Saturday, July 2, 2022

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿನ ಮಧ್ಯೆಯೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು-ಹೊರಕಳುಹಿಸಿದ ಕಾಲೇಜು ಆಡಳಿತ ಮಂಡಳಿ

ಉಪ್ಪಿನಂಗಡಿ: ಹೈಕೋರ್ಟ್ ತೀರ್ಪಿನ ಮಧ್ಯೆಯೂ ಮತ್ತೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದ ಘಟನೆ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ನಡೆದಿದೆ.


ಇಂದು ಪಿಯು ಪೂರ್ವ ಸಿದ್ದತಾ ಪರೀಕ್ಷೆಗೆ ಹಾಜರಾಗಲು ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಈ ವೇಳೆ ಕಾಲೇಜು ಆಡಳಿತ ಮಂಡಳಿ ತರಗತಿ ಪ್ರವೇಶ ನಿರಾಕರಿಸಿದೆ. ಇದರಿಂದ ಆಕ್ರೋಶಗೊಂಡ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿದ್ದಾರೆ.

ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅಡಚಣೆಯಾಗುವ ರೀತಿ ಕಾಲೇಜು ಬಳಿ ಜಮಾವಣೆಯಾದಾಗ ಸ್ಥಳಕ್ಕೆ ಬಂದ ಮುಸ್ಲಿಂ ಸಮುದಾಯದ ನಾಯಕರ ಮೂಲಕ ವಿದ್ಯಾರ್ಥಿಗಳ ಮನವೊಲಿಕೆ ನಡೆಸಿದ್ದಾರೆ.

ನಂತರ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಕ್ಯಾಂಪಸ್ ನಿಂದ ಹೊರಕಳುಹಿಸಿದೆ. ಕೊನೆಗೆ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ವಾಪಾಸ್ ತೆರಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಇಂದು ಮಧ್ಯಾಹ್ನ ಸುಳ್ಯದಲ್ಲಿ ಮತ್ತೆ ಕಂಪಿಸಿದ ವಸುಂಧರೆ

ಸುಳ್ಯ: ದಕ್ಷಿಣ ಕನ್ನಡದ ಸುಳ್ಯ ಮತ್ತು ಮಡಿಕೇರಿ ಭಾಗದಲ್ಲಿ ಶನಿವಾರ ಮಧ್ಯಾಹ್ನ 1.21 ಕ್ಕೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.ಜೂ. 25 ರಂದು ಕರಿಕೆ‌‌ ಸಮೀಪ, ಜೂ. 28 ರಂದು ಎರಡು ಬಾರಿ,...

ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಕರಾವಳಿ ಸಂತರ ಸಮಾಗಮ

ಉಡುಪಿ: ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ವೃಂದಾವನ ಸನ್ನಿಧಿಯಲ್ಲಿ ಶುಕ್ರವಾರ (ಜು.1) ಕರಾವಳಿ ಸಂತರ ಸಮಾಗಮ ವೈಭವದಿಂದ ನೆರವೇರಿತು.ಒಡಿಯೂರು ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ,ಬೆಂಗಳೂರು ಆರ್ಯ ಈಡಿಗ...

ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಹಾಕಿದ್ದ ಮತ್ತೋರ್ವನ ಕೊಲೆ..!

ಮುಂಬೈ: ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯ ಲಾಲ್​ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.ಪ್ರವಾದಿ ಮುಹಮ್ಮದ್​ ಕುರಿತು ಹೇಳಿಕೆ...