕೊಂಡ ಬಿಗ್ ಬಾಸ್ ನೋಡುಗರು, ನಮ್ರತಾಗಿಂತಾನೂ ಸ್ನೇಹಿತ್ ಸಖತ್ ಚಮಚಾ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ವಿನಯ್ ನ ಕನಸು ಈಡೇರುತ್ತಾ..? ಅವರೇ ಬಿಗ ಬಾಸ್ ವಿನ್ನರ್ ಆಗುತ್ತಾರ ಎಂದು ಕಾದು ನೋಡಬೇಕಿದೆ.

Continue Reading

LATEST NEWS

ಪ್ರಧಾನಿ ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ ಇಟಲಿಯ ಲೇಡಿ ಪಿಎಂ

Published

on

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಕ್ಲಿಕ್ಕಿಸಿಕೊಂಡ ಸೆಲ್ಫಿ ಪೊಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.

ಸಿಓಪಿ 28 ಶೃಂಗಸಭೆಯ ನಿಮಿತ್ತ ದುಬೈಗೆ ತೆರಳಿದ್ದ ಪ್ರಧಾನಿ ನರೇಂದ ಮೋದಿ ಅವರ ಜೊತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮಾತುಕತೆ ನಡೆಸಿ ಸೆಲ್ಫೀ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೋದಿ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುವ ಮೆಲೋನಿ ಅವರು, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ “ಗುಡ್ ಫ್ರೆಂಡ್ಸ್ ಎಟ್ ಸಿಓಪಿ28 #ಮೆಲೋಡಿ” ಎಂಬ ಶೀರ್ಷಿಕೆ ನೀಡಿದ್ದಾರೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೆಲೋನಿ ಕಳೆದ ಸೆಪ್ಟೆಂಬರ್ ನಲ್ಲಿ ಭಾರತದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಶೃಂಗಸಭೆ ವೇಳೆ ಮೋದಿಯವರ ಜೊತೆ ಇಟೆಲಿ ಪ್ರಧಾನಿ ನಿಯೋಗದಿಂದ ಮಾತುಕತೆ ನಡೆದಿತ್ತು. ದುಬೈಗೆ ತೆರಳಿದ್ದ ಮೋದಿಯವರು ಸಿಓಪಿ 28 ಶೃಂಗಸಭೆಯಾಗಿ ಇಂದು ದೆಹಲಿಗೆ ಮರಳಿದ್ದಾರೆ. ದುಬೈ ಭೇಟಿ ಸಂದರ್ಭದಲ್ಲಿ ಮೋದಿಯವರು, ವಿವಿಧ ರಾಷ್ಟ್ರಗಳ ಮುಖ್ಯಸ್ಥರ ಜೊತೆ ಚರ್ಚೆ ನಡೆಸಿದ್ದಾರೆ.

 

ಮೋದಿಯವರು ಮೆಲೋನಿ ಅವರಲ್ಲದೆ, ಪ್ರಧಾನಿ ಮೋದಿ ಅವರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಬ್ರೆಜಿಲ್ ಪ್ರಧಾನಿ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ, ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಕ್ಯಾಮರೂನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರನ್ನು ಭೇಟಿಯಾದರು.

Continue Reading

FILM

ರಶ್ಮಿಕಾ ಮಂದಣ್ಣ ಪರಭಾಷೆ ನಟರಿಗೆ ಲಕ್ಕಿ ಚಾರ್ಮ್

Published

on

Rashmika mandanna : ಕನ್ನಡ ಬೆಡಗಿ ರಶ್ಮಿಕಾ ಮಂದಣ್ಣ ಅಂದ್ರೆ ಕೆಲವರಿಗೆ ಇಷ್ಟ, ಇನ್ನೂ ಕೆಲವರಿಗೆ ಅಷ್ಟಕಷ್ಟೆ.ಆದ್ರೆ ಬೇರೆ ಭಾಷೆಯ ನಟರಿಗೆ ರಶ್ಮಿಕಾ ಅಂದ್ರೆ ತುಂಬಾನೆ ಇಷ್ಟ ಅಂತೆ.
ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ರಶ್ಮಿಕಾ ಸದ್ಯ ಬೇಡಿಕೆಯ ನಟಿ.ಸೌತ್ ಟು ನಾರ್ತ್ ರಶ್ಮಿಕಾ ಅವರಿಗೆ ಸಿನಿಮಾರಂಗದಲ್ಲಿ ಭಾರೀ ಬೇಡಿಕೆ ಇದೆ.


ರಶ್ಮಿಕಾ ಅವರ ಮೊದಲ ಸಿನಿಮಾ ಕಿರಿಕ್ ಪಾರ್ಟಿ ಬ್ಲಾಕ್​ ಬಸ್ಟರ್ ಹಿಟ್. ಕನ್ನಡದಲ್ಲಿ ಆ ಬಳಿಕ ಮಾಡಿದ ಚಮಕ್, ಅಂಜನಿಪುತ್ರ, ಪೊಗರು ಸಿನೆಮಾ ಬ್ಲಾಕ್ ಬಸ್ಟರ್ ಚಿತ್ರಗಳು ಎನಿಸಿಕೊಂಡಿವೆ.
ತಮಿಳು, ತೆಲುಗು ಬಾಷೆಯಲ್ಲಿ ಸತತ ಫ್ಲಾಪ್ ಕೊಡುತ್ತಿದ್ದ ಸ್ಟಾರ್ ಹೀರೋಗಳ ಜೊತೆ ಒಂದೊಂದು ಸಿನಿಮಾ ಮಾಡಿ ಅವರಿಗೆ ಬಿಗ್ ಸಕ್ಸಸ್ ಕೊಟ್ಟಿದ್ದಾರೆ.

ವಿಜಯ್, ಅಲ್ಲು ಅರ್ಜುನ್, ರಣಬೀರ್ ಕಪೂರ್​ನಂತ ಸ್ಟಾರ್ ಹೀರೋಗಳು ಸತತವಾಗಿ ಎವರೇಜ್ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದರು.ಆದ್ರೆ ರಶ್ಮಿಕಾ ಅವರ ಜೊತೆ ನಟಿಸಿ ಅವರಿಗೆ ಗೆಲುವು ತಂದುಕೊಟ್ಟಿದ್ದಾರೆ.

Continue Reading

LATEST NEWS

Trending