ಉಡುಪಿಯ ಜಿಲ್ಲೆಯ ಹಿಜಾಬ್ -ಕೇಸರಿ ವಿವಾದ ಸಂಬಂಧ ಪಟ್ಟಂತೆ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನೇತೃತ್ವದಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ಇಂದು ನಡೆದ ಶಾಂತಿ ಸಭೆ ಮುಕ್ತಾಯಗೊಂಡಿದೆ. ಸಭೆಗೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ಬೆಂಬಲಿಸಿದ CFI ಸಂಘಟನೆ ಗೈರಾಗಿದೆ.
ಸಭೆಯಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಣಯಗಳ ಕುರಿತು ಉಡುಪಿ ಶಾಸಕ ರಘಪತಿ ಭಟ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಎಲ್ಲ ಸಂಘಟನೆಯ ಮುಖಂಡರನ್ನು ಸೇರಿಸಿ ಸಭೆ ಕರೆಯಲಾಗಿದೆ.
ಕೋರ್ಟ್ ಆದೇಶ ಬರುವವರೆಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮನವಿ ಮಾಡಲಾಗಿದೆ. ಸಮವಸ್ತ್ರ ಇರುವ ಕಾಲೇಜ್‌ನಲ್ಲಿ ಕೋರ್ಟ್ ಆದೇಶ ಅನ್ವಯಿಸುತ್ತದೆ. ಸಮವಸ್ತ್ರ ಜೊತೆಗೆ ಹಿಜಾಬ್, ಕೇಸರಿ ಧರಿಸುವಂತೆ ಇಲ್ಲ ಅಂತ ಹೇಳಿದ್ದೇವೆ. ಹೈಸ್ಕೂಲ್‌ನಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ.
ಕೋರ್ಟ್ ಆದೇಶ ಯಾರು ಮೀರುದಿಲ್ಲ ಅಂತ ಹೇಳಿದ್ದಾರೆ ಎಂದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಹಿಂದೂ ಜಾಗರಣ ವೇದಿಕೆ, ಜಿಲ್ಲಾ ಮುಸ್ಲಿಮ್ ಒಕ್ಕೂಟ, ಎಸ್ ಡಿ ಪಿಐ, ಸಹಬಾಳ್ವೆ, ಕ್ರೈಸ್ತ ಧರ್ಮಗುರುಗಳು, ಉಡುಪಿ ಕೃಷ್ಣಮಠ, ಕಾಂಗ್ರೆಸ್, ಎಬಿವಿಪಿ ಸೇರಿದಂತೆ ಜಿಲ್ಲಾ ಪೊಲೀಸರು ಭಾಗಿಯಾದರು.