Connect with us

LATEST NEWS

ಉಡುಪಿಯಲ್ಲಿ ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಪಟ್ಟು: ಪ್ರವೇಶ ಸಿಗದೇ ಹಿಂತಿರುಗಿದ ವಿದ್ಯಾರ್ಥಿನಿಯರು

Published

on

ಉಡುಪಿ: ರಾಜ್ಯಾದ್ಯಂತ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಆರಂಭಗೊಂಡಿದ್ದು, ಉಡುಪಿಯಲ್ಲಿ ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಇಬ್ಬರು ವಿದ್ಯಾರ್ಥಿನಿಯರಾದ ಅಲಿಯಾ ಅಸಾದಿ ಹಾಗೂ ರೇಶಮ್ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಕ್ಕೆ ಪರೀಕ್ಷೆ ಬರೆಯದೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ.


ಇದಕ್ಕೂ ಮುನ್ನ ಪರೀಕ್ಷೆಗೆ ಕೆಲವೇ ಕ್ಷಣಗಳು ಬಾಕಿ ಇರುವಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ಪತ್ರ ಪಡೆದುಕೊಂಡು ಪರೀಕ್ಷಾ ಕೇಂದ್ರವಾದ ವಿದ್ಯೋದಯ ಕಾಲೇಜಿಗೆ ಬಂದರು.
ಈ ಸಂದರ್ಭ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದರು. ಆದರೆ ಪ್ರಾಂಶುಪಾಲರು ಅವಕಾಶ ನೀಡಲಿಲ್ಲ. ಪರೀಕ್ಷೆಗೆ ಹಾಜರಾಗುವ ಅವಧಿ‌ ಮುಕ್ತಾಯವಾದ ಕೂಡಲೇ 10.45ಕ್ಕೆ ಸಿಬ್ಬಂದಿ ಪರೀಕ್ಷಾ ಕೇಂದ್ರದಿಂದ ವಿದ್ಯಾರ್ಥಿನಿಯರನ್ನು ಹೊರಗೆ ಕಳಿಸಿದರು. ತಕ್ಷಣ ಹೊರಬಂದ ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.

BANTWAL

Bantwala: ಇತಿಹಾಸದಲ್ಲೇ ಮೊದಲ ಬಾರಿಗೆ 25ನೇ ವಯಸ್ಸಿನ ಯುವಕ ನ್ಯಾಯಾಧೀಶ

Published

on

ಬಂಟ್ವಾಳ: ಕೇವಲ 25 ನೇ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆ ಬರೆದು ಪಾಸ್ ಆದ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೊಬ್ಬ ದಾಖಲೆ ಬರೆದಿದ್ದಾರೆ.

ಕರ್ನಾಟಕದ ನ್ಯಾಯಾಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 25 ವಯಸ್ಸಿನ ಯುವಕನೊಬ್ಬ ನ್ಯಾಯಾಧೀಶರ ಪೀಠ ಅಲಂಕರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬರಿಮಾರಿನ ಅನಿಲ್ ಜಾನ್ ಸಿಕ್ವೇರಾ ಈ ಸಾಧನೆ ಮಾಡಿದ್ದಾರೆ. ಬರಿಮಾರಿನ ಕೃಷಿಕರಾದ ಎವೆರಸ್ಟ್‌ ಸಿಕ್ವೇರಾ ಹಾಗೂ ಐವಿ ಸಿಕ್ವೇರಾ ದಂಪತಿಯ ಪುತ್ರನಾದ ಅನಿಲ್ ಜಾನ್ ಸಿಕ್ವೇರಾ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರಿಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಬರಿಮಾರ್ ಸಂತ ಜೋಸೆಫರ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದ ಇವರು ಪ್ರೌಢ ಶಿಕ್ಷಣವನ್ನು ಮಾಣಿಯ ಕರ್ನಾಟಕ ಹೈಸ್ಕೂಲ್‌ನಲ್ಲಿ ಮುಗಿಸಿದ್ದರು. ಬಳಿಕ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಮುಗಿಸಿದ ಅನಿಲ್ ಜಾನ್ ಸಿಕ್ವೇರಾ ಮಂಗಳೂರಿನ ಎಸ್‌ಡಿಎಂ ‘ಲಾ’  ಕಾಲೇಜಿನಲ್ಲಿ ಬಿಬಿಎ, ಎಲ್ಎಲ್‌ಬಿ ಅಧ್ಯಯನ ಮಾಡಿದ್ದರು. ‘ಲಾ’ ಕಲಿಯುತ್ತಿದ್ದ ಸಮಯದಲ್ಲೇ ಮಂಗಳೂರು ವಕೀಲರ ಸಂಘದ ಜೊತೆಯಲ್ಲೂ ಗುರುತಿಸಿಕೊಂಡಿದ್ದ ಇವರು ಲಾ ಕಂಪ್ಲೀಟ್ ಆದ ಬಳಿಕ ವಕೀಲ ವೃತ್ತಿಯ ಜೊತೆಗೆ ನ್ಯಾಯಾಧೀಶ ಆಗುವ ಕನಸು ಕಂಡಿದ್ದರು. ಹೀಗಾಗಿ ನ್ಯಾಯವಾಧಿಗಳಾದ ದೀಪಕ್ ಡಿಸೋಜಾ,ನವೀನ್ ಪಾಯ್ಸ್ ಅವರ ಮಾರ್ಗದರ್ಶನ ಪಡೆದು ಪರೀಕ್ಷೆ ಬರೆದಿದ್ದಾರೆ. ಕಾಲೇಜು ದಿನಗಳಲ್ಲೇ ನಾಯಕತ್ವವನ್ನು ಮೈಗೂಡಿಸಿಕೊಂಡಿದ್ದ ಅನಿಲ್ ಜಾನ್ ಸಿಕ್ವೇರಾ ಅವರು ಹೈಸ್ಕೂಲ್ ಎಸ್‌ಪಿಎಲ್‌, ಕಾಲೇಜು ಪ್ರಸಿಡೆಂಟ್ ಆಗಿದ್ದು, 2022ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಇಂಡಿಯನ್ ಕ್ಯಾಥೋಲಿಕ್ ಯುತ್‌ ಮೂವ್‌ಮೆಂಟ್‌ನ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಕಳೆದ ವರ್ಷ ಹಾಸನದ ಸಕಲೇಶಪುರ ಮೂಲದ ವಿ.ಆರ್. ಅನುಷಾ ಅತ್ಯಂತ ಕಿರಿಯ ನ್ಯಾಯಾಧೀಶ ಪಟ್ಟ ಪಡೆದುಕೊಂಡಿದ್ದು, ಅದನ್ನು ಇದೀಗ ಮಂಗಳೂರಿನ ಅನಿಲ್ ಜಾನ್ ಸಿಕ್ವೇರಾ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅನಿಲ್ ಅವರ ಈ ಸಾಧನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

Continue Reading

bangalore

ಪತ್ನಿ ಜೊತೆ ರೊಮ್ಯಾಂಟಿಕ್ ಸ್ಟೆಪ್ ಹಾಕಿದ ಡಿ ಬಾಸ್

Published

on

ಇತ್ತೀಚೆಗಷ್ಟೇ ವಿವಾದದಲ್ಲಿ ಸಿಲುಕಿಕೊಂಡ ಚಾಲೆಂಜಿಗ್ ಸ್ಟಾರ್ ದರ್ಶನ್ ಇದೀಗ ಪತ್ನಿ ಜೊತೆ ರೊಮ್ಯಾಂಟಿಕ್ ಡ್ಯಾನ್ಸ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.


ಮೊನ್ನೆಯಷ್ಟೇ ದರ್ಶನ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಈ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿಯೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಪತ್ನಿಯೊಂದಿಗೆ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ ದರ್ಶನ್ ಅವರು ವಿಜಯಲಕ್ಷ್ಮಿ ಜೊತೆ ಕುಣಿಯುತ್ತಿರುವ ವಿಡಿಯೋ ವೈರಲ್ ಕೂಡ ಆಗಿದೆ.

Continue Reading

DAKSHINA KANNADA

ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್: ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಅನುಮಾನ..!

Published

on

ಪುತ್ತೂರು: ದೇರಳಕಟ್ಟೆಯ ಖಾಸಗಿ ಯುನಿರ್ವಸಿಟಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದ ಪುತ್ತೂರಿನ ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ಫೆ. 17 ರಂದು ಉಳ್ಳಾಲ ಠಾಣೆಗೆ ದೂರು ನೀಡಲಾಗಿದ್ದು, ಇದೀಗ ಆಕೆಯ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ದೇರಳಕಟ್ಟೆಯ ಖಾಸಗಿ ವಿವಿಯಲ್ಲಿ ಪಿಹೆಚ್‌ಡಿ ಮಾಡಲು ಅನುಕೂಲವಾಗಲು ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಚೈತ್ರಾ ಅನ್ಯ ಕೋಮಿನ ಯುವಕನ ಜೊತೆ ಸಂಪರ್ಕದಲ್ಲಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪುತ್ತೂರಿನ ಅನ್ಯ ಕೋಮಿನ ಯುವಕನೊಬ್ಬ ಪಿಜಿಗೆ ಭೇಟಿ ನೀಡುತ್ತಿದ್ದ ಎಂಬ ಬಗ್ಗೆ ಮಾಡೂರಿನ ಬಜರಂಗದಳದ ಮುಖಂಡರು ಚೈತ್ರಾ ದೊಡ್ಡಪ್ಪನ ಗಮನಕ್ಕೆ ತಂದಿದ್ದರು. ಡ್ರಗ್‌ ಮಾಫೀಯಾ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳದ ಮುಖಂಡರು ಈ ಬಗ್ಗೆ ಎಚ್ಚರ ವಹಿಸುವಂತೆ ಚೈತ್ರಾ ದೊಡ್ಡಪ್ಪನ ಬಳಿ ಹೇಳಿದ್ದರು. ಇದಾದ ಬಳಿಕ ಚೈತ್ರಾ ನಾಪತ್ತೆಯಾಗಿದ್ದು, ಆಕೆ ಪುತ್ತೂರಿನ ಶಾರೂಕ್ ಶೇಖ್‌ ಎಂಬಾತನ ಜೊತೆ ಹೋಗಿರುವ ಬಲವಾದ ಅನುಮಾನ ಮೂಡಿದೆ. ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಶಾರೂಕ್‌ ಶೇಖ್‌ ಗೆ ಚೈತ್ರಾ ಪುತ್ತೂರಿನಲ್ಲೇ ಪರಿಚಿತಳಾಗಿರುವ ಸಾದ್ಯತೆ ಇದೆ. ಪುರುಷರಕಟ್ಟೆ ಹಾಗೂ ಕೂರ್ನಡ್ಕ ಸಮೀಪದ ಪ್ರದೇಶವಾಗಿದ್ದು, ಇಲ್ಲೇ ಇಬ್ಬರಿಗೂ ಪರಿಚಯವಾಗಿತ್ತು ಎಂದು ಅನುಮಾನ ವ್ಯಕ್ತವಾಗಿದೆ.

ಐಟಿಟಿ ಕಲಿತಿದ್ದ ಶಾರೂಕ್‌ ಶೇಖ್ ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿದ್ದು ಕತಾರ್ ಜೈಲಿನಲ್ಲಿ ಒಂದು ವರ್ಷ ಶಿಕ್ಷೆ ಅನುಭವಿಸಿದ್ದ ಎಂದು ತಿಳಿದು ಬಂದಿದೆ. ಚೈತ್ರಾ ಹೆಬ್ಬಾರ್‌ಗೆ ಗಾಂಜಾದ ರುಚಿ ತೋರಿಸಿದ್ದ ಶಾರೂಕ್‌ ಶೇಖ್‌ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿರುವ ಅನುಮಾನ ಇದೆ. ಪಿಜಿಯಿಂದ ತೆರಳಿದ್ದ ಚೈತ್ರಾ ಹೆಬ್ಬಾರ್ ಸುರತ್ಕಲ್ ಎಟಿಎಂ ಒಂದರಿಂದ ಹಣ ಡ್ರಾ ಮಾಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಚೈತ್ರಾ ಅಕೌಂಟ್‌ನಲ್ಲಿ ಲಕ್ಷಾಂತರ ರೂಪಾಯಿ ಹಣ ಇರುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ ಪೊಲೀಸರು ಅಕೌಂಟ್ ಬ್ಲಾಕ್ ಮಾಡಿಸಿದ್ದಾರೆ. ಇದೊಂದು ಲವ್ ಜಿಹಾದ್ ಪ್ರಕರಣವೆಂದು ಆರೋಪಿಸಿರುವ ಬಜರಂಗದಳ ಚೈತ್ರಾಳನ್ನು ಎರಡು ದಿನದಲ್ಲಿ ಪತ್ತೆ ಹಚ್ಚಲು ಪೊಲೀಸರಿಗೆ ಗಡುವು ನೀಡಿದೆ.

Continue Reading

LATEST NEWS

Trending