Monday, May 23, 2022

ಜ.9 ಕ್ಕೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ : ಆನೇಕ ಮಹತ್ವದ ಯೋಜನೆಗಳಿಗೆ ಚಾಲನೆ..!

ಮಂಗಳೂರು : ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿಯವರು ಜನವರಿ 9, 2022 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.

ಈ ಸಂದರ್ಭ ಜಿಲ್ಲೆಯಲ್ಲಿ ವಿವಿಧ ಮಹತ್ವದ ಯೋಜನೆಗಳಿಗೆ ಶಿಲನ್ಯಾಸ ಮಾಡಲಿದ್ದಾರೆ, ರಾಷ್ಟ್ರೀಯ ಹೆದ್ದಾರಿ NH-169 ಚತುಷ್ಪಥ ಬಿಕರ್ನಕಟ್ಟೆ-ಸಾಣೂರು ರಾಷ್ಟ್ರೀಯ ಹೆದ್ದಾರಿ ಹಾಗೂ NH-75 ರ ಷಟ್ಪಥ ಕಲ್ಲಡ್ಕ ಪ್ಲೈ ಓವರ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಜೊತೆಗೆ ಅಂದೇ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಆಡ್ಡಹೊಳೆಯಿಂದ-ಪೆರಿಯಶಾಂತಿ ಹಾಗೂ ಪೆರಿಯಶಾಂತಿ- ಬಂಟ್ವಾಳ ಕ್ರಾಸ್ ನಡುವಿನ ಎರಡು ಪ್ಯಾಕೇಜ್ ನ ಕಾಮಗಾರಿಗಳಿಗೂ ಮಾನ್ಯ ಸಚಿವರು ಪುನರ್ ಚಾಲನೆ ನೀಡುವ ಮೂಲಕ ಮಹತ್ವದ ಕಾಮಗಾರಿಗಳಿಗೆ ವೇಗ ನೀಡಲಿದ್ದಾರೆ ಎಂದು ಸಂಸದರು ಹಾಗೂ ಬಿಜೆಪಿ ರಾಜ್ಯಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಜಿರೆ SDM ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ನಿಧನ

ಬೆಳ್ತಂಗಡಿ: ಉಜಿರೆಯ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ (66) ಅನಾರೋಗ್ಯದಿಂದಾಗಿ ನಿನ್ನೆ ಮಧ್ಯರಾತ್ರಿ ಸಿಂಗಾಪುರದಲ್ಲಿ ನಿಧನರಾಗಿದ್ದಾರೆ.ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ...

ಆಟೋ ರಿಕ್ಷಾ- ಪಿಕಪ್ ಢಿಕ್ಕಿ: ಓರ್ವನಿಗೆ ಗಾಯ

ಬಂಟ್ವಾಳ: ಆಟೋ ರಿಕ್ಷಾ ಮತ್ತು ಪಿಕಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಎಂಬಲ್ಲಿ ನಿನ್ನೆ ನಡೆದಿದೆ.ಅಪಘಾತದಿಂದಾಗಿ ಆಟೋ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು...

ಉಡುಪಿ: ಭಾರಿ ಅಲೆಗೆ ದೋಣಿ ಮುಳುಗಡೆ-ಐವರು ಮೀನುಗಾರರ ರಕ್ಷಣೆ

ಉಡುಪಿ: ಭಾರಿ ಗಾತ್ರದ ಅಲೆಗೆ ದೋಣಿಯೊಂದು ಮುಳುಗಡೆಯಾದ ಘಟನೆ ಉಡುಪಿ ಜಿಲ್ಲೆಯ ಶಿರೂರಿನ ಕಡಲ ತೀರದಲ್ಲಿ ನಡೆದಿದೆ. ದೋಣಿಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಕಡಲ ತೀರದಿಂದ ಆಳ...