Saturday, November 27, 2021

ತಲವಾರು ಹಿಡಿದು ಗೋಕಳ್ಳತನ ಮಾಡುವವರಿಗೆ ತಲವಾರಿನಿಂದಲೇ ಉತ್ತರ: ಗಂಗೊಳ್ಳಿಯಲ್ಲಿ ಹಿಂಜಾವೇ ಎಚ್ಚರಿಕೆ

ಉಡುಪಿ: ಈ ಹಿಂದೆ ದಾರಿಯಲ್ಲಿ ಗೋವು ಕಳ್ಳತನ ಮಾಡುತ್ತಿದ್ದರು. ಅದರೆ ಇಂದು ಹಟ್ಟಿಗಳಿಗೆ ನುಗ್ಗಿ ತಲವಾರು ತೋರಿಸಿ ಗೋವು ಕೊಂಡೊಯ್ಯುವ ಹಂತಕ್ಕೆ ಬಂದಿದ್ದಾರೆ.

ನಾವು ಈ ಬಗ್ಗೆ ಪೊಲೀಸ್‌ ಸ್ಟೇಷನ್‌ಗೆ ದೂರು ನೀಡುತ್ತಾ ಕುಳಿತಿರಬೇಕಾ ಅಥವಾ ಅದೇ ತಲವಾರಿನಿಂದ ಹಿಂದೂ ಸಮಾಜ ಉತ್ತರಿಸಬೇಕಾ ಎಂದು ಹಿಂಜಾವೇ ರಾಜ್ಯ ಪ್ರಮುಖ್‌ ಉಲ್ಲಾಸ್‌ ಕೆ.ಟಿ ಪ್ರಶ್ನಿಸಿದರು.


ಗಂಗೊಳ್ಳಿಯಲ್ಲಿ ಇಂದು ನಡೆದ ಗೋ ಹತ್ಯೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆಸುತ್ತಿರುವ ಪ್ರತಿಭಟನೆ ಅಂಗವಾಗಿ ಮಾತನಾಡಿದ ಅವರು, ಸರಕಾರ ಗೋ ನಿಷೇಧ ಜಾರಿಗೆ ತಂದಿದೆ.

ಈ ಬಗ್ಗೆ ಬೈಂದೂರು ಪೊಲೀಸರಿಗೆ ಮಾಹಿತಿ ಇಲ್ಲವೇನೋ?. ಗೋಹತ್ಯೆ ನಿಷೇಧ ತಂದರೆ ಸಾಲದು ಅದು ಸರಿಯಾದ ರೀತಿಯಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಗಂಗೊಳ್ಳಿಯಲ್ಲಿ 14 ಮಸೀದಿಗಳಿವೆ. ಅದರಲ್ಲಿ ಕೆಲವೊಂದಿಷ್ಟು ಅಕ್ರಮ ಮಸೀದಿಗಳಿವೆ. ಅದರಲ್ಲಿ ಒಂದಂತೂ ಹೈಕೋರ್ಟ್‌ ನೆಲಸಮಗೊಳಿಸುವಂತೆ ಆದೇಶಿಸಿದೆ ಎಂದರು.

ನಾವು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡೋಣ. ಗಮಗೊಳ್ಳಿಯಲ್ಲಿ ಇಂತಹ ಎಷ್ಟು ಅಕ್ರಮ ಕಟ್ಟಡ ಲಿಸ್ಟ್‌ ರೆಡಿ ಇದೆ. ಅದನ್ನು ಯಾವಾಗ ತೆರವುಗೊಳಿಸುತ್ತೀರಾ ಎಂದು ಪ್ರಶ್ನಿಸಿದರು.
ಇಸ್ಲಾಂನಲ್ಲಿ ಆಝಾನ್‌ ಕೂಗಲು ಯಾವುದೇ ವಿರೋಧವಿಲ್ಲ. ಲೌಡ್‌ಸ್ಪೀಕರ್‌ ಹಾಕಿ ಯಾಕೆ ಕೂಗಬೇಕು.

ಅ ಲೌಡ್‌ಸ್ಪೀಕರ್‌ನಿಂದ ಸಾರ್ವಜನಿಕರಿಗೆ ಯಾಕೆ ತೊಂದರೆ ಕೊಡಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಆದೇಶವಿದೆ ಅದನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಿರಾ ಎಮದು ಪ್ರಶ್ನಿಸಿದರು.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...