ಬಂಟ್ವಾಳ: ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾದ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಮತ್ತು ಬಾಲಕಿ ನಡುವೆ ನಡೆದ ನಡೆದ ಪ್ರಣಯ ಪ್ರಕರಣವೀಗ ಫೋಕ್ಸೋ ಪ್ರಕರಣ ದಾಖಲಾಗುವ ಹಂತಕ್ಕೆ ಬಂದಿದೆ.
15ವರ್ಷದ ಹತ್ತನೇ ತರಗತಿಯಲ್ಲಿ ಕಲಿಯುವ ಸಂತ್ರಸ್ತೆ ತನ್ನ ತಂದೆ ತಾಯಿ ಅಕ್ಕಳೊಂದಿಗೆ ವಾಸವಾಗಿದ್ದು, ಮೊಬೈಲ್‌ನ ಇನ್‌ಸ್ಟ್ರಾಗ್ರಾಂ ಮೂಲಕ ಸಂತ್ರಸ್ತೆಗೆ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನ ಜೊತೆ ಪರಿಚಯವಾಗಿದೆ. ನಂತರ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಆಗಾಗ ಸಂತ್ರಸ್ತೆಯ ಮನೆಗೆ ಬಂದು ಹೋಗುತ್ತಿದ್ದನು.
ಸಂತ್ರಸ್ತೆ ಮನೆಯಲ್ಲಿದ್ದ ಸಮಯ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಸಂತ್ರಸ್ತೆಗೆ ಫೋನ್ ಮುಖೇನ ಕರೆ ಮಾಡಿ ರಾತ್ರಿ ಸಂತ್ರಸ್ತೆಗೆ ಫೋನ್ ಕರೆ ಮಾಡಿ ರಾತ್ರಿ ಸಂತ್ರಸ್ತೆಯ ಮನೆಗೆ ಬಂದಿದ್ದು ಆತನ ಜೊತೆ ಬಾಲಕಿ ಸ್ಕೂಟರ್‌ನಲ್ಲಿ ತೆರಳಿದ್ದಾಳೆ.
ಈ ಸಂದರ್ಭ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಮನೆಗೆ ಬಿಟ್ಟು ಹೋಗಿದ್ದಾನೆ. ಮನೆಯವರು ವಿಚಾರಿಸಿದ ಬಳಿಕ ಸಂತ್ರಸ್ತೆ ಬಾಲಕಿ ಠಾಣೆ ದೂರು ನೀಡಿದ್ದಾಳೆ.
ಮನೆಯವರು ವಿಚಾರಿಸಿದ ಬಳಿಕ ಸಂತ್ರಸ್ತೆ ಬಾಲಕಿ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಾಗಿದ್ದು ಸಂಘರ್ಷಕ್ಕೊಳಗಾದ ಬಾಲಕನನ್ನು ಬಾಲನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ.