ಉಡುಪಿ: ಪಿಯು ಕಾಲೇಜಿನಲ್ಲಿ ಹಿಜಾಬ್ ಧಾರಣೆ ಬಗ್ಗೆ ಹೈಕೋರ್ಟ್‌ನ ಆದೇಶದ ನಂತರ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದು, ಕಾಲೇಜು ಪ್ರಿನ್ಸಿಪಾಲ್ ತರಗತಿ ಪ್ರವೇಶಿಸಲು ಅನುಮತಿ ನೀಡಿಲ್ಲ.
ಇಂದು ಬೆಳಗ್ಗೆ 9 ಮಂದಿ ವಿದ್ಯಾರ್ಥಿನಿಯರಿಂದ ಹಿಜಾಬ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಹಿಜಾಬ್‌ನೊಂದಿಗೆ ತರಗತಿ ಪ್ರವೇಶಿಸಲು ಅವಕಾಶವಿಲ್ಲ ಎಂದು ಪ್ರಿನ್ಸಿಪಾಲ್ ತಿಳಿಸಿದ್ದಾರೆ.
ಆಗ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿರಿಸಿ ತರಗತಿಗೆ ಹಾಜರಾಗಿದ್ದಾರೆ. 7 ಮಂದಿ ವಾಪಾಸಾಗಿದ್ದಾರೆ.
ಹೈಕೋರ್ಟ್‌ನ ಆದೇಶ ಪಿಯು ಕಾಲೇಜಿಗೆ ಮಾತ್ರ ಆದರೆ ಇವರು ಡಿಗ್ರಿ ಕಾಲೇಜಿಗೂ ಈ ಆದೇಶ ಅನ್ವಯಿಸುತ್ತಿದ್ದಾರೆ. ಹಿಜಬ್ ನಮ್ಮ ಜೀವನದ ಅವಿಭಾಜ್ಯ ಅಂಗ. ನಮಗೆ ಪರೀಕ್ಷೆಯು ಬೇಕು ಹಿಜಾಬ್ ಕೂಡ ಬೇಕು. ಇದರಿಂದ ನಮಗೆ ಬೇಸರವಾಗಿದೆ.
ಪ್ರಾಂಶುಪಾಲರ ನಮಗೆ ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು ಹೇಳಿದ್ದಾರೆ.