Connect with us

LATEST NEWS

ಹಿಜಾಬ್‌-ಕೇಸರಿ ವಿವಾದ: ಉಡುಪಿ ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಮನವಿ

Published

on

ಉಡುಪಿ: ಜಿಲ್ಲೆಯಲ್ಲಿ ಹಿಜಾಬ್-ಕೇಸರಿ ವಿವಾದ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಮಧ್ಯೆ ಉಡುಪಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಡಳಿತದ ಮೊರೆಹೋಗಿದ್ದಾರೆ.


ಇಂದು ಉಡುಪಿ ಅಪರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ನಮ್ಮ ಕಾಲೇಜಿನ ಶೈಕ್ಷಣಿಕ ವಾತಾವರಣ ಹದಗೆಟ್ಟಿದೆ. ಪರೀಕ್ಷಾ ಸಮಯದಲ್ಲಿ ಕಾಲೇಜಿನಲ್ಲಿ ಕಲಿಕೆಯ ಬದಲಾಗಿ ಗಲಾಟೆ ಆರಂಭವಾಗಿದೆ.

ಕೇವಲ ಆರು ವಿದ್ಯಾರ್ಥಿನಿಯರಿಂದ ಆಗಿ 600 ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಶಾಲೆಯ ಆವರಣಕ್ಕೆ ನಿತ್ಯವೂ ಪೊಲೀಸರು ಮತ್ತು ಮಾಧ್ಯಮದವರು ಬರುತ್ತಿದ್ದಾರೆ. ನಮ್ಮ ಕಾಲೇಜಿಗೆ ಹಲವಾರು ದಶಕಗಳ ಇತಿಹಾಸವಿದೆ.

ಇಲ್ಲಿ ಯಾವುದೇ ರೀತಿಯ ತಾರತಮ್ಯ ಅನ್ಯಾಯ ನಡೆಯುತ್ತಿಲ್ಲ. ವಿನಾಕಾರಣ ವಿವಾದ ಸೃಷ್ಟಿಸಿ ಶೈಕ್ಷಣಿಕ ವಾತಾವರಣ ಹದಗೆಡಿಸಿದ್ದಾರೆ.

ಇದರ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಲೇಜಿನ ಇತರ ವಿದ್ಯಾರ್ಥಿನಿಯರಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

DAKSHINA KANNADA

ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

Published

on

ಉಳ್ಳಾಲ : ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾ*ತ ಪ್ರಕರಣಗಳು ಹೆಚ್ಚುತ್ತಿವೆ. ಹೃದಯಾಘಾ*ತ ಸಂಭವಿಸಲು ವಯಸ್ಸಿನ ಇತಿ ಮಿತಿ ಎಂಬುದಿಲ್ಲದಂತಾಗಿದೆ. ಇದೀಗ ಕೊಲ್ಯ ಕನೀರುತೋಟ ನಿವಾಸಿ 28 ರ ಹರೆಯದ ವಿವಾಹಿತರೊಬ್ಬರು ಮಲಗಿದ್ದಲ್ಲೇ ಹೃದಯಾಘಾ*ತಕ್ಕೀಡಾಗಿ ಸಾ*ವನ್ನಪ್ಪಿರುವ ಘಟನೆ ಮಂಗಳವಾರ ಸಂಭವಿಸಿದೆ.


ಕನೀರುತೋಟ ನಿವಾಸಿ ಜಿತೇಶ್ (28) ಸಾ*ವನ್ನಪ್ಪಿದವರು. ಜಿತೇಶ್ ಸೋಮವಾರ ರಾತ್ರಿ ಊಟ ಮುಗಿಸಿ ಮಲಗಿದ್ದರು. ಯಾವತ್ತೂ ಬೇಗ ಏಳುತ್ತಿದ್ದ ಜಿತೇಶ್ ಇನ್ನೂ ಯಾಕೆ ಎದ್ದಿಲ್ಲ ಎಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ

ಮಂಗಳೂರಿನ ಕೆಟಿಎಂ ಷೋರೂಮಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಕೊರೊನಾ ಸಂದರ್ಭ ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮೃ*ತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Continue Reading

FILM

ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

Published

on

ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತುಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ನಟಿಯರು ನಟರ ಬಗ್ಗೆ, ನಿರ್ಮಾಪಕರು, ನಿರ್ದೇಶಕರುಗಳ ಬಗ್ಗೆ ಆರೋಪಗಳನ್ನು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತಿವೆ. ಇದೀಗ ರಿಯಾಲಿಟಿ ಶೋ ಸರದಿ.

ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಆರೋಪ:


ಸಿನಿ ಇಂಡಸ್ಟ್ರಿಯಲ್ಲಿದ್ದ ಕಾಸ್ಟಿಂಗ್ ಕೌಚ್‌ ಈಗ ಟಿವಿ ರಿಯಾಲಿಟಿ ಶೋಗಳಲ್ಲೂ ನಡಿತಾ ಇದೆಯಾ ? ಇಂತಹ ಒಂದು ಆರೋಪವನ್ನು ಡ್ಯಾನ್ಸಿಂಗ್ ರಿಯಾಲಿಟಿ ಶೋ ‘ಝಲಕ್ ದಿಖ್ಲಾಜಾ ‘ ಸೀಸನ್‌ 11 ಗೆದ್ದಿದ್ದ ಡ್ಯಾನ್ಸಿಂಗ್ ಕ್ವೀನ್ ಮನೀಶಾ ರಾಣಿ ಅವರು ಆರೋಪಿಸಿದ್ದಾರೆ.
ತನ್ನ ಡ್ಯಾನ್ಸ್ ಮೂವ್ಸ್ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ವಭಾವದಿಂದ ಮನೀಶಾ ರಾಣಿ ಜನರ ಮನ ಗೆದ್ದಿದ್ದರು. ಇತ್ತೀಚೆಗೆ ಬಿಗ್‌ ಬಾಸ್ ಒಟಿಟಿ ಸೀಸನ್ 2 ನಲ್ಲೂ ಕಾಣಿಸಿಕೊಂಡಿದ್ದ ಮನೀಶಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಒಂದು ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್‌ ಹೆಸರಿನಲ್ಲಿ ವ್ಯಕ್ತಿಯೊಬ್ಬ ತನ್ನನ್ನು ಮೋಸ ಮಾಡಿದ್ದಾಗಿ ಹೇಳಿದ್ದಾರೆ. ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಿದ್ದ ಎಂದು ಆರೋಪಿಸಿದ್ದಾರೆ.

ಬಿಗ್‌ ಬಾಸ್ ತಂಡದ ಸದಸ್ಯನಿಂದ ಕರೆ :

ಸಂದರ್ಶನದಲ್ಲಿ ಮಾತನಾಡಿದ ಮನೀಶಾ ರಾಣಿ, “ನಾನು ಮುಂಬೈನಲ್ಲೂ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ನಾನೂ ಸಂಪೂರ್ಣವಾಗಿ ಅದಕ್ಕೆ ಬಲಿಯಾಗದೇ ಇದ್ರೂ ಬಿಗ್‌ ಬಾಸ್ ತಂಡದ ಸದಸ್ಯ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನ್ನನ್ನು ಬೇರೆ ಬೇರೆ ಕಡೆಗಳಿಗೆ ಕರೆಸಿಕೊಂಡಿದ್ದ” ಎಂದು ಹೇಳಿದ್ದಾರೆ.

“ಮನೆಗೆ ವಾಪಾಸಾಗಿದ್ದ ಸಮಯದಲ್ಲಿ ಅಡಿಷನ್ ಪ್ರಾರಂಭವಾಗಿದೆ ಎಂದು ಮುಂಬೈಗೆ ಕರೆಸಿಕೊಂಡಿದ್ದ. ಹೀಗಾಗಿ ತರಾತುರಿಯಲ್ಲಿ ನಾನು ಮುಂಬೈಗೆ ಬಂದಿದ್ದೆ. ಆದ್ರೆ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದೆ. ಅದಕ್ಕೆ ಆತನಿಗೆ ನನ್ನ ಮೇಲೆ ಕೋಪ ಬಂದಿತ್ತು” ಎಂದು ಹೇಳಿದ್ದಾರೆ.

‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮ ಮೂಲಕ ಸ್ಟಾರ್ ಪಟ್ಟ


ಮೂಲತಃ ಬಿಹಾರದ ನಿವಾಸಿ ಆಗಿರೋ ಮನೀಶಾ ರಾಣಿ ಅವರು ‘ಝಲಕ್ ದಿಖ್ಲಾಜಾ’ 11 ನೇ ಸೀಸನ್ ಗೆಲ್ಲುವ ಮೂಲಕ ಜನಮನ್ನಣೆ ಗಳಿಸಿದರು. ಮನೀಶಾ ರಾಣಿ ಈ ಪ್ರಶಸ್ತಿ ಗೆಲ್ಲುವುದಕ್ಕೂ ಮೊದಲು ಜೀವನದಲ್ಲಿ ಸಾಕಷ್ಟು ಸಂಘರ್ಷ ಅನುಭವಿಸಿದ್ದಾರೆ.
ತಾಯಿಯನ್ನು ಕಳೆದುಕೊಂಡು ತಂದೆಯ ನೆರಳಲ್ಲಿ ಬೆಳೆದ ಮನೀಶಾ ರಾಣಿ ಡ್ಯಾನ್ಸರ್ ಆಗಲು ಅಡ್ಡಿಯಾಗಿದ್ದೇ ಆಕೆಯ ತಂದೆ. ಹೀಗಾಗಿ 12 ನೇ ತರಗತಿಯಲ್ಲಿ ಮನೆ ಬಿಟ್ಟು ಕೊಲ್ಕತ್ತಾ ಸೇರಿದ ಮನಿಷಾ ಮದುವೆ ಸಮಾರಂಭದಲ್ಲಿ ಊಟ ಬಡಿಸುವ ಕೆಲಸ ಆರಂಭಿಸಿದ್ದರು. ಅಲ್ಲಿಂದ ಬಳಿಕ ಬ್ಯಾಗ್‌ರೌಂಡ್ ಡ್ಯಾನ್ಸರ್ ಆಗಿ ಕೆಲಸ ಆರಂಭಿಸಿದ ಮನೀಶಾ ಬಳಿಕ ಅದನ್ನೂ ಬಿಟ್ಟು ಟಿಕ್‌ಟಾಕ್ ಮೂಲಕ ತನ್ನ ನೃತ್ಯವನ್ನು ಜನರಿಗೆ ತೋರಿಸಲು ಆರಂಭಿಸಿದರು.

ಇದನ್ನೂ ಓದಿ : ಶೋಬಿತಾ ಜೊತೆ ಕಾಡಿನಲ್ಲಿ ಕಾಣಿಸಿಕೊಂಡ್ರ ನಾಗಚೈತನ್ಯ..! ಫ್ಯಾನ್ಸ್ ಏನಂದ್ರು..?

ಇದು ಗುಡಿಯಾ ಹಮಾರಿ ಸಭಿ ಪೆ ಭಾರಿ ತಯಾರಕರ ಗಮನಕ್ಕೆ ಬಂದು ಆಕೆಗೆ ಅವಕಾಶ ನೀಡಿದ್ರು. ಅಲ್ಲಿಂದ ಆರಂಭವಾದ ಮನೀಷಾ ರಾಣಿ ಜರ್ನಿ ಇಂದು ಆಕೆಯನ್ನು ಟಿವಿ ಲೋಕದ ಸ್ಟಾರ್ ಆಗಿ ಮಾಡಿದೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗಿರೋ ಮನಿಷಾ 12.5 ಮಿಲಿಯನ್‌ಗಿಂತಲೂ ಹೆಚ್ಚು ಜನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

Continue Reading

DAKSHINA KANNADA

ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ

Published

on

ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃ*ತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.

death

ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹ*ತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.

ಮುಂದೆ ಓದಿ..; ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ

death

Continue Reading

LATEST NEWS

Trending