ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಹಿಂಜಾವೇ ನಮನ .!
ಮಂಗಳೂರು : ಭಾರತದ ಅವಿಭಾಜ್ಯ ಅಂಗವಾದ ಲಾಡಖ್ ನ ಗಾಲ್ವಾನ್ ಕಣಿವೆಯಲ್ಲಿ ಪಾಪಿ ಚೀನಾದ ಕಮ್ಯುನಿಸ್ಟ್ ಸೈನಿಕರು LAC ದಾಟಿ ಬಂದು ಭಾರತದ ವೀರ ಸೈನಿಕರೊಂದಿಗೆ ಸಂಘರ್ಷ ನಡೆಸಿದ ಪರಿಣಾಮ ಹುತ್ತಾತ್ಮರಾದ ಭಾರತೀಯ ಯೋಧರಿಗೆ
ಶ್ರಧಾಂಜಲಿ ಸಭೆಯನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ’ಯ ವತಿಯಿಂದ ಕದ್ರಿ ವೀರ ಯೋಧರ ಸ್ಮಾರಕ ಸ್ಧಳ ಇಲ್ಲಿ ನಡೆಯಿತು.. ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಮೇಶ್ ಕೌಡೂರು ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ವಿಭಾಗ ಅಧ್ಯಕ್ಷ ಕಿಶೋರ್ ಕೋಡಿಕಲ್, ಸುಭಾಷ್ ಪಡೀಲ್ ಜಿಲ್ಲಾ ಅಧ್ಯಕ್ಷರಾದ ಹರೀಶ್ ಶಕ್ತಿನಗರ, ಶ್ರೀಮತಿ ಲೋಲಾಕ್ಷಿ ಶೆಟ್ಟಿ, ಪ್ರಮುಖರಾದ ಸಂದೀಪ್ ಅಂಬ್ಲಮೊಗೇರ್, ಸಂದೀಪ್ ಪಂಪ್ವೇಲ್, ಪುಷ್ಪರಾಜ್ ಕುಳಾಯಿ, ಅನಿಲ್ ಕೋಡಿಕಲ್, ಪ್ರವೀನ್ ಬೆಂಜನಪದವು, ಪ್ರಕಾಶ್ ಕುಂಪಲ, ಹರ್ಷ ಕದ್ರಿ, ಪ್ರಸಾದ್ ಕದ್ರಿ, ಪವನ್ ಬೋಳಾರ, ಹರ್ಷೀತ್ ಶಕ್ತಿನಗರ, ಪ್ರಜ್ವಲ್ ಯ್ಯೇಯಾಡಿ, ದಿನೇಶ್ ಮೂಂಚೂರು, ದೀಕ್ಷೀತ್ ಉಳ್ಳಾಯಿಬೆಟ್ಟು ಸೇರಿದಂತೆ ನೂರಾರೂ ಕಾರ್ಯಕರ್ತರು ಉಪಷ್ಥಿತರಿದ್ದರು ನಂತರ ಪುಷ್ಪರ್ಚಾನೆ ಸಲ್ಲಿಸಿದರು…
ಮಂಗಳೂರು/ಚಂಡೀಗಢ : ಭೀ*ಕರ ರಸ್ತೆ ಅಪಘಾತದಲ್ಲಿ ಡಬಲ್ ಒಲಿಂಪಿಕ್ ಪದಕ ವಿಜೇತೆ ಶೂಟರ್ ಮನು ಭಾಕರ್ ಅವರ ಸಂಬಂಧಿಗಳಿಬ್ಬರು ಕೊ*ನೆಯುಸಿರೆಳೆದಿದ್ದಾರೆ.
ಈ ಘಟನೆ ಹರ್ಯಾಣದ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಭಾನುವಾರ (ಜ.19ರಂದು) ನಡೆದಿರುವ ಬಗ್ಗೆ ವರದಿಯಾಗಿದೆ. ಮನುಭಾಕರ್ ಅವರ ಚಿಕ್ಕಪ್ಪ ಹಾಗೂ ಅಜ್ಜಿ ಭೀ*ಕರ ರಸ್ತೆ ಅಪ*ಘಾತದಲ್ಲಿ ಮೃ*ತಪಟ್ಟಿದ್ದಾರೆ.
ಚಿಕ್ಕಪ್ಪ ಯುದ್ಧವೀರ್ ಸಿಂಗ್ ಮತ್ತು ಅಜ್ಜಿ ಸಾವಿತ್ರಿ ದೇವಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಂಗ್ ಸೈಡ್‌ನಿಂದ ವೇಗವಾಗಿ ಬಂದ ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಮನು ಭಾಕರ್ ಅವರ ಚಿಕ್ಕಪ್ಪ, ಅಜ್ಜಿ ಸ್ಥಳದಲ್ಲೇ ಪ್ರಾ*ಣ ಚೆಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಅಪಘಾತದ ತೀವ್ರತೆಗೆ ಇಬ್ಬರು ನೆಲಕ್ಕೆ ಎಸೆಯಲ್ಪಟ್ಟಿದ್ದು, ಕಾರು ಚಾಲಕ ಸ್ಥಳದಿಂದ ಪರಾರಿ ಆಗಿದ್ದಾನೆ ಎಂದು ವರದಿ ತಿಳಿಸಿದೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುದ್ದ್‌ವೀರ್ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅವರ ತಾಯಿ ಸಾವಿತ್ರಿ ದೇವಿ ಲೋಹರು ಚೌಕ್‌ನಲ್ಲಿರುವ ತನ್ನ ಕಿರಿಯ ಮಗನನ್ನು ಭೇಟಿ ಮಾಡಲು ಅವರೊಂದಿಗೆ ಬಂದಿದ್ದರು. ಇಬ್ಬರೂ ಕಲ್ಯಾಣ ಮಾಡ್ ಪ್ರದೇಶವನ್ನು ತಲುಪುತ್ತಿದ್ದಂತೆ ರಸ್ತೆಯ ಇನ್ನೊಂದು ಬದಿಯಿಂದ ವೇಗವಾಗಿ ಬಂದ ಕಾರು ಅವರ ಸ್ಕೂಟರ್‌ಗೆ ಢಿ*ಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಢಿಕ್ಕಿಯ ರಭಸಕ್ಕೆ ಕಾರು ಕೂಡ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಸದ್ಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
ಮನು ಭಾಕರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದರು. ಒಂದೇ ಆವೃತ್ತಿಯ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದಿದ್ದರು. ಇತ್ತೀಚೆಗಷ್ಟೇ ಮನು ಭಾಕರ್ ರಾಷ್ಟ್ರಪತಿ ಅವರಿಂದ ‘ಖೇಲ್ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
ಸಾವಿರಾರು ನೀರಿಕ್ಷೆಗಳೊಂದಿಗೆ ಜನರು ದಾಂಪತ್ಯ ಜೀವನಕ್ಕೆ ಕಾಲಿಡುವುದು ಸಾಮಾನ್ಯ. ಆದರೆ ನಿರೀಕ್ಷೆಗಳೆಲ್ಲವೂ ಯಾವಾಗಲೂ ನನಸಾಗುವುದಿಲ್ಲ, ಹೂವಿನ ಜೊತೆಗೆ ಮುಳ್ಳು ಇರುವಂತೆಯೇ ಸುಖದ ಜೊತೆ ಕಷ್ಟವೂ ಇರುತ್ತದೆ. ಅವೆಲ್ಲವನ್ನು ಸರಿದೂಗಿಸಿಕೊಂಡು ಹೋದರಷ್ಟೇ ಜೀವನ ಸುಖಕರವಾಗಿರುತ್ತದೆ. ಹಾಗಂತ ಎಲ್ಲವನ್ನು ಸಹಿಸಿಕೊಂಡು ಹೋಗಲೇಬೇಕೆಂದೆನಿಲ್ಲ, ಆದರೆ ಕೆಲವು ತಾಳ್ಮೆಯಿಂದ ತೆಗೆದುಕೊಂಡ ನಿರ್ಧಾರಗಳು ನಮ್ಮ ಬದುಕನ್ನು ಹಸನಾಗಿಸಬಹುದು. ಹೀಗಿರುವಾಗ ನೂರೆಂಟು ಕನಸುಗಳನ್ನು ಹೊತ್ತು ಹೊಸದಾಗಿ ಮದುವೆಯಾದವರಿಗೆ, ಮದುವೆಯಾಗುತ್ತಿರುವವರಿಗೆ, ಮದುವೆಯಾಗಲು ತುದಿಗಾಲಲ್ಲಿ ನಿಂತಿರುವವರಿಗೆ ಕೆಲ ಕಿವಿಮಾತುಗಳು ಇಲ್ಲಿವೆ.
ಸೌಂದರ್ಯ ಹಾಗೂ ಬ್ಯಾಂಕ್ ಬ್ಯಾಲೆನ್ಸ್‌ಗಿಂತಲೂ ಹೆಚ್ಚಾಗಿ ಸಂಗಾತಿಯ ಗುಣನಡವಳಿಕೆಗಳು ಸುಮಧುರ ದಾಂಪತ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ. ಚೆಂದ, ಬ್ಯಾಂಕ್ ಬ್ಯಾಲೆನ್ಸ್ ಎಲ್ಲವೂ ಇದ್ದು, ಅವರು ನಮ್ಮಲ್ಲಿ ಗೌರವಯುತವಾಗಿ ನಡೆಸಿಕೊಳ್ಳುವುದಿಲ್ಲವೆಂದರೆ ಎಲ್ಲವೂ ನಿಷ್ಪ್ರಯೋಜಕ.ಸರಿ ತಪ್ಪುಗಳ ಪ್ರಶ್ನೆಗಳಿಗಿಂತ ಹೊಂದಾಣಿಕೆ ಬಹಳ ಮುಖ್ಯವಾಗುತ್ತದೆ. ಯಾರು ತಪ್ಪು ಯಾರು ಸರಿ ಎಂದು ಹೋರಾಟ ಮಾಡುವವರಿಗಿಂತ ಚೆನ್ನಾಗಿ ಜೀವನ ಮಾಡುತ್ತಿರುವುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ.ರೋಮ್ಯಾನ್ಸ್ ದಾಂಪತ್ಯದ ಭಾಗವಷ್ಟೇ ಅದೇ ಎಲ್ಲವೂ ಅಲ್ಲ, ಕೆಲವೊಂದು ರಹಸ್ಯಗಳಾಗಿದ್ದರೆಯೇ ಚಂದ. ಭಾರತದಲ್ಲಿ ಮದುವೆ ಕೇವಲ ಇಬ್ಬರು ಗಂಡು ಹೆಣ್ಣಿಗೆ ಸಂಬಂಧಿಸಿದ್ದಲ್ಲ, ಇದು ಸಂಪೂರ್ಣವಾಗಿ ಕುಟುಂಬ, ಉದ್ಯೋಗ ಜೀವನ, ಬದುಕಿನ ವಾಸ್ತವತೆ, ಸಾಮಾಜಿಕ ಸಾಂಸ್ಕೃತಿಕ ನಂಬಿಕೆಗೆ ಸಂಬಂಧಿಸಿದ ವಿಚಾರವಾಗಿದೆ.
ಮದುವೆಯಾದ ತಕ್ಷಣ ಅದೇಕೆ ಇದೇಕೆ ಅಂತ ಪ್ರಶ್ನಿಸುತ್ತಾ ಮನೆಯವರನ್ನೆಲ್ಲಾ ಎದುರು ಹಾಕಿಕೊಳ್ಳಬಾರದು. ಯಶಸ್ವಿ ಮದುವೆಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಫಾರ್ಮುಲಾಗಳಿಲ್ಲ. ಪ್ರತಿಯೊಂದು ಜೋಡಿಯೂ ವಿಭಿನ್ನ, ಈ ಆತ್ಮ ಸಮ್ಮಿಲನಕ್ಕೆ ಏನು ಕಾರಣವಿರಬಹುದು ಎಂಬುದನ್ನು ಕೇವಲ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಬಹಳ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತೋರಿಸುವಂತೆಯೇ ಮದುವೆ ಜೀವನ ಇರುವುದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೊಗಳನ್ನು ಹಾಕಿಕೊಂಡು ಎಂಜಾಯ್ ಮಾಡುತ್ತಿರುವ ಜೋಡಿಯ ಜೀವನದ ಜೊತೆ ನಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳಬಾರದು. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಶೋಕಿ ಮಾಡುವವರು ವಾಸ್ತವದಲ್ಲಿ ಇತರರಿಗಿಂತ ಬಹಳ ಕೆಟ್ಟದಾಗಿ ಹೊಡೆದಾಡಿಕೊಂಡಿರುತ್ತಾರೆ. ಜೊತೆಯಾಗಿ ಸಾಗಲು ಕಷ್ಟಪಡುತ್ತಿರುತ್ತಾರೆ. ಕಿತ್ತಾಟವನ್ನು ಯಾವ ದಂಪತಿಯೂ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಿಲ್ಲ. ಸುಖಿ ದಾಂಪತ್ಯ ಜೀವನಕ್ಕಾಗಿ ಈ ವಿಚಾರಗಳು ಸಣ್ಣ ವಿಚಾರಗಳನ್ನು ನೆನಪಿಟ್ಟು ಬಾಳುವುದು ಉತ್ತಮ.
ಮಂಗಳೂರು/ಮೈದುಗುರಿ (ನೈಜೀರಿಯಾ) : ಉತ್ತರ ನೈಜೀರಿಯಾದಲ್ಲಿ ಶನಿವಾರ ಪೆಟ್ರೋಲ್ ಟ್ಯಾಂಕರ್ ಸ್ಪೋ*ಟಗೊಂಡ ಪರಿಣಾಮ ಕನಿಷ್ಠ 70 ಜನ ಮೃ*ತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ತುರ್ತು ಏಜೆನ್ಸಿ ತಿಳಿಸಿದೆ.
ವರದಿಗಳ ಪ್ರಕಾರ, ಘಟನೆಯಲ್ಲಿ 70ಕ್ಕೂ ಹೆಚ್ಚು ಮಂದಿ ಸಾ*ವಿಗೀಡಾಗಿದ್ದು, 56 ಜನ ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.