ಚುನಾವಣಾ ಆಯೋಗದ ನಿಯಮವನ್ನು ಬಿಜೆಪಿ ಧಿಕ್ಕರಿಸಿದೆ ಮಾಜಿ ಸಚಿವ ರಮಾನಾಥ ರೈ ಕಿಡಿ
ಮಂಗಳೂರು: ಚುನಾವಣಾ ಆಯೋಗದ ನೀತಿ ಸಂಹಿತೆಯನ್ನು ಕಾಂಗ್ರೆಸ್ ಕಟ್ಟು ನಿಟ್ಟಾಗಿ ಪಾಲನೆ ಮಾಡುವ ಮೂಲಕ ರಾಜ ಧರ್ಮ ಪಾಲನೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚುನಾವಣಾ ನೀತಿ ಸಂಹಿತೆ ಆಯೋಗದ ಸೂಚನೆಯ ಪ್ರಕಾರ ಪಕ್ಷದ ಮುಖಂಡರ ಭಾವ ಚಿತ್ರಗಳನ್ನು, ಬ್ಯಾಲೆಟ್ ಪೇಪರ್ ಮೇಲೆ ಹಾಕಬಾರದು ಅನ್ನುವ ಆದೇಶ ಇದೆ.
ಆದ್ರೆ ಆಡಳಿತಾ ರೂಢ ಭಾರತೀಯ ಜನತಾ ಪಾರ್ಟಿಯು ಪಕ್ಷದ ಚಿಹ್ನೆ ಹಾಗು ಭಾವ ಚಿತ್ರಗಳನ್ನು ಬ್ಯಾಲೆಟ್ ಪೇಪರ್ ಮೇಲೆ ಹಾಕುವ ಮೂಲಕ ಚುನಾವಣಾ ಆಯೋಗದ ನೀತಿ ಉಲ್ಲಂಘಿಸಿ ದ್ರೋಹವೆಸಗಿದೆ.
ಈ ಮೂಲಕ ಬಿಜೆಪಿ ರಾಜ ಧರ್ಮ ಪಾಲಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು..ಗ್ರಾಮ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.