ಪುತ್ತೂರು: ಯುವಕನೋರ್ವ ನೇಣು ಬಿಗಿದು ಸಾವನ್ನಪ್ಪಿದ ಘಟನೆ ಈಶ್ವರಮಂಗಲ ಸಮೀಪ ಮಯ್ಯಾಳ ಎಂಬಲ್ಲಿ ನಡೆದಿದೆ.
ಜೀವನ್ (23) ಇವರು ಮಾಡಿಕೊಂಡಿದ್ದಾರೆ. ಇವರು ಜೀವನ್ ಸೌಂಡ್ಸ್ ಮತ್ತು ಲೈಟಿಂಗ್ಸ್ ಕೆಲಸ ನಿರ್ವಹಿಸುತ್ತಿದ್ದು, ದೇಲಂಪಾಡಿ ಹಿಂದೂ ಐಕ್ಯವೇದಿಕೆ ಘಟಕದ ಸಕ್ರಿಯ ಕಾರ್ಯಕರ್ತರಾಗಿದ್ದರು.
ಮೃತರು ತಂದೆ ಮಹಾಲಿಂಗ ಪಾಟಾಳಿ , ತಾಯಿ ಬೇಬಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಪುತ್ತೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಕೇಸು ದಾಖಲಿಸಿದ್ದಾರೆ.